ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೀದರ್‌ ನಗರದ ವಿದ್ಯಾನಗರ ಬಡಾವಣೆಯ ಆರೂಷೀ ಪ್ರಿ ಸ್ಕೂಲ್ ನಲ್ಲಿ ಮಹಾ ಮಾನವತಾವಾದಿ ವಿಶ್ವ ಗುರು ಬಸವಣ್ಣನವರ ಜಯಂತಿ

ಬೀದರ್: ಆರೂಷೀ ಪ್ರೀ ಸ್ಕೂಲ್ ಅಲ್ಲಿ ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಜರುಗಿತು.
ಸಂಸ್ಥೆಯ ಸಂಯೊಜಕರಾದ ಚಂದ್ರಕಾಂತ ಝಬಾಡೆ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಿಹಿ ಹಂಚಿ ಮತ್ತು ಶುಭ ಕೋರಿ ಮಾತನಾಡಿದ ಅವರು
ಬಸವಣ್ಣನವರು ಮೂಢನಂಬಿಕೆಗಳ ವಿರೋಧಿ

ಆಧುನಿಕ ವಿಜ್ಞಾನ ಯುಗದಲ್ಲಿಯೂ ಬೆಕ್ಕು ಅಡ್ಡ ಹಾಯ್ದು ಹೋದರೆ ಅಪಶಕುನ, ಹಲ್ಲಿ ಲೊಚಗುಟ್ಟಿದರೆ ಶುಭಶಕುನವೆಂದು ಹಲವರು ಭಾವಿಸುತ್ತಾರೆ. ಆದರೆ 12ನೇ ಶತಮಾನದಲ್ಲಿಯೇ ಕಲ್ಯಾಣ ಕ್ರಾಂತಿಕಾರಿ ಬಸವೇಶ್ವರರು ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಿ ಜನರನ್ನು ಸತ್ಯಮಾರ್ಗದೆಡೆಗೆ ಕರೆತರಲು ಯತ್ನಿಸಿದ್ದರು ದೇವರಿಗೆ ಪ್ರಾಣಿ ಬಲಿ ಕೊಡುವ ಮತ್ತು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಕಂದಾಚಾರಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರು. ‘ದೇವನೊಬ್ಬ ನಾಮ ಹಲವು’ ಎಂಬ ತತ್ವದಡಿಯಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಏಕ ದೇವೋಪಾಸನೆಯನ್ನು ಪ್ರತಿಪಾದಿಸಿದರು. ‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ, ಉಂಬ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ’ ಎನ್ನುವ ವಚನವೇ ಮೂಢನಂಬಿಕೆಗಳ ವಿರುದ್ಧದ ಬಸವಣ್ಣನವರ ಸಮರಕ್ಕೆ ಪ್ರಬಲ ನಿದರ್ಶನ. ಇಷ್ಟಾಗಿಯೂ ಬಸವಣ್ಣವರು ಎಂದಿಗೂ ಯಾವುದೇ ಧರ್ಮದ ಮೂಲನಂಬಿಕೆಗಳನ್ನು ವಿರೋಧಿಸಿರಲಿಲ್ಲ.
ಎಂದು ನುಡಿದರು.

ಅದೆ ಸಂದರ್ಭದಲ್ಲಿ ಸಾಗರ ಪಡಸಾಲೆ ಅವರು ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಜನೆ ಮಾಡಿ ಮಾತನಾಡಿದ ಅವರು

