ಕಲಬುರ್ಗಿ: ಯಡ್ರಾಮಿ ತಾಲೂಕಿನ ವಿಧಾನಸಭೆಯ ಜೆಡಿಎಸ್ ಪಕ್ಷದ ಅಭ್ಯರ್ಥಿ ದೊಡ್ಡಪ್ಪ ಗೌಡ ಪಾಟೀಲ್ ಅವರ ಧರ್ಮಪತ್ನಿಯಾದ ನಾಗವೇಣಿ ಪಾಟೀಲಯವರು ವಡಗೇರಾ ಗ್ರಾಮದಲ್ಲಿ ಮತಯಾಚನೆ ಮಾಡಿದರು.
ದಿನವಿಡೀ ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ದೊಡ್ಡಗೌಡ ಪಾಟೀಲರ ಜನಸೇವೆಯನ್ನು ಮನವರಿಕೆ ಮಾಡಿಕೊಟ್ಟರು.
ಇಂದು ದೊಡ್ಡಗೌಡ ಪಾಟೀಲ ನರಿಬೋಳ ಇವರಿಗೆ ಗೆಲುವಿಗಾಗಿ ಪ್ರತಿಷ್ಠೆಯ ಚುಣಾವಣೆ ಕಣವಾಗಿರುವ ಮೇ ತಿಂಗಳ 10 ನೇ ತಾರೀಖಿನಂದು ಮತ ನೀಡುವುದರ ಮೂಲಕ ನಿಮ್ಮ ಮನೆ ಮಗನೆಂದು ತಿಳಿದು ಬಹುಮತದಿಂದ ಆರಿಸಿ ತರಬೇಕೆಂದು ಚಿಕ್ಕಹಂಗರಗಿ ಗ್ರಾಮದ ಜನರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಕಿರಣಗಿ ಮಾತನಾಡಿದ ಈ ಸಲ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ದೊಡ್ಡಗೌಡ ಪಾಟೀಲ ನರಿಬೋಳ ಇವರಿಗೆ 25 ಸಾವಿರ ಮತಗಳ ಅಂತರದಿಂದ ಆರಿಸಿ ಜೇವರ್ಗಿ ವಿಧಾನಸಭೆಯ ಮಾತು ಬಾಂಧವರಲ್ಲಿ ಮನವಿ ಮಾಡಿದರು.
ತಾಲೂಕಿನ ಜೆಡಿಎಸ್ ಪಕ್ಷದ ಮುಖಂಡರಾದ ಸಿದ್ದಣ್ಣ ಹೂಗಾರ, ನಿಜಣ್ಣ ದೊರೆ, ಗ್ರಾಮ ಪಂಚಾಯಿತಿ ಸದಸ್ಯರಾದ ದಸ್ತಗಿರಿ ಮುಲ್ಲಾ, ಮಲ್ಲಿನಾಥ ಯಲಗೋಡ, ಸಿದ್ದಣ್ಣ ಅವರಾದಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಚೆನ್ನಯ್ಯ ಸ್ವಾಮಿ, ಮಲ್ಲಣ್ಣ ಕಿರಣಗಿ, ಶರಣಪ್ಪ ದೊಡ್ಡಮನಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಾಶಂಕರ ನಾಯ್ಕೋಡಿ, ಬಸವರಾಜ ಯಲಗೋಡ, ಮಲ್ಲಣ್ಣ ಪೂಜಾರಿ, ಹಾಗೂ ಹಿರಿಯ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