ಕಲಬುರಗಿ ಜೇವರ್ಗಿ ತಾಲೂಕಿನಲ್ಲಿ ಸರ್ವಾಧಿಕಾರ ಆಡಳಿತ ನಡೆಸುತ್ತಿದೆ ಈ ಆಡಳಿತ ಕೊನೆಗಾಣಬೇಕಾದರೆ ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡರಿಗೆ ಗೆಲ್ಲಿಸಿದರೆ ಜೇವರ್ಗಿಯಲ್ಲಿ ಸರ್ವ ಸಮಾಜದವರಿಗೆ ಸಾಮಾನ್ಯ ಜನರಿಗೆ ದೀನ ದಲಿತರಿಗೆ ಕಡು ಬಡವರಿಗೆ ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ ಸಿಗಲಿದೆ. ಅಧಿಕಾರ ಇದ್ದರೂ ಇರದಿದ್ದರೂ ಜನಸಾಮಾನ್ಯರಿಗೆ ತಮ್ಮ ಕೈಲಾದ ಮಟ್ಟಿಗೆ ದೊಡ್ಡಪ್ಪಗೌಡರು ಶ್ರಮಿಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಯಲ್ಲಾಲ್ಲಿಂಗ ಎಸ್.ದಂಡಗುಲ್ಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸರ್ವ ಸಮುದಾಯದವರುಅಲ್ಪ ಆಸೆ ಆಮೀಷಗಳಿಗೆ ಬಲಿ ಆಗಬಾರದು ಒಂದು ವೇಳೆ ಬಲಿ ಆದರೆ ಮತ್ತೆ ಜೇವರ್ಗಿ ತಾಲೂಕಿನಲ್ಲಿ ಸರ್ವಾಧಿಕಾರ ಆಡಳಿತ ಮುಂದುವರೆಯಲಿದೆ ಈ ಸರ್ವಾಧಿಕಾರ ಕೊನೆಗಾಣಬೇಕಾದರೆ ಮತದಾನದ ಮುಖಾಂತರ ಮಾತ್ರ ಪರಿವರ್ತನೆ ಸಾಧ್ಯ ಆದ್ದರಿಂದ ನಮ್ಮ ಯಡ್ರಾಮಿ ತಾಲೂಕಿನ ಜೇವರ್ಗಿ ತಾಲೂಕಿನ ಮತಬಾಂಧವರು ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡರಿಗೆ ಮತದಾನ ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
