ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭಜರಂಗದಳ ನಿಷೇಧ: ಡಿ.ಕೆ.ಶಿವಕುಮಾರ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆಲವು ಗ್ಯಾರಂಟಿಗಳ ಜೊತೆಗೆ,, ಭಜರಂಗದಳ ನಿಷೇದ ಇದರ ಬಗ್ಗೆ ಆವೇಶದಿಂದ ಮಾತನಾಡಿದ ಡಿ.ಕೆ.ಶಿವುಕುಮಾರ ರೋಷದಿಂದ ಮಾತನಾಡಿ ಎರಡು ದಿನಗಳಿಂದ ಚರ್ಚೆ ನಡೆಯುತ್ತಿದೆ.. ಕಾಂಗ್ರೆಸ್ ಪಕ್ಷದವರಿಗೆ ಮಾತುಗಳಲ್ಲಿ ಹಿಡಿತವಿಲ್ಲದ ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತಾಡುತ್ತಾರೆ.
ಇದರಿಂದ ಬಿಜೆಪಿ ಪಕ್ಷದವರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ಬುದ್ಧಿ ಸೀಮಿತ ಕಳೆದುಕೊಂಡು ಮಾತನಾಡುತ್ತಿರುವುದು ಎಷ್ಟು ಮಟ್ಟಿಗೆ ಸರಿ ಎಂದು ಜನರ ಮಾತಾಗಿದೆ.
ಭಜರಂಗದಳದವರು ಆಂಜನೇಯನಿಗಾಗಿ ಎಲ್ಲ ಕಡೆ ಪೂಜೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರ ಒಂದೇ ಮಾತಿನಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪೂಜೆ ನಡೆಯುತ್ತಿದೆ,
ಕಾಂಗ್ರೆಸ್ ಪಕ್ಷದವರು ಈ ಹೇಳಿಕೆ ನೀಡದೆ ಇದ್ದಿದ್ದರೆ ಆಂಜನೇಯನನ್ನು ಜನರು ಚುನಾವಣೆಗೆ ಮರೆಯುತ್ತಿದ್ದಾರಾ..? ಹಾಗಂತ ಪೂಜೆ ಮಾಡುತ್ತಿರಲಿಲ್ಲ ಅಂತ ಹೇಳುತ್ತಿಲ್ಲ.ದೇವರಿಗೆ ದಿನ ನಿತ್ಯ ಅವರವರ ಇಷ್ಟಾನುಸಾರ ಪೂಜೆ ನಡೆಯುತ್ತೆ.
ಆದರೆ ರಾಜಕೀಯದ ಪೂಜೆ ನಡೆಯೋದು ಕೆಲವು ಸಂದರ್ಭಗಳಲ್ಲಿ ಮಾತ್ರ.. ಬಿಜೆಪಿಯರಿಗೆ ಇವರ ಮೇಲೆ ಇವರಿಗೆ ನಂಬಿಕೆ ಇಲ್ಲವ?? ಎಲ್ಲಿ ನೋಡಿದರು ದಿಗ್ಗಜರುಗಳಿಂದ ಭರಾಟೆಯ ಚುನಾವಣೆ ಪ್ರಚಾರ ಮಾಡುತ್ತಾ ನಾವೇ ಗೆಲ್ಲೋದು ಅಂತ ನಂಬಿಕೆಯಿಂದ ಇರುವಾಗ ಕಾಂಗ್ರೆಸ್ ನವರ ಒಂದೇ ಒಂದು ಹೇಳಿಕೆಗೆ ಇಷ್ಟೊಂದು ಭಯವೇಕೆ:? ಕಾಂಗ್ರೆಸ್ ಪಕ್ಷದವರು ಗೆದ್ದ ಮೇಲೆ ತಾನೇ, ಭಜರಂಗ ದಳವನ್ನು ಬ್ಯಾನ್ ಮಾಡೋದು.
ಈವಾಗಲೇ ಇಷ್ಟೊಂದು ಚಿಂತೆ ಯಾಕೆ ? ಬಿಜೆಪಿಯವರ ಹೇಳಿಕೆಗಳನ್ನು ನೋಡಿದರೆ ಸೋಲಿನ ಭೀತಿ ಕಾಡುತ್ತಿರಬೇಕು ಅಂತ ಅನ್ನಿಸುತ್ತೆ.. ನಂಬಿಕೆ ಬಹಳ ಮುಖ್ಯ. ಕಾಂಗ್ರೆಸ್ ಗೆದ್ದರು ಭಜರಂಗದಳ ನಿಷೇಧ ಮಾಡುವುದು ಅಷ್ಟೊಂದು ಸುಲಭವಲ್ಲ. ಬ್ಯಾನ್ ಮಾಡೋದು ಇವರು
ಮುಸ್ಲಿಂ ಪರ ಓಲೈಕೆಗಾಗಿ ಇಂತಹ ಶಾಂತಿ ಕದಡುವ ಮಾತುಗಳನ್ನು ಆಡುತ್ತಾರೆ. ಆದಷ್ಟು ಬೇಗ ಚುನಾವಣೆ ಮುಗಿದು ಜನರಿಗಾಗಿ, ಜನರಿಗೋಸ್ಕರ,ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಕಡಿಮೆ ಮಾಡಿ ಜನರು ನೆಮ್ಮದಿಯಿಂದ ದೇವರು ಕೊಟ್ಟಿರುವ ಆಯಸ್ಸು ಆರೋಗ್ಯವನ್ನು ನೆಮ್ಮದಿಯಿಂದ ಕಳೆಯುವಂತೆ ಮಾಡುವ ಪಕ್ಷ ಗೆದ್ದು ಅಧಿಕಾರ ನಡೆಸಲಿ. ಚುನಾವಣೆ ಆಗೋವರೆಗೂ ಜರನ್ನು ಸುಮ್ಮನೆ ನೆಮ್ಮದಿಯಿಂದ ಇರೋದಕ್ಕೆ ಯಾವ ಪಕ್ಷದವರು ಬಿಡುವಂತೆ ಕಾಣುತ್ತಿಲ್ಲ , ಕಾಂಗ್ರೆಸ್ ನವರ ಕಂಟ್ರೋಲ್ ಇಲ್ಲದ ನಾಲಿಗೆಯಿಂದಾನೆ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಇನ್ನೂ ಮುಂದೆಯಾದರೂ ಬುದ್ದಿ ಕಲಿತಿಲ್ಲ ಅಂದರೆ…..
‌ ನಮ್ಮ ಬುದ್ದಿವಂತ ಜನರು ಅಷ್ಟೇ ಯಾವದಾದರೂ ಒಂದು ಪಕ್ಷಕ್ಕೆ ಬಹು ಮತ ಕೊಟ್ಟು ಹಾಗೆಯೇ ಕನಿಷ್ಠ ಕಿಂತ ಕನಿಷ್ಠ ರಾಜಕಾರಣಿಗಳನ್ನು ಬಹುಮತಗಳ ಅಂತರದಿಂದ ಗೆಲ್ಲಿಸಿ ಅವಾಗ ಮಾತ್ರ ಸೋತವರಿಗೂ ನಿರೀಕ್ಷೆ ಜಾಸ್ತಿ ಆಗುತ್ತೆ ಕಾರಣ ನೆಕ್ಸ್ಟ್ ನನ್ನನ್ನೇ ಗೆಲ್ಲಿಸುತ್ತಾರೆಂಬ ಅಚಲವಾದ ನಂಬಿಕೆಯಿಂದ
ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ
ಇನ್ನೂ ಅತೀ ಕಡಿಮೆ ಅಂತರ ದಿಂದ ಗೆದ್ದವರು ಜನರಿಗೆ ಮುಕ್ತವಾಗಿ ಯಾವಾಗಲೂ ಸಿಗುತ್ತಾರೆ. ಜನರು ಫೋನ್ ಮಾಡಿದಾಗ ಗೆದ್ದ ಅಭ್ಯರ್ಥಿಗಳೇ ಲಭ್ಯವಿರುತ್ತಾರೆ, ಕಾರಣ ಮುಂದಿನ ಚುನಾವಣೆಯಲ್ಲಿ ಸೋಲಿಸಿದರೆ ಕಷ್ಟ ಅಂತ
ಇದೆ ಬುದ್ದಿವಂತಿಕೆಯ ಮತದಾನ ಅನ್ನೋದು
ಕನಿಷ್ಠರಲ್ಲಿ , ಕನಿಷ್ಠರಿಗೆ ಅತಿಯಾಗಿ ತಮ್ಮ ಅತ್ಯಮೂಲ್ಯ ವಾದ ಮತಗಳನ್ನು ನೀಡಿ ನಿಮ್ಮ ಕ್ಷೇತ್ರದ ಜನರಿಗೆ ಸ್ಪಂದಿಸುವ ವ್ಯಕ್ತಿಯನ್ನು ಚುನಾವಣೆಯಲ್ಲಿ ನಿಮ್ಮ ಉತ್ತರ ನೀಡಿ.
ಎಲ್ಲಾ ಬುದ್ದಿವಂತ ಮತದಾರರೇ ಯೋಚಿಸಿ, ಯೋಚಿಸಿ, ಯೋಚಿಸಿರಿ… ಎಂದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