ಬೀದರ:ಔರಾದ ತಾಲೂಕಿನ ನಿರ್ಗತಿಕ ಬಡವರ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ಡಾ.ಕಲ್ಲಪ್ಪ ಉಪ್ಪೆ ಬುಧವಾರ ಮಧ್ಯಾಹ್ನ 2:10ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದರೆ.
ಇವರು 1975ರಲ್ಲಿ ತಮ್ಮ ಶಿಕ್ಷಣ ವ್ಯಾಸಂಗ MBBS ಮುಗಿಸಿದರು.ಅವರು MBBS ಮುಗಿಸಿದ ಮೇಲೆ ಅವರಿಗೆ ಬಂದಂತ ಸರಕಾರಿ ಹುದ್ದೆ ತ್ಯಜಿಸಿ ಹಿಂದುಳಿದ ತಾಲೂಕಿನ ಜನರ ಅರೋಗ್ಯ ಹೀತ ದೃಷ್ಟಿಯಿಂದ ಅವರು ಔರಾದ ಪಟ್ಟಣದಲ್ಲಿ ಆಸ್ಪತ್ರೆ ತೆರೆದು ಬಡವರ ಸೇವೆ ಪ್ರಾರಂಭಿಸಿದರು.
ತಾಲೂಕಿನಲ್ಲಿ ವೈದ್ಯರಿಲ್ಲದ ಅಂದಿನ ಕಾಲದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ಸೌಲಭ್ಯ ದೊರಯಬೇಕೆಂಬ ಏಕೈಕ ಉದೇಶದಿಂದ ಜೀವನ ಪೂರ್ತಿ ಔರಾದ ಪಟ್ಟಣದಲ್ಲಿ ನೆಲೆಸಿ ನಗು ನಗುತಲೆ ರೋಗಿಗಳ ಆರೋಗ್ಯ ಗುಣಮುಖ ಮಾಡಿದರು.
ಮೃತರು ಇಬ್ಬರು ಸಹೋದರಿಯರು, ಮೂವರು ಸಹೋದರರು, ಒಬ್ಬ ಪುತ್ರ, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆಗೆ ಖಂಡೆಕೇರಿ ರಸ್ತೆಯಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ:ಅಮರ ಮುಕ್ತೆದಾರ