ದಕ್ಷಿಣ ಕನ್ನಡ:ಕೊಲ್ನಾಡ್, ಮುಲ್ಕಿ,ಮೇ 02, 2023 : ಭಾರತದ ಇತಿಹಾಸದಲ್ಲಿ ಮಂಗಳೂರಿನ ಹೊರವಲಯದಲ್ಲಿ ದೇಶದ ಪ್ರಧಾನಿಯೊಬ್ಬರು ಸಾರ್ವಜನಿಕ ಸಮಾವೇಶಕ್ಕೆ ಆಗಮಿಸಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡುವುದು ಹೊಸ ತೊಂದು ದಾಖಲೆಯೇ ಆಗಿದೆ. ವಿಶ್ವ ನಾಯಕ ಪ್ರಧಾನಿ ಶ್ರೀ. ನರೇಂದ್ರ ಮೋದಿಜಿ ಯವರು ಇಂದು ಬೆಳಗ್ಗೆ 10:30ಕ್ಕೆ ಮುಲ್ಕಿಯ ಕೊಲ್ನಾಡಿನಲ್ಲಿ ಸುಸಜ್ಜಿತವಾಗಿ ವ್ಯವಸ್ಥಿತಗೊಂಡ ಸಮಾವೇಶಕ್ಕೆ ಆಗಮಿಸಿ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಸಭಾಂಗಣ, ಮೈದಾನ, ಮೇಲ್ಚಾವಣಿ ಮತ್ತು ಹೆಲಿಪ್ಯಾಡ್ ನಿರ್ಮಾಣಗೊಳಿಸಲಾಗಿದೆ. ಕಳೆದ ಎರಡು ವಾರಗಳಿಂದ ಎಲ್ಲ ಸಜ್ಜುಗೊಂಡಿದ್ದು,ನಿನ್ನೆ ಕೊನೆಯ ಹಂತದ ತಯಾರಿಗಾಗಿ ಪಕ್ಷದ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ವ್ಯವಸ್ಥೆಗೆ ಪೂರ್ಣ ರೂಪ ಕೊಟ್ಟು ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ಣ ಸಮಯ ಮೀಸಲಿರಿಸಿದರು.
ಸಮಾವೇಶದ ಸ್ಥಳದಲ್ಲಿ ಬಿ ಜೆ ಪಿ ರಾಯ ವಕ್ತಾರ ಶ್ರೀ ಗಣೇಶ್ ಕಾರ್ಣಿಕ್, ಮೂಡಬಿದರೆ ಮಂಡಲ ಅಧ್ಯಕ್ಷ ಶ್ರೀ ಸುನಿಲ್ ಆಳ್ವ, ಮುಡಾ ಅಧ್ಯಕ್ಷ ಶ್ರೀ ರವಿಶಂಕರ ಮಿಜಾರ್, ಶ್ರೀ ಜಗದೀಶ್ ಅಧಿಕಾರಿ, ವಿಶ್ವ ಹಿಂದೂ ಪರಿಷತ್ ನಾಯಕ ಶ್ರೀ ಜಗದೀಶ್ ಶೇಣವ, ಶ್ರೀ ಶೊಬೇಂದ್ರ ಸಸಿಹಿತ್ಲು ಮತ್ತು ಬಿ ಜೆ ಪಿ ಯ ಹಲವಾರು ಸ್ಥಾನೀಯ ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.