ರಬಕವಿ-ಬನಹಟ್ಟಿ:ರಾಜ್ಯದಾದ್ಯಂತ ಮುಸ್ಲಿಂ ಬಾಂಧವರು ಇಂದು ರಂಜಾನ್ ಹಬ್ಬ ಅತಿ ಸಡಗರ ಸಂಭ್ರಮದಿಂದ ಆಚರಿಸಿದರು ಹಬ್ಬದ ಪ್ರಯುಕ್ತ ಬನಹಟ್ಟಿ ನಗರದ ಲಕ್ಷ್ಮೀ ಬಡಾವಣೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಾಮೂಹಿಕ ನಮಾಜ್ ಬೆಳಗ್ಗೆ 9.೦0 ರಿಂದ 10.೦೦ ರವರೆಗೆ ಒಂದು ಗಂಟೆ ಕಾಲ ನಡೆದಿದ್ದು ನಮಾಜ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ರಂಜಾನ್ ಮುಸ್ಲಿಮರ ದೊಡ್ಡ ಹಬ್ಬ ರಂಜಾನ್ ಹಬ್ಬದ ಪ್ರಯುಕ್ತ ಹೊಸ ಬಟ್ಟೆಗಳನ್ನ ಧರಿಸಿ,ಈ ದಿನ ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿ ಪ್ರೀತಿಯ ಶುಭಾಶಯವನ್ನು ಕೋರಿದರು ರಂಜಾನ್ ಆಚರಣೆಯ ದಿನಾಂಕ ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ ಚಂದ್ರನ ದರ್ಶನವಾದ ಬಳಿಕ ರಂಜಾನ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಹಬ್ಬದ ಹಿನ್ನೆಲೆ ಮುಸಲ್ಮಾನರು ನಿನ್ನೆವರೆಗೂ ಉಪವಾಸ ರೋಜಾ ಇದ್ದರು ಇವತ್ತಿನ ದಿನ ನಮಾಜು ಮಾಡಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿದರು.
ಹಿಂದೂ ಬಾಂಧವರು ಕೂಡಾ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರುತ್ತಿರುವುದು ವಿಶೇಷವಾಗಿತ್ತು
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನ ಝುಬೇರ್ ಸಾಬ್ ಅತ್ತಾರ್,
ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಬಾಳ್ವೆಯಿಂದ ಬಾಳಬೇಕು ಎಂದು ಕೋರಿದರು ಹಾಗೂ ರಂಜಾನ್ ತಿಂಗಳಲ್ಲಿ ಉಪವಾಸ ಭಕ್ತಿಯಿಂದ ಆಚರಿಸಿದ್ದು, ರಂಜಾನ್ ತಿಂಗಳು ಇಲ್ಲದ ದಿನಗಳಲ್ಲಿ ಕೂಡಾ ಆ ಅಲ್ಲಾಹನಲ್ಲಿ ಭಯ ಭಕ್ತಿಯಿಂದ ಇರಬೇಕು ಎಂದು ಕೋರಿದರು.
ಮೌಲಾನಾ ರಿಯಾಜ್ ಅಹಮದ್ ಹಲಗಲಿ ಅವರು ನಮಾಜ್ ನಿರ್ವಹಣೆಯ ಬಗ್ಗೆ ತಿಳಿಸಿದರು
ಮೌಲಾನಾ ಆಸೀಫ್ ಅತ್ತಾರ್ ಅವರು ನಮಾಜವನ್ನು ನಿರ್ವಹಿಸಿ ಖೂತುಬಾವನ್ನು ಓದಿದರು ಕೊನೆಯದಾಗಿ ಮೊಲಾನಾ ಅನ್ವರ್ ಸಬ್ ದುವಾವನ್ನು ಮಾಡಿದರು.
ವರದಿ:ಮಹಿಬೂಬ ಮ ಬಾರಿಗಡ್ಡಿ