ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ 6 ರಿಂದ 7 ಕಿಲೋಮೀಟರ್ ದೂರದಲ್ಲಿರುವ ಒಂದು ಪುಟ್ಟ ಗ್ರಾಮವಾದ ಸಿಂಗಟಗೆರೆ
ಇಲ್ಲಿ ಒಟ್ಟು 1150 ಮತದಾರರಿದ್ದಾರೆ
ಇಲ್ಲಿ ರೈತಾಪಿ ವರ್ಗದವರು ತಮ್ಮ ಹೊಲಗಳಿಗೆ ಹೋಗುವ ರಸ್ತೆ ಮತ್ತು ದನಗಳಿಗೆ ಬೇಸಿಗೆಕಾಲದಲ್ಲಿ ಕುಡಿಯಲು ಕೆರೆಯ ಅಭಿವೃದ್ಧಿ
ಮಾಡಿಲ್ಲವೆಂದು ಮತ್ತು ಕೆರೆ ಅಭಿವೃದ್ಧಿಗೆ 25 ಲಕ್ಷ ರಸ್ತೆ ಅಭಿವೃದ್ಧಿಗೆ 25 ಲಕ್ಷ ಅನುದಾನ ಬಿಡುಗಡೆಯಾದರೂ ಒಬ್ಬ ವ್ಯಕ್ತಿಯಿಂದ ಸರ್ಕಾರಿ ಜಮೀನನ್ನು ಮತ್ತು ಕೆರೆಯನ್ನು ಅಭಿವೃದ್ಧಿ ಮಾಡದೆ ಮಾಡದೇ ಇರುವುದಕ್ಕೆ ಕಾರಣವಾಗಿದೆ ಏಕೆಂದರೆ ಕೆರೆ ನನ್ನ ಸ್ವತ್ತು ಎಂದು ನನ್ನ ಜಮೀನಿನಲ್ಲಿದೆ ಎಂದು ಅಭಿವೃದ್ಧಿ ಮಾಡುವುದಕ್ಕೆ ಅವಕಾಶ ನೀಡುತ್ತಿಲ್ಲವೆಂದು ಇದರ ಬಗ್ಗೆ ಹಲವಾರು ಬಾರಿ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸಮಸ್ಯೆಯನ್ನು ಬಗೆಹರಿಸಿಲ್ಲ ಆದ್ದರಿಂದ ನಾವುಗಳು ಇಂದು ಮತದಾನವನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಗ್ರಾಮಸ್ಥರು ನಮ್ಮ ವಾಹಿನಿಯ ಜೊತೆ ಮಾತನಾಡಿದರು ಈ ಸಂದರ್ಭದಲ್ಲಿ
ಗ್ರಾಮಸ್ಥರಾದ ರುದ್ರಪ್ಪ ಗ್ರಾಮ ಪಂಚಾಯತಿ ಸದಸ್ಯರು ಮಾಜಿ ಚಂದ್ರ ಶೇಖರ ಸಾಲಿಮಠ ರೈತರು
ಬಸವರಾಜ ರೈತರು ಹರೀಶ್ ಚಂದ್ರ ಪ್ಪ ಮಂಜಪ್ಪ ನಾಗರಾಜ್ ಹಾಗೂ ಇತರರು ಹಾಜರಿದ್ದರು.
ವರದಿ ಪ್ರಭಾಕರ ಹೊನ್ನಾಳಿ