ಬಸವಣ್ಣನವರು ಪ್ರಜಾಪ್ರಭುತ್ವವಾದಿಯಾಗಿದ್ದರು
ಮಹಾ ಮಾನವತಾವಾದಿ ಬಸವೇಶ್ವರರು ಬಿಜ್ಜಳನ ಆಸ್ಥಾನದಲ್ಲಿ ರಾಜಪ್ರಭುತ್ವದ ಅಡಿಯಲ್ಲಿ ಮಂತ್ರಿಯಾಗಿದ್ದರೂ ತಮ್ಮ ಇಡೀ ಜೀವನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೀಸಲಿಟ್ಟಿದ್ದರು. ಜಗತ್ತಿನಲ್ಲೇ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ರಚಿಸುವ ಮೂಲಕ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಮುಕ್ತ ವಾತಾವರಣ ನಿರ್ಮಿಸಿದ್ದರು. ಅದೇ ಜಗತ್ತಿನ ಪ್ರಥಮ ಪ್ರಜಾಪ್ರಭುತ್ವ ಮಾದರಿ, ಸಮರ್ಥ ನಾಯಕನ ಆಗಮನಕ್ಕಾಗಿ ಹಲವಾರು ದಿನಗಳ ಕಾಲ ಶೂನ್ಯ ಸಿಂಹಾಸನವನ್ನು ಖಾಲಿ ಇಡಲಾಗಿತ್ತು. ಆ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯೆಂದು ಅಲ್ಲಮಪ್ರಭು ಅವರನ್ನು ಆಯ್ಕೆ ಮಾಡಲಾಯಿತು. ಅನುಭವ ಮಂಟಪದಲ್ಲಿ ಚರ್ಚೆ ಮಾಡಲು, ಪ್ರಶ್ನೆ ಕೇಳಿ ಉತ್ತರ ಪಡೆಯಲು ಸರ್ವರಿಗೂ ಸ್ವಾತಂತ್ರ್ಯವಿತ್ತು. ಯಾವುದೇ ತಾರತಮ್ಯ, ಮೇಲು-ಕೀಳೆಂಬ ತಾಕಲಾಟವಿಲ್ಲದೆ ಎಲ್ಲರೂ ಒಂದೇ ಕುಟುಂಬದವರಂತೆ ಬದುಕು ಸಾಗಿಸುತ್ತಿದ್ದರು. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಒಂದು ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರಚಿಸಿ ಜಾರಿಗೊಳಿಸಿ ತೋರಿಸಿದವರು ಬಸವಣ್ಣನವರು.

ಅಂತರಂಗ ಶುದ್ದಿ ಬಹಿರಂಗ ಶುದ್ಧಿ

ಅಂತರಾತ್ಮದಲ್ಲಿ ಶುದ್ಧತೆ ಇಲ್ಲದೆ ಕೇವಲ ಬಾಹ್ಯವಾಗಿ ಎಷ್ಟೇ ಆಡಂಬರದ ಪೂಜೆ ಪುನಸ್ಕಾರ ಮಾಡಿದರೂ ದೇವರ ಕೃಪೆಯಾಗುವುದಿಲ್ಲ ಎಂದು ಅರಿತಿದ್ದ ಭಕ್ತಿ ಭಂಡಾರಿ ಬಸವಣ್ಣನವರು ಬಹಿರಂಗದ ಶುದ್ಧತೆಯ ಜತೆಗೆ ಅಂತರಂಗದ ಶುದ್ಧತೆಗೂ ಹೆಚ್ಚು ಒತ್ತು ಕೊಟ್ಟಿದ್ದರು. ಇದಕ್ಕೆ ಅವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ…’ ಎಂಬ ವಚನವೇ ಸಾಕ್ಷಿ. ನಮ್ಮ ದಿನನಿತ್ಯದ ಜೀವನದಲ್ಲಿ ಪರಸ್ಪರರೊಂದಿಗೆ ಮಾತಾಡುವಾಗ, ವ್ಯವಹರಿಸುವಾಗ ಯಾವುದೇ ಸಿಟ್ಟು-ಸೆಡವು, ಮನಸ್ತಾಪಗಳಿರಬಾರದು, ಸುಳ್ಳು ಹೇಳಬಾರದು, ಮತ್ತೊಬ್ಬರ ಏಳಿಗೆಯನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಕೆಟ್ಟದ್ದನ್ನು ಬಯಸಬಾರದು. ಆಂತರಿಕವಾಗಿ ಪರಿಶುದ್ಧರಾಗದೆ ಎಷ್ಟೇ ಜ್ಞಾನ ಸಂಪಾದಿಸಿದರೂ ನಿಷ್ಟಯೋಜಕ ಅಂತರಂಗದಲ್ಲೊಂದು ಬಹಿರಂಗದಲ್ಲೊಂದು ಇರಬಾರದು. ಮುಖವಾಡದ ಢಾಂಬಿಕ ಜೀವನ ನಡೆಸುವವರ ಭಕ್ತಿಯನ್ನು ಭಗವಂತನು ಮೆಚ್ಚುವುದಿಲ್ಲ. ಅಂಥವರ ಬದುಕು ಬಂಗಾರದ ಪಾತ್ರೆಯೊಳಗಿನ ಹೆಂಡವಿದ್ದಂತೆ. ಹಾಗಾಗಿಯೇ ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿ, ಷಟ್‌ಸ್ಥಲವೇ ಆತ್ಮವಾಗಿ ಬದುಕಿ ಬಾಳಿದ ಬಸವಣ್ಣನವರು ನುಡಿದಂತೆ ನಡೆದರು, ನಡೆದಂತೆ ನುಡಿದರು.

