ತಾಯಿಯ ಗರ್ಭದಿಂದ ಜಗದ ಬೆಳಕಿನ ಅಂಗಳಕೆ ಕಾಲಿರಿಸಿದ ಕೂಡಲೇ ಪ್ರತಿಯೊಬ್ಬರ ಬದುಕು ಶುರುವಾಗಿ ಕಷ್ಟನೋ ಸುಖನೋ ಯಾವುದನ್ನೂ ಲೆಕ್ಕಿಸದೇ ಸಿಗುವ ದಾರಿಯಲ್ಲಿ ಬದುಕಿ ಸಾಗಿ ಜೀವನದ ಅಂತ್ಯವನ್ನು ತಲುಪುವುದು ಮಾತ್ರ ಪ್ರತಿಯೊಬ್ಬರ ಅನಿವಾರ್ಯತೆಯೂ ಆಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಆದರೇ ಅಂತಹ ಸಾಗರದಂತಹ ಬದುಕಿನಲ್ಲಿ ಯಾವುದೇ ಅಲೆಗಳಿಗೂ ಜಗ್ಗದೇ ಅಳುಕದೆ ಬರುವ ಕಷ್ಟಗಳೆಂಬ ತೆರೆಗಳಿಗೆ ಕಿವಿಗೊಡದೆ ತನ್ನ ಬದುಕೇ ತನಗೆ ದಾರಿ ತನ್ನ ನಿರ್ಧಾರವೇ ಕೊನೆ ತನ್ನ ಆಸೆಯೇ ಮೋಕ್ಷ ಎಂಬಂತೆ ಹಿಡಿದ ಛಲವನ್ನು ಬಿಡದೇ ಎಲ್ಲೋ ಹುಟ್ಟಿ, ಎಲ್ಲೋ ಬದುಕಿ ಇನ್ನೆಲ್ಲೋ ವಾಸವಾಗಿ ಸುತ್ತ ನಾಲ್ಕಾರು ಹಳ್ಳಿಗೆ ಹೆಸರುವಾಸಿಯಾಗಿ ಕೊನೆಗೆ ಇಡೀ ಸಮುದಾಯಕ್ಕೆ ಸಮಾಜಕ್ಕೆ ಊರಿಗೆ ಎಂದೂ ಕೆಟ್ಟ ವ್ಯಕ್ತಿಯಾಗಿ ಗುರುತಿಸಿಕೊಳ್ಳದೆ ಎಲ್ಲರೊಂದಿಗೆ ಅನೋನ್ಯವಾಗಿ ಬದುಕಿ ಬಾಳಿ ಕೊನೆಗೆ ಎಲ್ಲರ ಮನದಲಿ ಅಚ್ಚಳಿಯದೇ ಉಳಿದ ಮಹಾವ್ಯಕ್ತಿಯ ರೋಚಕಥೆಯಿದು.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ತೊಂಡಿಹಾಳ ಎಂಬ ಪುಟ್ಟ ಗ್ರಾಮದಲ್ಲಿ 1938ರಲ್ಲಿ ಶ್ರೀ ಹನುಮಂತ ಹಾಗೂ ಹೇಮವ್ವ ದಂಪತಿಗಳಿಗೆ ನಾಲ್ಕು ಜನ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ ಜನಿಸಿದ ಮಹಾನುಭವಿ ಹಾಗೂ ನಾ ಕಂಡ ಅಜಾತಶತ್ರು ವ್ಯಕ್ತಿಯೇ ನನ್ನಜ್ಜ ಹನುಮಂತ ದಾಸರ.
