ಚಾಮರಾಜನಗರ:
ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಡಾಕ್ಟರ್ ಪ್ರೀತನ್ ರ ಗೆಲುವೆ ಮೋದಿ ಗೆಲುವಿಗೆ ದಾರಿಯಾಗಲಿದೆ ಎಂದು ಇಂದು ನಡೆದ ಸಾರ್ವಜನಿಕ ಬಹಿರಂಗ ಸಭೆಯನ್ನೂದ್ದೇಷಿಸಿ ಕೇಂದ್ರ ಸಚಿವರಾದ ಅಮಿತ್ ಷಾ ತಿಳಿಸಿದರು.
ಹನೂರು ಪಟ್ಟಣದ ಜಿ ವಿ ಗೌಡ ಕಾಲೇಜಿನ ಪಕ್ಕದ ಮೈದಾನದಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾಕ್ಟರ್ ಪ್ರೀತನ್ ಗೆಲ್ಲಿಸಲು ಎಲ್ಲರೂ ಪಣ ತೊಡಬೇಕು ಹನೂರು ಕ್ಷೇತ್ರದಲ್ಲಿ ಒಬ್ಬ ಎಮ್ ಎಲ್ ಎ ಗೆದ್ದರೆ ನಾಲ್ಕು ಎಮ್ ಎಲ್ ಎಗಳು ಅಂದರೆ ಇಲ್ಲಿರುವ ಟಿ ಕೆ ಟ್ ವಂಚಿತ ನಾಲ್ವರು ಗೆದ್ದಹಾಗೆ ಇಡಿ ಪ್ರಪಂಚಕ್ಕೆ ಮೋದಿ ಯಾರೆಂಬುದು ಗೊತ್ತಿದೆ ಅಲ್ಲದೆ ಇಡಿ ದೇಶದಲ್ಲಿ ಕಲ್ಯಾಣ ರಾಜ್ಯ ರಸ್ತೆಯನ್ನು ನೋಡಲು ಜನ ಪ್ರಾರಂಭಿಸಿದ್ದಾರೆ ಈ ಭಾರಿ ಕಾಂಗ್ರೇಸ್ ಬಂದರೆ ಅಭಿವೃದ್ದಿ ವಾಪಾಸಾಗುತ್ತದೆ ಅದ್ದರಿಂದ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಬಿ ಜೆ ಪಿ ಗೆ ಮತ್ತೋಮ್ಮೆ ಮತ ನೀಡಿದರೆ ಅಭಿವೃದ್ದಿ ನೀಡಿದಂತೆ ,ನಮ್ಮ ಸರ್ಕಾರವು ಮುಸ್ಮಿಂರ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ರದ್ದುಗೊಳಿಸಿದ್ದೇ ಆದರೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ವಾಪಾಸಾಗುತ್ತೆ ಹಾಗೆಯೆ ಲಿಂಗಾಯಿತ ಮತ್ತು ಒಕ್ಕಲಿಗ ಜನಾಂಗದ ಮೀಸಲಾತಿಯನ್ನು ಸಹ ಖಂಡಿತ ಮಾಡುತ್ತಾರೆ ಅದ್ದರಿಂದ ನಮ್ಮನ್ನು ಬೆಂಬಲಿಸಿ.ಕಾಂಗ್ರೇಸ್ ನ ಮಲ್ಲಿಕಾರ್ಜುನ ಖರ್ಗೇಯವರು ಮೋದಿಯವರನ್ನು ವಿಷ ಸರ್ಪದ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ ಕಾಂಗ್ರೇಸ್ ನವರ ಹೊಗಳಿಕೆ ಹಾಗೂ ತೆಗಳಿಕೆಯಿಂದ ನಮ್ಮ ಮೋದಿ ಯವರ ಘನತೆ ಹೆಚ್ಚುತ್ತದೆ ಅಲ್ಲದೆ ಆ ಪಕ್ಷದ ಗ್ಯಾರಂಟಿಗಿಂತ ನಮ್ಮ ಅಭಿವೃದ್ದಿ ಗ್ಯಾರಂಟಿಯಿದೆ ನಮ್ಮ ಸರ್ಕಾರ ಬಂದು ಕಾಶ್ಮೀರ ನಮ್ಮದು ಎನ್ನುವಂತೆ ಮಾಡಿತ್ತು ಅದು ಭಾರತದ ಒಂದು ಅವಿಭಾಜ್ಯ ಅಂಗವಾಗಿದೆ ದೇಶದಲ್ಲಿ ಮೋದಿಯವರು ಆಡಳಿತ ಮಾಡಬೇಕಾದರೆ ಪ್ರೀತನ್ ಗೆಲವು ಕಾಣುವುದು ಬಹಳ ಮುಖ್ಯವಾಗಿದೆ ಎಂದರು.