ಅನುಭವವೇ ಮಂಟಪ

ಬದುಕು ಯಾವುದರ ಸುತ್ತ ಸುತ್ತುತ್ತದೆ ಎಂಬುದನ್ನು ವಿವರಿಸುವಾಗ ಸಾಮಾನ್ಯರ ತಿಳಿವಳಿಕೆಯಲ್ಲಿ, ಬದುಕು ಸುಖದ ಸುತ್ತ, ಹಣ, ಅಧಿಕಾರ, ಐಹಿಕ ಭೋಗದ ಸುತ್ತ, ಭ್ರಮೆ, ಅಂತಸ್ತಿನ ಸುತ್ತ ಸುತ್ತುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಸಾಧಕನ ದೃಷ್ಟಿಯಲ್ಲಿ ಬದುಕು ಅನುಭವದ ಸುತ್ತ ಸುತ್ತುತ್ತದೆ. ಪ್ರತಿಯೊಂದು ಹಂತದಲ್ಲಿಯೂ ವ್ಯಾವಹಾರಿಕ, ಕೌಟುಂಬಿಕ, ಧಾರ್ಮಿಕ, ವೈಜ್ಞಾನಿಕ, ಶೈಕ್ಷಣಿಕ, ಸಾಮಾಜಿಕ, ಶಾಸ್ತ್ರಸಮ್ಮತ ಸಂಪ್ರದಾಯಬದ್ಧ, ಪ್ರಗತಿಪರ, ಜೀವ – ಖಗೋಳ – ಭೂಗರ್ಭಶಾಸ್ತ್ರ – ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದ ಮಹಾಪುರುಷ ಬಸವಣ್ಣ ಪರಿಪೂರ್ಣ ವ್ಯಕ್ತಿತ್ವವುಳ್ಳ ಅನುಭಾವಿ ಆಗಿದ್ದರಿಂದಲೇ ಸರ್ವರನ್ನು ಸಮಾನವಾಗಿ ಮುನ್ನಡೆಸುವ ಹಾಗೂ ಸಮಾಜ ಸುಧಾರಣಿಗೆ ಮುಕ್ತ ಚರ್ಚೆ ಕೈಗೊಳ್ಳುವ ನಿಟ್ಟಿನಲ್ಲಿ ನಿರ್ಮಿಸಿದ ಮಂಟಪಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡಲಾಗಿತ್ತು. ಇಲ್ಲಿ ಎಲ್ಲ ಶರಣರು ತಮ್ಮ ಜೀವನದ ಅನುಭವಗಳನ್ನು ಮಂಡಿಸಿ ಅದರ ಪರಿಣಾಮಗಳ ಕುರಿತು ವಿಚಾರ ವಿನಿಮಯ ಮಾಡಿದ ನಂತರ ಸ್ಪಷ್ಟ ನಿಲುವು ತಾಳುತ್ತಿದ್ದರು. ‘ಆದ್ಯರ ವಚನ ಆದ್ಯರಿಗಾಯಿತ್ತು ವೇದ್ಯರಿಗಲ್ಲದೆ ಸಾಧ್ಯವಾಗದು. ಕೂಡಲಸಂಗಮದೇವಾ ನಿಮ್ಮ ಅನುಭಾವದಿಂದ ಎನ್ನ ಭವಂ ನಾಸ್ತಿಯಾಯಿತ್ತು’ ಎಂದು ವಚನವೊಂದರಲ್ಲಿನ ಉಲ್ಲೇಖವೇ ಅನುಭವ ಮಂಟಪದ ಔನ್ನತ್ಯಕ್ಕೆ ಸಾಕ್ಷಿಯಾಗಿದೆ ಎಂದರು.

