ರಾಯಚೂರು/ಲಿಂಗಸುಗೂರು:ತಾಲೂಕಿನ ಚಿಕ್ಕಹೆಸರೂರಿನಲ್ಲಿ ಮತಯಾಚನೆಗೆ ಆಗಮಿಸಿದ ಶಾಸಕರಿಗೆ ಊರಿನ ಗ್ರಾಮಸ್ಥರು ನೀವು ಐದು ವರ್ಷಕ್ಕೆ ಒಂದು ಸಾರಿ ಬಂದು ಮತ ಯಾಚನೆ ಮಾಡಿದರೆ ಹೆಂಗೆ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಶಾಸಕರು ನೀವು ಅನ್ಯತಾ ಭಾವಿಸಬಾರದು ನಿಮ್ಮ ಎಲ್ಲಾ ಕೆಲಸಗಳನ್ನೂ ನಾನು ಮಾಡಿದ್ದೇನೆ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಿಲ್ಲ ದಯವಿಟ್ಟು ನನಗೆ ನೀವು ಈ ಸಾರಿ ಮತವನ್ನು ನೀಡಿ ಅತಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ವಿನಂತಿಸಿದರು.ಈ ಸಂದರ್ಭದಲ್ಲಿ ಭೂಪನಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು,ಗುಂಡಪ್ಪ ನಾಯಕ ಮಾಜಿ ತಾಲೂಕ ಪಂಚಾಯತ ಅದ್ಯಕ್ಷರು, ಪಾಮಯ್ಯ ಮುರಾರಿ,ಗುಂಡಪ್ಪ ನಾಯಕ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು,ಬಸಣ್ಣ ಮೇಟಿ,ಅಮರಗುಂಡಪ್ಪ ಮೇಟಿ, ಗೋವಿಂದ ನಾಯಕ,ಗುಂಡಪ್ಪ ಮೆದಿನಾಪೂರ, ಅಮರೇಶ ಮಾಜಿ ತಾಲೂಕ ಪಂಚಾಯತ ಸದಸ್ಯರು, ಆದಪ್ಪ ಮನಗೂಳ, ನಾಗರಡ್ಡೆಪ್ಪ ಹಿರೆನಗನುರು ,ಗ್ರಾಮ ಪಂಚಾಯತ ಸದಸ್ಯ ರಾದ ಶರಣಪ್ಪ ಕಡ್ಡೋಣಿ,ವೀರೇಶ ನಂದಿಹಾಳ,ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಜರಿದ್ದು, ರಮೇಶ ಭೋವಿ ಕಾಂಗ್ರೆಸ್ ಮುಖಂಡರು ಚಂದ್ರಕಾಂತ ನಡಗೌಡ್ರು ಅವರು ಶಾಸಕರ ಪರವಾಗಿ ಊರಿನ ಗ್ರಾಮಸ್ಥರಲ್ಲಿ ಮತ ಯಾಚನೆ ಮಾಡಿದರು.
ವರದಿ:ಶಿವದೇವಪ್ಪ.ಎಂ.ಹಟ್ಟಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.