ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಕ್ಷದ ಜೊತೆ ಬಂಜಾರ ಸಮುದಾಯದ ಸದಾ ಇರಬೇಕು:ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ

ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೇರ್ಪಡೆ ಮಾಡುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸರಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ತಂದಿರುವುದೇ ಕಾಂಗ್ರೆಸ್ ಇಂತಹ ಮಾತೃ ಹೃದಯದ ಪಕ್ಷದ ಜೊತೆ ಬಂಜಾರ ಸಮುದಾಯದ ಸದಾ ಇರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಹಡಲಸಂಗ ಎಲ್.ಟಿ ನಂ 01 ರಲ್ಲಿ 2023 ರ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯ ನನಗೆ ಪ್ರತಿಯೊಂದು ಚುನಾವಣೆಯಲ್ಲಿ ಸಹಾಯ ಮಾಡಿ ನನಗೆ ಇಷ್ಟೊಂದು ಎತ್ತರಕ್ಕೆ ಬೆಳೆಸಿದ್ದೀರಿ ಈ ಬಾರಿ ಚುನಾವಣೆ ಮತಕ್ಷೇತ್ರದ ಭವಿಷ್ಯ ಅಡಗಿದೆ ನಾನು ಅಭಿವೃದ್ಧಿ ದಶದಿಕ್ಕುಗಳನ್ನ ಬದಲಾವಣೆ ಮಾಡಿರುವೆ ಇದಕ್ಕೆ ಕಿಂಚಿತ್ತು ಚುಕ್ಕೆ ಬರಬಾರದೆಂದರೆ ಮತಷ್ಟು ಪ್ರಗತಿ ಹಾಗೂ ಜಿಲ್ಲೆಯಾಗಿಸಲು ನಿಮ್ಮ ಅಮೂಲ್ಯ ಮತ ನನಗೆ ನೀಡಿ,

ಬಂಜಾರ ಸಮುದಾಯಕ್ಕೆ ಎಸ್ ಸಿ ಸೇರ್ಪಡೆ ಮಾಡಿದ ಕೆ.ಟಿ ರಾಠೋಡ, ಎಲ್.ಆರ್. ನಾಯಕ ಹಾಗೂ ಅಂದಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸ ಇವರನ್ನು ಹಾಗೂ ಕೇಂದ್ರದಲ್ಲಿ ಎಸ್ಸಿ ಸೆರ್ಪಡೆಗೆ ಶ್ರಮಿಸಿದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂಧಿರಾಗಾಂಧಿಯವರನ್ನು ಬಂಜಾರ ಸಮಾಜ ಸೂರ್ಯಚಂದ್ರ ಇರುವವರೆಗೂ ಮರೆಯಬಾರದು ಯಾರು ಸಹಾಯ ಮಾಡಿದ್ದಾರೆ, ಸದಾ ಅಂತಹವರ ಪರ ಇರಬೇಕು ಇದು ಮಾನವೀಯ ಧರ್ಮ, ಇಂದು ಬಂಜಾರ ಸಮುದಾಯ ಎಸ್ಸಿ ಪಟ್ಟಿಯಲ್ಲಿ ಇರುವದರಿಂದಲೆ ಆಯ್.ಎ.ಎಸ್ ಆಯ್.ಪಿ.ಎಸ್ ಇತರೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಸರಕಾರದ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಬಂಜಾರ ಸಮುದಾಯದ ಧರ್ಮಗುರು ಸೇವಾಲಾಲ್‌ ಜಯಂತಿ ಸರಕಾರದಮಟ್ಟದಲ್ಲಿ ಆಚರಣೆಗೆ ಆದೇಶ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಬಲ್ ಎಂಜಿನ್ ಸರಕಾರ ಮೀಸಲಾತಿ ಕೊಡುವುದರಲ್ಲಿ ತಪ್ಪು ನಿರ್ಣಯ ಮಾಡುತ್ತಿದ್ದಾರೆ ಇಂತಹ ಅಚಾತುರ್ಯ ಹೇಳಿಕೆಗಳಿಂದ ಜನರಿಗೆ ದಾರಿತಪ್ಪಿಸಬಾರದು. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಡವರ ಪರ ಆಡಳಿತ ಮಾಡದೆ ಅದಾನಿ, ಅಂಬಾನಿ ಪರ ಚಿಂತನೆ ಮಾಡುತ್ತಿದ್ದಾರೆ, ಗುತ್ತಿಗೆದಾರ ಕೆಂಪಣ್ಣ 40% ಕಮಿಶನ್ ಪಡೆಯುತ್ತಿದ್ದಾರೆ ಎಂದು ಸರಕಾರದ ಮೇಲೆ ಅಪಾದನೆ ಮಾಡಿ ಕೇಂದ್ರ ಪ್ರಧಾನಿಗಳಿಗೆ ಪತ್ರ ಬರೆದರೂ ಕೂಡಾ ಶಿಕ್ಷೆಯಾಗುತ್ತಿಲ್ಲ ಏಕೆ ? ಎಂದು ಶಾಸಕರು ಪ್ರಶ್ನಿಸಿದರು. ರಾಜ್ಯದಲ್ಲಿ 17 ಜನ ಶಾಸಕರನ್ನು ವಾಮ ಮಾರ್ಗದಿಂದ ಆಮಿಷೆ ಒಡ್ಡಿ ಸರಕಾರ ರಚನೆ ಮಾಡಿದ್ದಾರೆ. ಇಂತಹ ಭ್ರಷ್ಟ ಸರಕಾರಕ್ಕೆ ತಕ್ಕ ಪಾಠಕಲಿಸಿ ಬರುವ ಮೇ10 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ನನಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.

ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ನಾಯಕ, ಸಂತೋಷಗೌಡ ಪಾಟೀಲ, ಮಾಜಿ ತಾ.ಪಂ ಅಧ್ಯಕ್ಷ ಶೇಖರ ರಾಠೋಡ, ಜೆಟ್ಟೆಪ್ಪರವಳಿ, ಜಾವೀದ ಮೋಮಿನ, ಶಶೀಕಾಂತ ನಾಯಕ , ಪ್ರಶಾಂತ್ ಕಾಳೆ ಉಪಸ್ಥಿತರಿದ್ದರು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