ಕೊನೆಯಲ್ಲಿ ಮಾತನಾಡಿದ ಹೆಮಲತಾ ಕಂದಗೂಳೆ ಬಸವಣ್ಣನವರು ಸ್ತ್ರೀಯರಿಗೆ ಸಮಾನ ಗೌರವವನ್ನು ನಿಡಿದರು

ಬಸವಣ್ಣ ಸ್ತ್ರೀ ಸಮಾನತೆಗೆ ಶ್ರಮಿಸಿದವರು. ಬಾಲ್ಯದಲ್ಲಿ ತನಗೆ ಉಪನಯನ ಮಾಡುವಾಗ ಅಕ್ಕ ನಾಗಮ್ಮನಿಗೂ ಜನಿವಾರ ನೀಡುವಂತೆ ಕೇಳಿಕೊಂಡಿದ್ದರು. ಪಾಲಕರು ಇದಕ್ಕೊಪ್ಪದೆ ಇದ್ದಾಗ ಮನೆ ಬಿಟ್ಟು ಹೊರನಡೆದರು. ಚಿಕ್ಕಂದಿನಿಂದಲೇ ಲಿಂಗ ಸಮಾನತೆಗಾಗಿ ಧ್ವನಿ ಎತ್ತಿದವರು ಬಸವಣ್ಣನವರು. ಮಹಿಳೆಯರಿಗೆ ಅನೇಕ ಸಾಮಾಜಿಕ ಕಟ್ಟುಪಾಡುಗಳಿದ್ದ ಶರಣೆಯರು ಕಾಲಘಟ್ಟದಲ್ಲಿ ಹಲವಾರು ಅನುಭವ ಮಂಟಪದಲ್ಲಿ ಪಾಲ್ಗೊಂಡು ಚರ್ಚಿಸಲು, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದರು. ಇದರ ಪರಿಣಾಮವಾಗಿ ಅಕ್ಕಮಹಾದೇವಿ, ನೀಲಮ್ಮ, ಗೊಗ್ಗವ್ವ, ಬಾಳವ್ವ, ಆಯ್ದಕ್ಕಿ ಲಕ್ಕಮ್ಮ ಆದಿಯಾಗಿ ಅನೇಕ ಮಹಿಳೆಯರು ವಚನಕಾರ್ತಿಯರಾದರು. ಸಾವಿರಾರು ವಚನಗಳನ್ನು ರಚಿಸುವ ಮೂಲಕ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸಿದರು.
ಹೆಣ್ಣು ಕೇವಲ ಭೋಗದ ವಸ್ತು, ಪುರುಷರು ಹೇಳಿದಂತೆ ಮಹಿಳೆಯರು ಕೇಳಿಕೊಂಡಿರಬೇಕು ಎಂದು ನಂಬಿಕೊಂಡು ಬಂದಿದ್ದ ಆಗಿನ ಸಮಾಜದ ಕಣ್ಣು ತೆರೆಸುವಲ್ಲಿ ಬಸವಣ್ಣನವರು ಯಶಸ್ವಿಯಾದರು. ಹೆಣ್ಣು ಮಾಯೆಯಲ್ಲ, ಮನದ ಮುಂದಿರುವ ಆಸೆಯೇ ಮಾಯೆ… ಎಂಬಂತಹ ಹಲವಾರು ವಚನಗಳ ಮೂಲಕ ಬಸವಣ್ಣನವರು ತಮ್ಮ ಸ್ತ್ರೀ ಪರ ನಿಲುವನ್ನು ಲೋಕಕ್ಕೆ ತಿಳಿಸಿದ್ದಾರೆ ಎಂದು ಹೆಳಿದರು.
ನಾವೆಲ್ಲರು ಬಸವಣ್ಣನವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರಾದ ಅಂಬಾದಾಸ ದೊಡ್ಡಿ, ಕವಿತಾ, ಮೊನಿಕಾ ಕ್ರಿಸ್ತದಾಸ, ಪ್ರತಿಭಾ ಹೂಗಾರ್, ರೇಣುಕಾ ಜಟ್ಲಾ, ಅಂಜಲಿ ಜಟ್ಲಾ, ಶಿವಾನಿ ಜಟ್ಲಾ ಉಪಸ್ಥಿತರಿದ್ದರು.

-ಸಾಗರ ಪಡಸಾಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