ಅತ್ಯಂತ ಕಿತ್ತು ತಿನ್ನುವ ಬಡತನ ಹಾಗೂ ಚೆನ್ನದಾಸರ ಎಂಬ ಅಲೆಮಾರಿ ಜನಾಂಗದ ವೃತ್ತಿಯಾದ ಗೋವಿಂದ ಗೋವಿಂದ ಎನ್ನುತ್ತಾ ಕೈಯಲ್ಲಿ ಗೋಪಾಳ ಶಂಕು ಜಾಗಟೆ ಹಿಡಿದು ಮನೆ ಮನೆಗೆ ತಿರುಗಿ ದಾಸಪ್ಪ ಬಂದಾನ ಎಂದು ಮನೆ ಬಾಗಿಲಿಗೆ ನಿಂತಾಗಿ ಊರಿನ ಪ್ರತೀ ಮನೆಯವರು ಬಿಸಿ ಬಿಸಿಯಾದ ಅಡುಗೆಯನ್ನು ದಾಸಪ್ಪನಿಗೆ ತೆಗೆದು ಇಟ್ಟು ಕೊಡುತ್ತಿದ್ದರು ಅಂತಹ ವಿಭಿನ್ನತೆಯಿಂದ ಪಡೆದ ಆಹಾರದಿಂದ ಮತ್ತು ಯಾರದೇ ಹೊಲದಲ್ಲಿ ರಾಶಿ ಮಾಡಿ ಚೀಲಕ್ಕೆ ತುಂಬುವುದಕ್ಕಿಂತ ಮೊದಲೇ ದಾಸಪ್ಪನಿಗೆ ಕಾಳು ಕಡಿ ಕೊಟ್ಟು ತಮ್ಮ ಮುಂದಿನ ಕಾರ್ಯ ನಡೆಸುವಂತಹ ಹಾಗೂ ಕೆಳಸಮುದಾಯಗಳಿಗೆ ಗುರುಗಳು ಆಗಿರುವುದಷ್ಟೇ ಅಲ್ಲದೇ ಲಿಂಗಾಯತ ಸಮುದಾಯದ ಮನೆಗಳಲ್ಲಿಯೂ ನಡೆಯುವ ಪ್ರತಿಯೊಂದು ಪೂಜೆ ಪುನಸ್ಕಾರಗಳಿಗೆ ಸ್ವಾಮಿಗಳಂತೆಯೇ ದಾಸಪ್ಪನವರಿಗೆ ಮೊದಲ ಆಧ್ಯತೆ ನೀಡುವಂತಹ ಪದ್ಧತಿ ಮತ್ತು ಪರಂಪರೆಯಲ್ಲಿ ಬದುಕಿ ಬೆಳೆದ ಒಂದು ಜೀವವದು. ಅಷ್ಟೊಂದು ಕಷ್ಟವಿದ್ದರೂ ಆಗಿನ ಕಾಲದಲ್ಲಿ 4ನೇ ತರಗತಿ ಶಾಲೆ ಕಲಿತು ಕಿತ್ತು ತಿನ್ನುವ ಬಡತನದ ಪರಿಸ್ಥಿತಿಗಾಗಿ ಶಾಲೆ ಬಿಟ್ಟು ಚಿಕ್ಕಂದಿನಲ್ಲೇ ತಂದೆ ತಾಯಿ ಕುಟುಂಬದೊಂದಿಗೆ ಕಕೂಲಿ ಮಾಡಿ ಬದುಕಿದ ಬಡಪಾಯಿ ಜೀವವದು.
ಅವರು ತಮ್ಮ 16ನೇ ವಯಸ್ಸಿಗೆ ತಮಗಿಂತ ಸಣ್ಣ ವಯಸ್ಸಿನ ಹೆಣ್ಣುಮಗು ಶಾಂತಮ್ಮ ಎಂಬುವವರನ್ನು ವಿವಾಹವಾಗಿ ಇಡೀ ಪರವಾರವೇ ದುಡಿದು ಬದುಕು ಸಾಗಿಸಲಾರಂಭಿಸಿತು. ಹಳ್ಳಿಗಳಲ್ಲಿ ಕೆಲವು ದಿನಗಳಷ್ಟೇ ಕೆಲಸ ಮತ್ತು ಸಿಗುವ ಸಂಬಳಕ್ಕೆ ಜೀವನ ಸಾಗಿಸಲು ಕಷ್ಟವಾಗುತ್ತದೆ ಎಂದು ಯಾರದೋ ಪರಿಚಯದ ಮೇಲೆ ಹುಬ್ಬಳ್ಳಿ ನಗರಕ್ಕೆ ಬಂದು ಅಲ್ಲಿ ಕಟ್ಟಿಗೆ ಅಡ್ಡಾ ಒಳಗೆ ಕೆಲಸಕ್ಕೆ ಸೇರಿಕೊಂಡು ಪೈಸೆ ಲೆಕ್ಕಾಚಾರದಲ್ಲಿ ದಿನಾಲು ಕಟ್ಟಿಗೆ ಹೊಡೆದು ಕೆಲವು ವರ್ಷಗಳ ಜೀವನ ಅಲ್ಲೇ ಕಳೆದು ಅವರ ತಂದೆ ತಾಯಿ ಹಾಗೂ ಅಣ್ಣನಾದ ಕನಕಪ್ಪ ಮತ್ತು ಅವರ ಕುಟುಂಬವನ್ನು ಬಿಟ್ಟು