ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೇಡ ಜಂಗಮ ಪ್ರಮುಖ ನಾಯಕ ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ರವಿ ಸ್ವಾಮಿ ಇಂದು ಅಧಿಕೃತವಾಗಿ ಕಾಂಗ್ರೆಸ ಸೇರ್ಪಡೆಯಾಗಿದ್ದಾರೆ.
ತಾಲೂಕಿನ ಜಂಗಮ ಸಮಾಜದ ಬಲಿಷ್ಠ ನಾಯಕ ಹಾಗೂ ಎಕತಾ ಫೌಂಡೇಶನ್ ನ ಅಧ್ಯಕ್ಷ ರವಿಸ್ವಾಮಿಯವರು ಇಂದು ಅಧಿಕೃತವಾಗಿ ಕಾಂಗ್ರೆಸ ಸೇರ್ಪಡೆಯಾಗಿದ್ದಾರೆ.
ಔರಾದನ ಕುಮಾರ ಪ್ಯಾಲೇಸ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ರವಿಸ್ವಾಮಿ ಚೌಹಾನ್ ಮುಕ್ತ ಔರಾದ ಮಾಡುವ ಗುರಿ ಹಾಗೂ ಔರಾದ ಅಭಿವೃದ್ಧಿ ಮಾಡುವು ಉದೇಶದಿಂದ ಭೀಮಸೇನರಾವ ಸಿಂಧೆಯವರಿಗೆ ಬೆಂಬಲ ನಿಡುತ್ತಿದನೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಹದಿನೈದು ವರ್ಷಗಳಿಂದ ಬರಿ ಭ್ರಷ್ಟಾಚಾರ ಮಾಡಿ ಔರದ ಅಭಿವೃದ್ಧಿ ಕುಂಟಿತ ಮಾಡಿದ್ದಾರೆ. ಹೀಗಾಗಿ ಔರಾದ ಅಭಿವೃದ್ಧಿಯಾಗುವ ಉದೇಶದಿಂದ ಕಾಂಗ್ರೆಸಗೆ ಬೆಂಬಲ ನೀಡುತ್ತಿದ್ದೇನೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕಾಶಿನಾಥ ಜಾದವ, ಬಸವರಾಜ ದೇಶಮುಖ,ರಮೇಶ ದೆವಕತೆ, ನೇಹರು ಪಾಟೀಲ, ಅನಿಲ ಹೆಡೆ, ಹೀಗೆ ನೂರಾರು ಕಾಂಗ್ರೆಸ ಮುಖಂಡರು ಭಾಗಿಯಾಗಿದ್ದರು.
- ಅಮರ್ ಮುಕ್ತೇದಾರ