ರಾಯಚೂರು/ಲಿಂಗಸೂಗೂರು ನಗರದ ಮಾತೆ ಮಾಣಿಕೇಶ್ವರಿ ಆಶ್ರಮದಲ್ಲಿ ನಿನ್ನೆ ವನಸಿರಿ ಫೌಂಡೇಶನ್ ವತಿಯಿಂದ ಪ್ರಾಣಿ ಪಕ್ಷಿಗಳ ಸಂಕುಲ ಉಳಿವಿಗಾಗಿ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಅಧ್ಯಕ್ಷರಾದ ರಾಜಶೇಖರ ಪಾಟೀಲ ವನಸಿರಿ ಫೌಂಡೇಶನ್ ಲಿಂಗಸೂಗೂರು ತಾಲೂಕ ಘಟಕದ ವತಿಯಿಂದ ಇಂದು ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆಗಳನ್ನು ಮಾತಾ ಮಾಣಿಕೇಶ್ವರಿ ಮಠದಲ್ಲಿ ಕಟ್ಟುತ್ತಿದ್ದೇವೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಸಂಕುಲ ಉಳಿವಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ನಂತರ ಆಶ್ರಮದ ಸೇವಕರಾದ ರವೀಂದ್ರನಾಥ ಅವರು ಮಾತನಾಡಿ ವನಸಿರಿ ಫೌಂಡೇಶನ್ ಹಮ್ಮಿಕೊಂಡಿರುವ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ತುಂಬಾ ಶ್ಲಾಘನೀಯ ಇದನ್ನು ಎಲ್ಲರೂ ಮಾಡಬೇಕು.ಈ ಕಾರ್ಯ ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ ಇನ್ನಷ್ಟು ಕಾರ್ಯಗಳನ್ನು ವನಸಿರಿ ತಂಡ ಮಾಡಲಿ ಎಂದು ತಾಯಿ ಗುರುಮಾತೆಯಾಗಿರುವ ಮಾತೆ ಮಾಣಿಕೇಶ್ವರಿ ಕೇಳಿಕೊಳ್ಳುತ್ತೇನೆ ಎಂದರು.
ನಂತರ ಲಿಂಗಸೂಗೂರು ಅಪ್ಪಾಜಿ ಕೆರಿಯರ್ ಅಕಾಡೆಮಿಯ ನಿರ್ದೇಶಕರಾದ ಕಟ್ಟಯ್ಯ ಬ.ಹಿರೇಮಠ ಅವರು ಮಾತನಾಡಿ ಅಮರೇಗೌಡ ಮಲ್ಲಾಪೂರ ಅವರು ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ನಿರ್ಮಿಸಿ ರಾಜ್ಯದ ನಾನಾ ಭಾಗಗಳಲ್ಲಿ ನೀರುಣಿಸುವ ಕಾರ್ಯ ತುಂಬಾ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಲಿಂಗಸೂಗೂರು ತಾಲೂಕ ಘಟಕದ ಅಧ್ಯಕ್ಷರಾದ ರಾಜಶೇಖರ ಪಾಟೀಲ,ಆಶ್ರಮದ ಸೇವಕರಾದ ರವೀಂದ್ರನಾಥ,ಶಿಕ್ಷಕರಾದ ನಾಗರಾಜ ಮಾಂಡ್ರೆ,ಅಪ್ಪಾಜಿ ಕೆರಿಯರ್ ಅಕಾಡೆಮಿಯ ನಿರ್ದೇಶಕರಾದ ಕಟ್ಟಯ್ಯ ಬ ಹಿರೇಮಠ,ಹಿರಿಯರಾದ ವೆಂಕೋಬ ಚಿಲ್ಕರಾಗಿ,ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ ಹಾಗೂ ಆಶ್ರಮದ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಿದರು.