ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಒಂದು ಅಸಂಗಟಿತ ಸಮುದಾಯವೆಂದರೆ ತಪ್ಪಾಗಲಾರದು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಉಪ್ಪಾರ ಸಮಾಜವು ಎಸ್ಟಿ ಮೀಸಲಾತಿಗಾಗಿ ಹೋರಾಟವನ್ನು ಕೂಡಾ ಮಾಡುತ್ತಿದೆ.
30 ಲಕ್ಷ ಜನಸಂಖ್ಯೆ ಇರುವ ಉಪ್ಪಾರ ಸಮಾಜವು ರಾಜಕೀಯವಾಗಿ ಮುಂದೆ ಬರಲು ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗುತ್ತಿಲ್ಲ ಪ್ರಸ್ತುತ ಚಾಮರಾಜನಗರದ ಪುಟ್ಟರಂಗಶೆಟ್ಟಿಯನ್ನು ಬಿಟ್ಟರೆ ಯಾರೊಬ್ಬರೂ ಈ ಸಮಾಜದಲ್ಲಿ ಶಾಸಕರಾಗಿಲ್ಲ, ಕಾರಣ ಈ ಸಮುದಾಯದಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ ಪುಟ್ಟರಂಗಶೆಟ್ಟಿಯವರು ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಶಾಸಕರಾಗಿದ್ದು ಒಮ್ಮೆ ಸಚಿವರು ಕೂಡ ಆಗಿದ್ದರು ಆದರೆ ಬಿಜೆಪಿ ಆ ಒಬ್ಬ ಶಾಸಕನನ್ನು ಸೋಲಿಸಲು ಪ್ರಯತ್ನ ಪಡುತ್ತಿದೆ.
ಆ ಅಸಂಘಟಿತ ಸಮುದಾಯದ ಏಕೈಕ ಶಾಸಕರಾದ ಪುಟ್ಟರಂಗಶೆಟ್ಟಿಯವರನ್ನು ಸೋಲಿಸಲು ಬಿಜೆಪಿಯು ಹಣ ಮತ್ತು ಜಾತಿಯ ಬೆಂಬಲವಿರುವ ವಿ.ಸೋಮಣ್ಣ ಅವರನ್ನು ಕರೆತಂದು ಶತಾಯಗತಾಯ ಸೋಲಿಸಲೇಬೇಕು ಎಂದು ಪ್ರಯತ್ನ ಪಡುತ್ತಿದೆ.ಮೂರು ಬಾರಿ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸುವುದು ಬಿಜೆಪಿಗೆ ಸುಲಭದ ಮಾತಲ್ಲ ಆದರೆ ಸಮುದಾಯದಿಂದ ಇರುವ ಏಕೈಕ ಶಾಸಕನನ್ನು ಬಿಜೆಪಿಯವರು ಸೋಲಿಸಲು ಹೊರಟಿರುವುದು ಉಪ್ಪಾರರನ್ನು ಕೆರಳಿಸಿದೆ.
ಅರಬಾವಿ,ಕಡೂರು,ಗೋಕಾಕ್,ಕುಷ್ಟಗಿ ಹಾಗೂ ರಾಜ್ಯದ 30 ಕ್ಷೇತ್ರಗಳಲ್ಲಿ ಉಪ್ಪಾರ ಮತದಾರರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಇಲ್ಲಿ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಉಪ್ಪಾರರು ಕೇಳಿಕೊಂಡಿದ್ದರು ಬಿಜೆಪಿಯವರು ಅವರಿಗೆ ಕ್ಯಾರೆ ಎಂದಿಲ್ಲ.
ನೀವು ಟಿಕೆಟ್ ನೀಡದಿದ್ದರೂ ಪರವಾಗಿಲ್ಲ ಇರುವ ಒಬ್ಬ ಶಾಸಕನನ್ನು ಸೋಲಿಸಲು ಹೊರಟಿರುವುದು ನಮ್ಮ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವೆಂದು ಉಪ್ಪಾರರು ಅಭಿಪ್ರಾಯಪಡುತ್ತಿದ್ದಾರೆ.
ಬಿಜೆಪಿಯು ಸೋಮಣ್ಣವರಿಗೆ ಪುಟ್ಟರಂಗಶೆಟ್ಟಿ ಅವರ ವಿರುದ್ಧವಾಗಿ ಟಿಕೆಟ್ ನೀಡುವ ಮೂಲಕ ರಾಜ್ಯದ ಉಪ್ಪಾರ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬೆಳವಣಿಗೆಯನ್ನು ನೋಡುತ್ತಿದ್ದರೆ ಉಪ್ಪಾರರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ ಒಂದು ಕ್ಷೇತ್ರ ಗೆಲ್ಲಲು ಹೋಗಿ ಬಿಜೆಪಿ ತನ್ನ10-12 ಕ್ಷೇತ್ರಗಳನ್ನ ಕಳೆದುಕೊಳ್ಳಬಹುದು.ಇದು ಕಾಂಗ್ರೆಸ್ ಗೆ ವರದಾನವು ಆಗಬಹುದು
-ದೇವರಾಜ ವನಗೇರಿ
ಇಳಕಲ್