ಬೀದರ್ ಜಿಲ್ಲೆಯ ಔರಾದ ಪತ್ರಿ ಸ್ವಾಮಿ ಕಾಲೇಜಿನ ವಿಜ್ಞಾನ ವಿಭಾಗದ ಒಟ್ಟು 93 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದು 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಲಾವಣ್ಯ ತಂದೆ ರಾಜ್ ಕುಮಾರ್ ಖರಾಬೆ 576/600 ಅಂಕಗಳು ಪಡೆದು 96% ಪ್ರತಿಶತ ಗಳಿಸಿ ಕಾಲೇಜಿನ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ. ಕಾಲೇಜಿಗೆ ದ್ವಿತೀಯ ಸ್ಥಾನ ಭಾಗ್ಯಶ್ರೀ ತಂದೆ ಗುಂಡೂರಾವ್ 93.66% ಪ್ರತಿಶತ ಪಡೆದುಕೊಂಡಿದ್ದು 100ಕ್ಕೆ100 ಪ್ರತಿಶತ ಫಲಿತಾಂಶ ಪತ್ರಿ ಸ್ವಾಮಿ ಕಾಲೇಜು ಪಡೆದುಕೊಂಡಿದೆ. ಸಂಸ್ಥೆಯ ಅದ್ಯಕ್ಷರು ಮಾಜಿ ಶಾಸಕರಾದ ಗುಂಡಪ್ಪಾ ವಕೀಲರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಿ ಕಾಲೇಜು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಶೇಕ್ ಅಖಿಲ್,ಕಾರ್ಯದರ್ಶಿ ಅನೀಲಕೂಮಾರ ಹೇಡಗಾಪುರೆ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದರು.
-ಅಮರ ಮುಕ್ತೇದಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.