ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮಗಳ ಎರಡು ಕೋಟಿ ಜನರಿಗೆ ಕುಡಿಯುವ ನೀರು- ದೇವೆಂದ್ರ ಫಡ್ನವೀಸ

ವಿಜಯಪುರ/ಇಂಡಿ: ಕರ್ನಾಟಕ ಗ್ರಾಮೀಣ ಪ್ರದೇಶದ ಜನರಿಗೆ ಜಲ ಜೀವನ ಮಿಷನ್ ಅಡಿಯಲ್ಲಿ ಕೇಂದ್ರ ಸರಕಾರ ಎರಡು ಕೋಟಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದೆ ಮತ್ತು ಇಂಡಿ ತಾಲೂಕಿನ ೩೦ ಗ್ರಾಮಗಳಿಗೆ ೨೪*೭ ಕುಡಿಯುವ ನೀರು ಪೂರೈಸುತ್ತಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಸಭಾಭವನದಲ್ಲಿ ೨೦೨೩ ರ ವಿಧಾನಸಭೆಯ ಚುನಾವಣೆ ನಿಮಿತ್ಯ ನಡೆದ ಪ್ರಭುದ್ದರ ಸಭೆಯಲ್ಲಿ ಮಾತನಾಡುತ್ತಿದ್ದರು.
ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿ ಬಡವರಿಗೆ ೪೫ ಲಕ್ಷ ಮನೆ ಮತ್ತು ಪಿ.ಎಂ.ಕಿಸಾನ ಯೋಜನೆ ಅಡಿಯಲ್ಲಿರೈತರಿಗೆ ಕೇಂದ್ರ ಸರಕಾರದಿಂದ ರೂ ೬೦೦೦ ಮತ್ತು ರಾಜ್ಯ ಸರಕಾರದಿಂದ ರೂ ೪೦೦೦ ಹೀಗೆ ಒಟ್ಟು ಹತ್ತು ಸಾವಿರ ರೂಗಳನ್ನು ರೈತರಿಗೆ ಪ್ರತಿ ವರ್ಷ ನೀಡುತ್ತಿದೆ ಎಂದರು.
ಗ್ರಾಮಗಳಲ್ಲಿ ಬಡವರಿಗೆ ಶೌಚಾಲಯ,ಆರೋಗ್ಯ ಸುಧಾರಣೆ,ಕುಟುಂಬದವರಿಗೆ ಗ್ಯಾಸ ಸೌಲಭ್ಯ,ವಿದ್ಯುತ್ ದಂತಹ ಅನೇಕ ಸೌಲಭ್ಯ ನೀಡಿದೆ. ದೇಶದ ಅನೇಕ ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಇಂಜನ್ ಸರಕಾರವಿದ್ದು ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಪ್ರಗತಿ ಸಾಧ್ಯ ಎಂದರು.
ಕೇoದ್ರದ ರಾಜ್ಯ ಅರ್ಥ ಸಚಿವ ಭಗವತ ಕರಾಡೆ ಮಾತನಾಡಿ ದೇಶ ಈ ಹಿಂದೆ ಅರ್ಥಿಕ ವ್ಯವಸ್ಥೆಯಲ್ಲಿ ೧೧ ನೇ ಸ್ಥಾನದಲ್ಲಿತ್ತು. ಮೋದಿಯವರ ಆಡಳಿತದಿಂದ ಅಭಿವೃದ್ಧಿ ಯೋಜನೆಗಳಿಂದ ೫ ಸ್ಥಾನಕ್ಕೆ ಬಂದಿದ್ದೇವೆ ಎಂದರು.
ಸೋಲಾಪುರದ ಸಂಸದ ಜಯ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಇಂಡಿ ತಾಲೂಕಿನ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಿಜೆಪಿ ಸರಕಾರ ೩೨೦೦ ಕೋಟಿ ರೂ ಬಿಡುಗಡೆ ಮಾಡಿದೆ.ವಿಜಯಪುರಕ್ಕೆ ವಿಮಾನ ನಿಲ್ದಾಣ,ವಿಜಯಪುರ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಬಿಜೆಪಿ ಸರಕಾರ ಕೊರೊನಾ ಕಾಲದಲ್ಲಿ ಮಾಡಿದ ಕಾರ್ಯ ಶ್ಲಾಘನೀಯ ಎಂದರು.
ಅಭ್ಯರ್ಥಿ ಕಾಸುಗೌಡ ಬಿರಾದಾರ,ಸಿದ್ದಲಿಂಗ ಹಂಜಗಿ,ಮಲ್ಲಿಕಾರ್ಜುನ ಕಿವಡೆ ಮಾತನಾಡಿದರು.
ವೇದಿಕೆಯ ಮೇಲೆ ಉತ್ತರಾಖಂಡದ ಶಿಕ್ಷಣ ಸಚಿವ ಧನಸಿಂಗ ರಾವತ್, ಮಾಜಿ ಶಾಸಕ ಡಾ|| ಸಾರ್ವಭೌಮ ಬಗಲಿ,ವಿಪ ಸದಸ್ಯ ಹಣಮಂತ ನಿರಾಣ ,ದಯಾಸಾಗರ ಪಾಟೀಲ, ಶೀಲವಂತ ಉಮರಾಣ ,ಬಾಬುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗುರ, ಶಂಕರಗೌಡ ಪಾಟೀಲ ಡೊಮನಾಳ, ಮುತ್ತು ದೇಸಾಯಿ, ಗಣಪತಿ ಬಾಣ ಕೋಲ,ಲಾಯಪ್ಪ ದೊಡಮನಿ ಮತ್ತಿತರಿದ್ದರು.
ಫೋಟೋ-೨೫ ಇಂಡಿ ೦೧
ಇಂಡಿ ಪಟ್ಟಣದ ಶಂಕರ ಪಾರ್ವತಿ ಸಬಾಭವನದಲ್ಲಿ ಚುನಾವಣೆ ನಿಮಿತ್ಯ ನಡೆದ ಸಭೆಯಲ್ಲಿ ದೇವೇಂದ್ರ ಪಡ್ನವೀಶ ಮಾತನಾಡಿದರು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