ಇದೇ ಸಭೆಗೆ ಆಗಮಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ
ಬಿ ಎಸ್ ವೈ ಮಾತನಾಡಿ ರಾಜ್ಯದಲ್ಲಿ ಬಿ ಜೆ ಪಿ ನೂರಿಪ್ಪತ್ತು ಸ್ಥಾನ ಗಳಿಸುತ್ತೆವೆ ಸರ್ಕಾರವನ್ನು ನಾವೆ ರಚಿಸುತ್ತೆವೆ ಹನೂರು ಕ್ಷೇತ್ರಕ್ಕೆ ಕೇಂದ್ರ ಸಚಿವರಾದ ಅಮೀತ್ ಷಾ ರ ಆಗಮನದಿಂದಾಗಿ ನಮಗೆ ಆನೆ ಬಲ ಬಂದಂತಾಗಿದೆ ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ಹಬ್ಬ ಹರಿದಿನಗಳಲ್ಲಿ ಪ್ರತಿ ಮನೆಗೆ ವರ್ಷಕ್ಕೆ ಮೂರು ಸಿಲಿಂಡರ್ ಹಾಗೂ ಪ್ರತಿ ಕುಟುಂಬಕ್ಕೆ ಐದು ಕೆಜಿ ಅಕ್ಕಿ ಜೊತೆಯಲ್ಲಿ ಐದು ಕೆಜಿ ಸಿರಿದಾನ್ಯ ನೀಡುತ್ತೆವೆ,ರೈತರಿಗೆ ಪ್ರತಿ ಲಿಟರ್ ಹಾಲಿಗೆ ಎರಡು ರೂ ಪ್ರೋತ್ಸಾಹ ಧನ , ರಾಜ್ಯದಲ್ಲಿ ಬಡವರಿಗೆ ಹತ್ತು ಲಕ್ಷ ಮನೆ , ಇನ್ನಿತರ ಸೌಲಭ್ಯ ನೀಡಲಾಗುವುದು,ಈಗಾಗಲೆ ಪ್ರಧಾನಿ ಮೋದಿಯವರು ದೇಶದ ಅಭಿವೃದ್ದಿಗೆ ನಿಂತಿದ್ದಾರೆ ನೀವು ಡಾಕ್ಟರ್ ಪ್ರೀತನ್ ರಿಗೆ ಸಹಕರಿಸಬೇಕಾಗಿದೆ ,ನಾವು ಹೆಣ್ಣು ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೆವೆ ,ಹನೂರು ಕ್ಷೇತ್ರದ ಜನತೆ ಮತ್ತೊಮ್ಮೆ ಡಾಕ್ಟರ್ ಪ್ರೀತನ್ ಬೆಂಬಲ ನೀಡಿ ಆಯ್ಕೆ ಮಾಡಲು ಮನವಿ ಮಾಡಿದರು.ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ವೆಂಕಟೇಶ್,ಬಿಜೆಪಿ ಮುಖಂಡ ನಿಶಾಂತ್, ಡಾಕ್ಟರ್ ದತ್ತೇಶ್ ಕುಮಾರ್ , ದಿಲೀಪ್ ಕುಮಾರ್ , ಜಸ್ವಾಲ್,ರಾಜೇಂದ್ರನ, ಪರಿಮಳನಾಗಪ್ಪ ,ಡಾಕ್ಟರ್ ಪ್ರೀತನ್ ನಾಗಪ್ಪ, ಕುಮಾರ್ ,ಶಿವಕುಮಾರ್ ,ವೆಂಕಟರಮಣಪ್ಪ ,ನೂರೋಂದು ಶೆಟ್ರು,ರಂಗಸ್ವಾಮಿ.ಸಿದ್ದಪ್ಪ, ವೀರಭದ್ರ ಇತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್