ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಜನಪ್ರಿಯ ಕನ್ನಡಪರ ಹೋರಾಟಗಾರ
ಕೃಷ್ಣ ರಾಜ ಕ್ಷೇತ್ರದ ಮನೆ ಮಗ,
ರಾಜ್ಯ ಪ್ರಶಸ್ತಿ ಪುರಸ್ಕೃತ ದಿವಂಗತ ನ .ನಾಗಲಿಂಗ ಸ್ವಾಮಿ ಅವರ ಪುತ್ರ ತೇಜಸ್ವಿ ನಾಗಲಿಂಗ ಸ್ವಾಮಿ.
ಕೃಷ್ಣ ರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ತೇಜಸ್ವಿ ನಾಗಲಿಂಗಸ್ವಾಮಿ ಕೂಡಾ ಕನ್ನಡ ಪರ ಹೋರಟಗಾರರು.
ಹಲವಾರು ಅಭಿಮಾನಿಗಳೊಂದಿಗೆ ಬೆಳಿಗ್ಗೆ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ತೇಜಸ್ವಿ ನಂತರ ವೀರಗಾಸೆ ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಚೇರಿವರೆಗೆ ಬಂದರು.
ನೂರಾರು ಬೆಂಬಲಿಗರು ಕನ್ನಡಪರ ಹೋರಾಟಗಾರರು,ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ತಮಟೆ ಸದ್ದಿಗೆ ಯುಕರು ಕುಣಿದು ಗಮನ ಸೆಳೆದರೆ ಕೆಲ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಂತರ ತೇಜಸ್ವಿ ಅವರು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.