ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಮತಗಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೇರೆಡೆಗೆ ಪಕ್ಷಾಂತರ ಆಗದಿರುವಂತೆ ಎಚ್ಚರವಹಿಸುವ ಭವಿಷ್ಯದ ಮುಂದಾಲೋಚನೆಯಿಂದ ಮೂರು ಪಕ್ಷಗಳು ಜಿದ್ದಾಜಿದ್ದಿನಿಂದ ಕಾರ್ಯಕರ್ತರನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ತಯಾರಿ ರಂಗೇರಿದೆ ಒಂದು ಮೂಲದ ಪ್ರಕಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಡೆ ಮೇಲ್ನೋಟಕ್ಕೆ ಈ ಬಾರಿ ಕಳೆದ ಚುನಾವಣೆಗಿಂತ ಹೆಚ್ಚಾಗಿ ಕಂಡುಬರುತ್ತಿದೆ ಭಾರತೀಯ ಜನತಾ ಪಕ್ಷದ ಬಹಳಷ್ಟು ಚಿಕ್ಕಪುಟ್ಟ ಕಾರ್ಯಕರ್ತರು ಕೈ ಪಾಳೆಯದಲ್ಲಿ ಗುರುತಿಸಿಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮೇಲ್ನೋಟಕ್ಕೆ ಕಡಿಮೆ ಸಂಖ್ಯೆಯಲ್ಲಿ ಕಂಡುಬಂದಿದ್ದರು ಮತದಾರನ ಮೇಲೆ ಬಿಗಿಹಿಡಿತ ಸಾಧಿಸುವಲ್ಲಿ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದು ಸಹಜವಾಗಿ ಯಾವುದೇ ಕಾರಣಕ್ಕೂ ಎರಡು ರಾಷ್ಟ್ರೀಯ ಪಕ್ಷಗಳು ಹಗುರಾಗಿ ಚುನಾವಣೆ ಎದುರಿಸುತ್ತಿಲ್ಲ ಎಂಬ ಸಂದೇಶ ಮತದಾರನಿಗೆ ರವಾನಿಸಿದ್ದಾರೆ ಜೊತೆಗೆ ಆಶ್ಚರ್ಯಕರ ರೀತಿಯಲ್ಲಿ ಈ ಮೊದಲು ಭಾರತೀಯ ಜನತಾ ಪಕ್ಷವು ಬೆರಳೆಣಿಕೆಯ ನಾಯಕರ ನೇತೃತ್ವದಲ್ಲಿ ವಿಶ್ವಾಸ ಇರಿಸಿಕೊಂಡು ಚುನಾವಣೆಯನ್ನು ಎದುರಿಸುತ್ತಿತ್ತು ಆದರೆ ಈ ಬಾರಿ ಪ್ರತಿ ಎಂಟರಿಂದ ಹತ್ತು ಮನೆಗಳಿಗೆ ಒಬ್ಬರಂತೆ ನಿಯೋಜಿಸಿ ಹೊಸ ತಂತ್ರ ಅನುಸರಿಸುತ್ತಿದ್ದಾರೆ ಸಹಜವಾಗಿ ಯಾವುದೇ ಕಾರಣಕ್ಕೂ ಮತದಾರರನ್ನು ಸುಲಭವಾಗಿ ಬಿಟ್ಟುಕೊಡುವ ಇರಾದೆ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ ಕಾರಣ ಹಾಲಿ ಶಾಸಕರಿಗೆ ಇರುವ ಅಭೂತಪೂರ್ವ ಬೆಂಬಲವನ್ನೂ ಕಡಿಮೆಗೊಳಿಸುವ ತಂತ್ರಗಳು ತಾರಕಕ್ಕೆ ಏರಿವೆ,ಇದಕ್ಕೆ ಕಾರಣವೂ ಗೌಣವಾಗಿದೆ ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಅಲಕ್ಷತನವನ್ನು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಚುನಾವಣಾ ತಯಾರಿ ರಂಗೇರಿದೆ ಮತದಾನ ಮಾಡುವ ಪೂರ್ವ ಇನ್ನೂ ಈ ತಾರತಮ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ರಣಕಲಿಗಳ ರಣತಂತ್ರ ರೋಚಕವಾಗಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದು ಇನ್ನೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಕಾರಣ ಬಹಳಷ್ಟು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ದಿಢೀರನೆ ಕೈ ಪಾಳೆಯದಲ್ಲಿ ಗುರುತಿಸಿಕೊಂಡಿದ್ದು ಮೂಲ ಕಾರ್ಯಕರ್ತರಿಗೆ ಬಿಸಿತುಪ್ಪವಾಗಿದೆ ಈ ಎಲ್ಲಾ ಗೊಂದಲಗಳು ಸೋಲು ಗೆಲುವಿಗೆ ಕಾರಣವಾಗುವ ಲಕ್ಷಣಗಳು ಕ್ಷೇತ್ರದಲ್ಲಿ ದಟ್ಟವಾಗಿವೆ ಜೊತೆಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಹಸ್ಯ ಮತದಾರ ಹಾಗೂ ಕಾರ್ಯಕರ್ತರು ಸವಾಲಾಗಿ ಪರಿಣಾಮ ಬೀರಬಹುದು ಎಂಬುವುದು ಸಧ್ಯದ ಲೆಕ್ಕಾಚಾರ ಜೊತೆಗೆ ಹಾಲಿ ಶಾಸಕರಿಗೆ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಪೈಪೋಟಿಯಲ್ಲಿ ಮಗದೊಂದು ಪಕ್ಷಗಳಿಗೆ ವರದಾನವಾದರೂ ಅಚ್ಚರಿಯಿಲ್ಲ ಏಕೆಂದರೆ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಎರಡೂ ಒಂದೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಕಳೆದ ಒಂದು ತಿಂಗಳಿನಿಂದ ಆದ ಬದಲಾವಣೆಗಳು ನಾಯಕರು ಪಕ್ಷಗಳಿಗಿಂತ ಮತದಾರನು ಯಾವ ಕಡೆಗೆ ಬಾಗುತ್ತಾನೆ ಎಂಬುವುದು ಕಷ್ಟಸಾಧ್ಯದ ಮಾತು ಹೌದು ಮತ್ತು ಇಲ್ಲ ಎನ್ನಲು ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬಲ್ಲದು.
ವರದಿ-ದಿನೇಶಕುಮಾರ ಅಜಮೇರಾ