ತಮ್ಮ ಸೋದರಮಾವನಾದ ಅಂದರೇ ಸಹೋದರಿಯ ಗಂಡನು ಅವರನ್ನು ಕರೆಸಿ ನೀನು ನಮ್ಮೊಂದಿಗೆ ಇರು ಇಲ್ಲೇ ನಮ್ಮೂರಲ್ಲೇ ಅಂದರೇ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹೊಗರನಾಳ ಗ್ರಾಮದಲ್ಲಿ ಅಲ್ಪ ಸ್ವಲ್ಪ ನನಗೆ ಸಹಾಯ ಮಾಡುತ್ತಾ ಹೇಗೂ ಸೋದರಮಾವನಿಗೆ ಮಕ್ಕಳಿರದ ಕಾರಣ ಅವರನ್ನ ತಮ್ಮೊಂದಿಗೆ ಇದ್ದು ಇರುವಂತೆ ಇಲ್ಲೇ ನಿನಗೆ ಆಶ್ರಯ ನೀಡುತ್ತೇನೆ ಬೇರೆಲ್ಲೋ ಹೋಗಿ ದುಡಿಯೋದು ಬೇಡ ನೀವಿಬ್ಬರೂ ದಂಪತಿಗಳು ಇನ್ನೂ ದೊಡ್ಡವರೂ ಅಲ್ಲ ಜೀವನ ತುಂಬಾ ಕಷ್ಟವಿದೆ ಎಂದು ಬದುಕಿನ ಅರಿವು ತಿಳಿಸುತ್ತಾ ಒಳ್ಳೆಯ ಮಾರ್ಗಗಳನ್ನು ಹಾಕಿಕೊಟ್ಟು ತಮ್ಮಂತಯೇ ಮನೋಭಾವವನ್ನು ಬೆಳೆಸಿಕೊಟ್ಟ ಆಶ್ರಯದಾತ ಸೋದರಮಾವ ಕಭೀರಪ್ಪ. ಆದರೇ ಅಷ್ಟೊತ್ತಿಗಾಗಲೇ ಅಂದರೇ ಅಜ್ಜ ಹನುಮಪ್ಪನಿಗೆ ಸುಮಾರು 20 ವರ್ಷಗಳು ಮತ್ತು ಒಬ್ಬ ಹಿರಿಯ ಮಗ(ಚೆನ್ನಪ್ಪ)ನಿಗೆ ಜನ್ಮವಾಗಿತ್ತು ಹೊಗರನಾಳ ಗ್ರಾಮದಲ್ಲಿಯೂ ಕೂಡ ಅವರ ಪರಿಸ್ಥಿತಿ ಕಿತ್ತು ತಿನ್ನುವ ಬಡತನ ಮಾತ್ರ ಮರೆಯಾಗಿರಲಿಲ್ಲ ಹೇಗೆಂದರೆ ಅವರು ವಾಸಿಸುತ್ತಿದ್ದದ್ದು ಮಾತ್ರ ದನದ ಕೊಟ್ಟಿಗೆ(ಕೊಂಡವಾಡ ಅಥವಾ ಹಕ್ಕಿ )ಯೊಳಗೆ ಬರಬರುತ್ತಾ ಊರಿನ ಗೌಡರು ಹಿರಿಯರು ಸೇರಿ ಸರ್ಕಾರಿ ಯೋಜನೆಗಳಲ್ಲಿ ಮನೆ ನಿರ್ಮಾಣಕ್ಕೆ ಸಹಕಾರ ನೀಡಿ ಮನೆ ಕಟ್ಟಿಕೊಡುವಲ್ಲಿಯೂ ಕೂಡ ಊರಿನ ಗೌಡರದೇ ಸಹಾಯವಾಗಿದೆ. ಹೀಗೆ ಬರಬರುತ್ತಾ ಎಲ್ಲರೊಂದಿಗೆ ಅವಿನಾಭಾವ ಸಂಭಂದ ಬೆಸೆದು ಸೋದರಮಾವ ತೀರಿಹೋದ ಮೇಲೆ ಅವರ ಮಾರ್ಗದರ್ಶನದಲ್ಲೇ ನನ್ನ ಅಜ್ಜನೂ ಕೂಡ ಎಲ್ಲರೊಂದಿಗೆ ಸ್ನೇಹ ಸಂಬಂಧ ಬೆಸೆದು ಜೀವನ ನಡೆಸಿದ. ಮುಂದೆ ಬಡ ಕುಟುಂಬಕ್ಕೆ ವರ್ಷಕ್ಕೆ – ಎರೆಡು