ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿಶ್ವ ಭೂಮಿ ದಿನದ ಅಂಗವಾಗಿ ಗಿಡಮರಗಳಿಗೆ ನೀರುಣಿಸುವುದು ಮತ್ತು ಪಕ್ಷಿಗಳಿಗೆ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಪಕ್ಷಿಗಳ ಅರವಟ್ಟಿಗೆ ಕಟ್ಟಲಾಯಿತು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ಸಂಘದ ಸದಸ್ಯರಾದ ಶಿವರಾಜ ಹೂಗಾರ ಮಾತನಾಡಿ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಅವರ ಸಾರಥ್ಯದಲ್ಲಿ ವನಸಿರಿ ಫೌಂಡೇಶನ್ ತಂಡ ಅದ್ಭುತವಾದ ಕಾರ್ಯನಿರ್ವಹಿಸುತ್ತಿದೆ ನಮ್ಮಂತಹ ಯುವಕರನ್ನು ಪರಿಸರದಡೆಗೆ ಸೆಳೆಯಲು ಹಾಗೂ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸಲು ಅರವಟ್ಟಿಗೆ ನಿರ್ಮಾಣ ಮಾಡಿ ವಿನೂತನವಾಗಿ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಈ ಕಾರ್ಯ ಎಲ್ಲಾ ಯುವಕರಿಗೆ ಮಾದರಿಯಾಗಿದೆ ಎಂದರು.
ನಂತರ ಇನ್ನೋರ್ವ ಸದಸ್ಯರಾದ ವೀರಭದ್ರಯ್ಯ ಸ್ವಾಮಿ ಮಾತನಾಡಿ ನಮ್ಮ ಶಾಲೆಯಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಸಸಿಗಳನ್ನು ನಮ್ಮ ಹಳೆಯ ವಿದ್ಯಾರ್ಥಿಗಳಾದ ನಾವುಗಳೆಲ್ಲರೂ ಪಾಲನೆ ಪೋಷಣೆ ಮಾಡಿದ್ದೇವೆ.ಇಂದು ಈ ಗಿಡಗಳು ಹೆಮ್ಮರವಾಗಿ ಬೆಳೆದಿರುವುದು ತುಂಬಾ ಸಂತೋಷವಾಗುತ್ತಿದೆ ಮತ್ತು ಅದೇ ಗಿಡಗಳಿಗೆ ಅರವಟ್ಟಿಗೆಗಳನ್ನು ಕಟ್ಟುತ್ತಿದ್ದೇವೆ.ಇದಕ್ಕೆಲ್ಲ ಪ್ರೇರಣೆ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು. ನಮ್ಮ ಪರಿಸರ ಕಾಳಜಿ ಗುರುತಿಸಿ ನಮ್ಮ ಶಾಲೆಯಲ್ಲಿ ಹಲವಾರು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂದೇನೂ ಕೂಡಾ ಸಾಗುತ್ತೇವೆ ಅವರ ಪ್ರೇರಣೆಯಿಂದ ಇಂದು ನಾವುಗಳು ಕೂಡಾ ಪಕ್ಷಿಗಳಿಗೆ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಅರವಟ್ಟಿಗೆ ಕಟ್ಟಿ ನೀರುಣಿಸುತ್ತಿದ್ದೇವೆ.ಈ ಗಿಡಗಳ ಪಾಲನೆ ಪೋಷಣೆಯಲ್ಲಿ ಅತ್ಯಂತ ಉತ್ಸಾಹಿಗಳಾಗಿ ತೊಡಗಿರುವ ನಮ್ಮ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತರಾದ ಚನ್ನಪ್ಪ ಅವರನ್ನು ವನಸಿರಿ ತಂಡದಲ್ಲಿ ಸೇರಿಸಿಕೊಂಡು ಅವರಿಗೆ ಒಂದು ಸ್ಥಾನವನ್ನು ನೀಡಿರುವುದು ನಮಗೆಲ್ಲ ತುಂಬಾ ಹೆಮ್ಮೆ ಅನಿಸುತ್ತಿದೆ ಮತ್ತು ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ ಅವರಿಗೆ ಹಳೆಯ ವಿದ್ಯಾರ್ಥಿಗಳಿಂದ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಾಮಾಜಿಕ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ,ಹಳೆಯ ವಿದ್ಯಾರ್ಥಿಗಳಾದ ವೀರಭದ್ರಯ್ಯ ಸ್ವಾಮಿ, ಶಿವರಾಜ ಹೂಗಾರ,ಉಮೇಶ ಮಾಲಿ ಪಾಟೀಲ, ಕಾಳಪ್ಪ,ಶರಣೇಗೌಡ,ಚನ್ನಬಸವ,ಬಸವರಾಜ, ನಾಗರಾಜ,ಗಂಗಾಧರ,ದುರಗೇಶ,ಅಜೆಯಕುಮಾರ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.