ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಾನಪ್ಪ.ಡಿ.ವಜ್ಜಲ್ ರವರಿಂದ ಚಿಕ್ಕಹೆಸರೂರು ಗ್ರಾಮದಲ್ಲಿ ಮತಯಾಚನೆ

ರಾಯಚೂರು ಜಿಲ್ಲೆಯ ಲಿಂಗಸಗೂರು ಬಿಜೆಪಿ ಅಭ್ಯರ್ಥಿ,ಮಾಜಿ ಶಾಸಕರು ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಅದ್ಯಕ್ಷರು ಮಾನಪ್ಪ.ಡಿ.ವಜ್ಜಲ್ ಅವರು ಚಿಕ್ಕಹೆಸರೂರು ಗ್ರಾಮದಲ್ಲಿ ಮತಯಾಚನೆ ಮಾಡಿದರು.
ಗ್ರಾಮದ ಯುವ ಮುಖಂಡರು ಡೊಳ್ಳು, ಭಜಂತ್ರಿ,ಮೂಲಕ ಸ್ವಾಗತ ಮಾಡಿಕೊಂಡರು.
ನಮ್ಮ ಸರ್ಕಾರವು ಅಂಗವಿಕಲರಿಗೆ, ಮಹಿಳೆಯರಿಗೆ ದೀನದಲಿತರಿಗೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಸಮಾಜ ಸೇವೆ ಸಲ್ಲಿಸಿದೆ.ತಾಲೂಕಿನ ಬಹುದಿನಗಳ ಬೇಡಿಕೆ ನಂದವಾಡಗಿ ಏತ ನೀರಾವರಿ ಹಾಗೂ ನಿಮ್ಮ ಊರಿನ ಸಿ.ಸಿ.ರಸ್ತೆ,ಕುಡಿಯುವ ನೀರು, ಸರಕಾರಿ ಪ್ರೌಡಶಾಲೆ,ಇನ್ನಿತರ ಕಾರ್ಯ ಕೆಲಸಗಳನ್ನು ಮಾಡಿದ್ದೇನೆ 2000 ಮಹಿಳೆಯರಿಗಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಯನ್ನು ಲಿಂಗಸಗೂರು ತಾಲೂಕಿನಲ್ಲಿ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.146 ದೇವಸ್ಥಾನಗಳನ್ನು ಸ್ವಂತದರಲ್ಲಿ ಕಟ್ಟಿಸಿದ್ದೇವೆ ಅಷ್ಟೇ ಸಾಕು ನಮ್ಮ ಪುಣ್ಯ ಅಂತ ಹೇಳಿದರು.ಕಾಂಗ್ರೇಸ್ ಮತ್ತು ಜೆಡಿಸ್ ಪಕ್ಷವನ್ನು ತರಾಟೆಗೆ ತಗೊಂಡು ಅವರಿಂದ ತಾಲೂಕಿನ ಅಭಿವೃದ್ಧಿ ಆಗಲ್ಲ ಎಂದು ಹೇಳಿ,ಬಿಜೆಪಿ ಪ್ರಧಾನ ಮಂತ್ರಿಯವರ ಅನೇಕ ಯೋಜನೆಗಳನ್ನು ತಿಳಿಸುತ್ತಾ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನನಗೆ ಈ ಬಾರಿ ತಮ್ಮ ಅತ್ಯಮೂಲ್ಯ ಮತವನ್ನು ಕೊಟ್ಟು ಅತೀ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು ಈ ಸಂಧರ್ಭದಲ್ಲಿ ಅಯ್ಯಪ್ಪ ವಕೀಲರು, ದ್ಯಾಮಣ್ಣ ನಾಯಕ,ಮಾನಪ್ಪ ಕಸಬಾ ಲಿಂಗಸಗೂರು,ರಮೇಶ ಕರಡ ಕಲ್,ವೀರಭದ್ರಪ್ಪ ಸಾಹುಕಾರ,ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಬಸನಗೌಡ ಕೂಡ್ಲಿ,ಮಲ್ಲಪ್ಪ ಗುತ್ತೇದಾರ,ಶರಣಪ್ಪ ಮೇಟಿ,ಬಸವರಾಜಪ್ಪ ಮೇಟಿ,ವಿರೇಶಪ್ಪ ಸೋಮಾಲಪೂರ್, ಗುರುಸಿದ್ದೇಶ ಮೇಟಿ,ಶರಣಪ್ಪ ಸೋಮಲಪೂರ್,ಮಹಾಂತೇಶ್ ನಾಯಕ,ಶರಣಪ್ಪ ಜಾಲಹಳ್ಳಿ,ಶಶಿನಾ ಚಿಕ್ಕಹೆಸರೂರು,ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಬಸನಗೌಡ ಮೇಟಿ,ಇನ್ನೂ ಯುವ ಮುಖಂಡರು ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಮಾವಿನಬಾವಿ,ಮಲ್ಲಿಕಾರ್ಜುನ ಹಟ್ಟಿ, ಪುನೀತ್ ಗುಂಡಸಾಗರ್,ವಿಜಯ್, ಅಮರೇಶ ಭೋವಿ,ಪ್ರಶಾಂತ ಕುಮಾರ, ನಿರಂಜನ ಹಿರೇಮಠ,ರಮೇಶ್ ವಟಗಲ್, ಶಿವಕುಮಾರ ಹುಡೆದ,ಬಸವರಾಜ ಗುರಿಕಾರ,ಹಾಜರಿದ್ದರು.ಊರಿನ ಪರವಾಗಿ ಶಶಿನಾ ಮತ್ತು ಬಸನಗೌಡ ಕೊಡ್ಲಿ ರವರು ಬಿಜೆಪಿ ಸರಕಾರದ ಯೋಜನೆಗಳನ್ನು ತಿಳಿಸಿ ಮತಯಾಚನೆ ಮಾಡಿದರು.

ವರದಿ:ಶಿವದೇವಪ್ಪ.ಎಂ.ಹಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