ರಾಯಚೂರು//ಏ.24. ಸಿಂಧನೂರು ತಾಲೂಕಿನ ವಿಧಾನಸಭಾ 2023ನೇ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ದುರಾಡಳಿತ, ಬ್ರಷ್ಟಾಚಾರಕ್ಕೆ ಬೇಸತ್ತು ಬಿಜೆಪಿಗೆ ಸೇರ್ಪಡೆ ಸಾಧ್ಯತೆ ಹೆಚ್ಚಿದೆ ಎಂದು H. ಸೂಲಂಗಿ ಅವರು ತಿಳಿಸಿದರು. ತದನಂತರ ಬೆಳಗ್ಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಕೆ ಕರಿಯಪ್ಪ ನವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಶ್ರೀ ಅಂಬರೀಶ ಗಿರಿಜಾಲಿ ಅವರು ಕಾಂಗ್ರೆಸ್ ಪಕ್ಷದ ಸ್ವಾರ್ಥ ರಾಜಕಾರಣದ ನೀತಿಯನ್ನು ವಿರೋಧಿಸಿ ಎಡಗೈ ಸಮುದಾಯವಾದ ಮಾದಿಗ ಸಮಾಜದವರ ರಾಜಕೀಯ ಬೆಳವಣಿಗೆಯನ್ನು ಬಯಸಿದ ಕಾಂಗ್ರೆಸ್ ಪಕ್ಷದ ವಿರೋಧ ರೀತಿಯಲ್ಲಿ ಕಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಶ್ರೀ ಕೆ ಕರಿಯಪ್ಪ ಅವರ ಸರಳತೆ,ಸಾಮಾಜಿಕ ಕಾಳಜಿಯನ್ನು ಕಂಡು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ತಮ್ಮ ಬೆಂಬಲಿಗರ ಜೊತೆ ಸೇರ್ಪಡೆಯಾಗುತ್ತಿದೇನೆ ಎಂದು ಅಂಬರೀಶ ಗಿರಿಜಾಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆ ಶೇಖರಪ್ಪ , ಸುರೇಶ್ ಹಚ್ಚೋಳ್ಳಿ, ಅಂಬರೀಶ್ ಗಿರಿಜಾಲಿ, ನಾಗರಾಜ್ ಬಾದರ್ಲಿ, ದವಲ ಸಾಬ್ ದೊಡ್ಮನಿ, ಕಾಳಪ್ಪ ಮೇಸ್ತ್ರಿ, ಆದಿಕೇಶವ ಮೇಸ್ತ್ರಿ , ವೆಂಕೋಬ ನಾಯಕ, ಅಂಬರೀಶ ಗಿರಿಜಾಲಿ ಬೆಂಬಲಿಗರು ಇನ್ನು ಮುಂತಾದವರು ಭಾಗವಹಿಸಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ
