ರಾಯಚೂರು 27.ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ವಿಧಾನಸಭಾ ಕ್ಷೇತ್ರದ 2023ನೇ ಚುನಾವಣೆಯ ಹಿನ್ನೆಲೆ ಕೆ.ಕರಿಯಪ್ಪ ಮತ ಯಾಚನೆಗೆ ಮಾಡಸಿರಿವಾರ
ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಜನರು ಬೈಕ್ ರ‍್ಯಾಲಿ,ಡೊಳ್ಳು ವಾದ್ಯಗಳು ಹಾಗೂ ಪಟಾಕಿ ಬಿಡುವ ಮೂಲಕ ತುಂಬಾ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು.ಕೆ.ಕರಿಯಪ್ಪ ಮಾತನಾಡಿ,ಬಿಜೆಪಿ ಪಕ್ಷಕ್ಕೆ ಮತ ಯಾಚಿಸಿ,ನಾನು ಯಾವುದೇ ಜಾತಿಯ ರಾಜಕೀಯ ಮಾಡುವುದಿಲ್ಲ ನಾನು ಈ ವಿಧಾನಸಭಾ ಚುನಾವಣೆ ಗೆದ್ದರೆ ನೀವು ಗೆದ್ದಂತೆ ಆಗಾಗಿ ನಿಮ್ಮ ಸೇವೆಗಾಗಿ ಒಂದು ಅವಕಾಶ ನೀಡಿ ನಮ್ಮ ಸಿಂಧನೂರು ತಾಲ್ಲೂಕು ಅಭಿವೃದ್ಧಿ ಮಾಡಿ ತೋರಿಸುತ್ತಿನೆಂದು ಹೇಳಿದರು ನಂತರ ಗ್ರಾಮದ ಜನತೆ ಕುಂದು ಕೊರತೆಗಳು ವಿಚಾರಿಸಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ತದನಂತರ ಕೆ.ಕರಿಯಪ್ಪನವರ ನೇತೃತ್ವದಲ್ಲಿ ಇವರ ವ್ಯಕ್ತಿತ್ವ ಹಾಗೂ ಸಮಾನತೆಯನ್ನು ಮೆಚ್ಚಿ ಇಂದು ನಾಗರಾಜ್ ಬುದಿವಾಳ ಗ್ರಾಮ ಪಂಚಾಯತಿ ಸದಸ್ಯರು,
ವೀರಭದ್ರ ಹೂಗಾರ್ ವಿರುಪಣ್ಣ ಬಳಗನೂರ್, ವೀರೇಶ್ ಗ್ರಾಮ ಪಂಚಾಯತಿ ಸದಸ್ಯರು,ಹನುಮಂತ ಕನ್ನಾರಿ,ಯಂಕಣ್ಣ ಬಳಗಾನೂರ,ಬಸವರಾಜ್ ಸಾಲಗುಂದಿ,ಪಂಪಾಪತಿ ಉಪ್ಪಾರ್ ,ವೀರಣ್ಣಯಾದವ್,ಆದ್ಯಪ್ಪ ಯಾದವ್,ಮೂಕಪ್ಪ ಮಡಿವಾಳ ಹಲವಾರು ಗ್ರಾಮದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಬಿಜೆಪಿ ಹಲವಾರು ಕಾರ್ಯಕರ್ತರು,ಮುಖಂಡರು, ಹಾಗೂ ಅಭಿಮಾನಿಗಳು ಉಪಸ್ಥಿತಿಯಲ್ಲಿದ್ದರು.
ವರದಿ-ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.