ರಾಯಚೂರು. ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂದ್ಯ ಆಶ್ರಮದಲ್ಲಿ ಗಂಗಾವತಿ ಹೈಲಿ ಕುಟುಂಬದ ವತಿಯಿಂದ ” ನೊಂದವರ ನಾಡಿಮಿಡಿತ”ಕಾರ್ಯಕ್ರಮದಡಿಯಲ್ಲಿ ಶ್ರೀಮತಿ ಲಕ್ಷ್ಮಿ ಶ್ರೀ ವಸಂತಕುಮಾರ ಈ ದಂಪತಿಗಳ ಪುತ್ರರಾದ ಕು. ಅಯಾನ್ ಅವರ ಹುಟ್ಟು ಹಬ್ಬ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಇಡೀ ದಿನ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾರತ್ ಫೈನಾನ್ಸ್ ಕುಷ್ಟಗಿ ಶಾಖೆಯ ಸ್ಥಾಪಕರಾದ ವಸಂತಕುಮಾರ ಮಾತನಾಡಿ ನೆಲೆ ಇಲ್ಲದ ಅನಾಥರಗಳಿಗೆ ನೆಲೆ ಕಲ್ಪಿಸಿಕೊಟ್ಟ ಕಾರುಣ್ಯ ಆಶ್ರಮ ಕರುಣೆಯ ಮಂದಿರವಾಗಿದೆ ಸಮಾಜದಿಂದ ತಿರಸ್ಕೃತ ಗೊಂಡಿರುವ ಹಿರಿಯ ಜೀವಿಗಳ ಸೇವೆ ಭಗವಂತನ ಸಮಾನವಾದುದು ಕರುಣೆಯ ಕರುಣಾಮಯಿ ಮಂದಿರವಾದ ಕಾರುಣ್ಯ ಆಶ್ರಮ ನಮ್ಮ ನಾಡಿನ ಕರುಣೆಯ ಕುಟುಂಬವಾಗಿದೆ. ಇಂತಹ ಹಿರಿಯರ ಮಧ್ಯೆ ನನ್ನ ಮಗನ ಹುಟ್ಟುಹಬ್ಬ ಕಾರ್ಯಕ್ರಮ ನಮ್ಮೆಲ್ಲ ಬಂಧು ಬಳಗಕ್ಕೆ ಬಹಳ ಸಂತೋಷವನ್ನುಂಟು ಮಾಡಿದೆ ಎಂದು ಮಾತನಾಡಿದರು. ನಂತರ ಮಾತನಾಡಿದ ಪತ್ರಕರ್ತರಾದ ಪಂಪಾಪತಿ ಹೂವಿನ ಬಾವಿ ವಸಂತಕುಮಾರ ಅವರ ಕುಟುಂಬ ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವುದು ವಿವಿಧ ಸಮಾಜ ಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಅದೆಷ್ಟೋ ನೊಂದವರ ಬಾಳಿಗೆ ಬೆಳಕಾಗಿದೆ ಇಂತಹ ಕರುಣಾಮಯಿ ಕಾರುಣ್ಯ ಆಶ್ರಮದಲ್ಲಿ ನೊಂದವರ ನಾಡಿಮಿಡಿತ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಗಂಗಾವತಿಯ ಹೈಲಿ ಕುಟುಂಬದ ಲಕ್ಷ್ಮಿ ವಸಂತಕುಮಾರ. ಕು. ಅಯಾನ್. ಚಂದಮ್ಮ ಶರಣಮ್ಮ ಸೋನು ಸುಧಾ ನಾಗರಾಜ ಗಂಗಮ್ಮ. ಹಾಗೂ ಪತ್ರಕರ್ತರುಗಳಾದ ಪಂಪಾಪತಿ ಹೂವಿನಬಾವಿ.ಲಕ್ಷ್ಮಣ ಕುರುಕುಂದ. ಶಿವಕುಮಾರ ಗೊರೆಬಾಳ. ದುಗ್ಗಪ್ಪ ಮಲ್ಲಾಪುರ. ಕಾರುಣ್ಯ ಅಕ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ.ಇಂದುಮತಿ.ಮರಿಯಪ್ಪ. ಶರಣು ಸ್ವಾಮಿ. ಶರಣಮ್ಮ ಅನೇಕರು ಭಾಗವಹಿಸಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.