ವರ್ಷಕ್ಕೊಂದರಂತೆ 5 ಮಕ್ಕಳ ಜನನವಾಗತೊಡಗಿದವು. ಹೀಗೆ ಅನೋನ್ಯತೆಯ ಸಂಭಂದವನ್ನು ಸುತ್ತಲಿನ ಎಲ್ಲಾ ಗ್ರಾಮದವರೊಂದಿಗೆ ಹಾಗೂ ಎಲ್ಲಾ ಸಮುದಾಯಗಳ ನಾಗರಿಕರೊಂದಿಗೆ ಅವರಿವರೆನ್ನದೇ ಜಾತಿ ಧರ್ಮದ ಭೀತಿಯನ್ನು ತೋರದೇ ಒಂದೇ ಮನೋಭಾವನೆಯಲ್ಲಿ ಬೆರೆತು ನಗುನಗುತ್ತಾ ತಮ್ಮ 6 ಜನ(4 ಗಂಡು,2 ಹೆಣ್ಣು)ಮಕ್ಕಳೊಂದಿಗೆ ಸಂಸಾರ ಸಾಗಿ ಮಕ್ಕಳಿಗೆ ಎಲ್ಲರಿಗೂ ಶಿಕ್ಷಣ ನೀಡುತ್ತಾ ತಾವು ಮಾತ್ರ ಕೃಷಿಯಲ್ಲಿ ರೈತಾಪಿ ಜೀವನವನ್ನು ನಡೆಸಿ ಮಕ್ಕಳಿಗೂ ಒಂದು ದಾರಿಯನ್ನು ತೋರಿಸಿ ಅದೇ ದಾರಿಯಲ್ಲಿ ಸಾಗುವಂತೆ ತಿಳಿಹೇಳಿ ತಮ್ಮ ಬದುಕನ್ನು ಸಾಗಿಸಿದರು ಹಾಗೆಯೇ ಅಷ್ಟೊತ್ತಿಗಾಗಲೇ ಅಂದರೇ ತಮ್ಮ ಸೋದರಮಾವನಾದ ಕಭೀರಪ್ಪ ತಾನು ಸಾಯುವಷ್ಟರಲ್ಲೇ ತನಗೆ ಸೇರಿದ್ದ ಆಸ್ತಿಯನ್ನು ಹನುಮಪ್ಪನಿಗೆ ಈ ಮುಂಚೆ ಕೊಟ್ಟಿದ್ದ ಮಾತಿನಂತೆ ಆಸ್ತಿಯನ್ನು ಹೆಸರಿಗೆ ಮಾಡಿ ತೀರಿಹೋಗುತ್ತಾನೆ. ಅದೇ ಆಸ್ತಿಯನ್ನು ಅತೀ ಜಾಗ್ರತೆಯಿಂದ ಕಾಪಾಡುತ್ತಾ ಬಂದು ತನ್ನ ಮಕ್ಕಳು ವಯಸ್ಸಿಗೆ ಬಂದಾಗ ಪ್ರತಿಯೊಬ್ಬರಿಗೆ ಆಸ್ತಿಯನ್ನು ಹಂಚಿ ಹೆಸರಿಸುತ್ತಾನೆ. ಕೃಷಿಯಲ್ಲಿ ಯಾವುದೂ ಬೆಳೆ ಸರಿಯಾಗಿ ಬಾರದೇ ಇರುವುದು ಸರಿಯಾಗಿ ಮಳೆಯೂ ಬರದೇ ಇರುವುದು ಇದನ್ನು ಮನಗಂಡ ಹನುಮಪ್ಪ ಬಹಳ ಬೇಸರಗೊಂಡಿರುತ್ತಾನೆ ಮುಂದೆ ಹೊಲದಲ್ಲಿದ್ದ ಕೆಲವು ಮರಗಳನ್ನು ಕಡಿದು ಮಾರಿದಾಗ ಬಂದ ಹಣದಿಂದ ಹಾಕಿಸಿದಾಗ ಯಶಸ್ವಿಯಾಗಿ ನೀರು ಕಾಣಿಸಿಕೊಂಡು ಹೊಲದ ತುಂಬೆಲ್ಲಾ ನೀರು ಹರಿದಾಡಿದಾಗ ಹನುಮಪ್ಪನ ಮನದಲ್ಲಿ ಏನೋ ಸಂತೋಷ ಉಕ್ಕಿ ಬಂತು ವಿಭಿನ್ನ ಬೆಳೆಗಳು ವ್ಯವಸಾಯ ಶುರುವಾಯ್ತು ಹೀಗೆ ಸಾಗಿದ್ದ ಜೀವನ ಸುಮಾರು 80 ವರ್ಷದ ವೃದ್ಧಪ್ಯಕ್ಕೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳತೊಡಗಿತು ಅಲ್ಲಲ್ಲಿ ದವಾಖನೆಗಳಿಗೆ ಚಿಕಿತ್ಸೆ ಕೊಡಿಸಲಾಯಿತು ಚೇತರಿಕೆಯಾಗದೆ ಮುಂದೆ ಅದೇ ಈ ಹಿಂದೆ ತನ್ನ ಅರ್ಧ ಬದುಕನ್ನೇ ರೂಪಿಸಿದ್ದ ಹುಬ್ಬಳ್ಳಿ ನಗರದ ಎಸ್. ಡಿ. ಎಂ. ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡುತ್ತಿದ್ದಂತೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 17-04-2017 ರಂದು ಸಾವನ್ನಪ್ಪುತ್ತಾರೆ. ತಂದೆಯ ಮಾರ್ಗದರ್ಶನದಂತೆ ಮಕ್ಕಳು ಮೊಮ್ಮಕ್ಕಳು ಸಾಗಿ ಅವರ ಹೆಸರನ್ನು ತಂದು ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಮುನ್ನೆಡೆಯಬೇಕಿದೆ ಹಾಗೆಯೇ ನನ್ನ ಅಜ್ಜ ಯಾವಾಗಲೂ ನನ್ನೊಂದಿಗೆ ಕುಳಿತು ತನ್ನ ಜೀವನದ ಎಲ್ಲಾ ನೋವು ನಲಿವುಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ ಮತ್ತು ನಮ್ಮ ಸಂಬಂಧಿಕರನ್ನು ಹಾಗೂ ಸಂಪ್ರದಾಯಗಳನ್ನೂ ಸಹ ಪರಿಚಯಿಸುತ್ತಿದ್ದ ಮೇಲಾಗಿ ಬದುಕಿನ್ನ ಎಲ್ಲರೊಂದಿಗೆ ಸ್ನೇಹ ಸಂಬಂಧದಿಂದ ಬದುಕಬೇಕೆಂದು ಆಗಾಗ ಹೇಳಿದ ನೆನಪುಗಳು ಇಂದಿಗೂ ಮರೆಮಾಚಿಲ್ಲ ಮತ್ತು ಅವರಂತೆಯೇ ನಾವೆಲ್ಲಾ ಅವರ ಸಂಪನ್ಮೂಲಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅಂದರೇ ನಮ್ಮ ಹೊಸ ಪೀಳಿಗೆಗೆ ಮಕ್ಕಳಿಗೆ ಮಕ್ಕಳ ಕುಟುಂಬಗಳಿಗೆ ಆಸರೆಯಾಗುವ ಸಲುವಾಗಿ ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯ ಮತ್ತು ಕರ್ತವ್ಯವೂ ಹೌದು ಹಾಗೆಯೇ ನಮ್ಮ ಹಿರಿಯರಿಗೆ ಗೌರವ ಮತ್ತು ಘನತೆಯನ್ನು ಹೆಚ್ಚಿಸಬೇಕಾದರೆ ನಾವು ಸಾಧನೆ ಮಾಡಿ ಅವರ ಹೆಸರನ್ನು ವಿವಿಧ ಕ್ಷೇತ್ರದಲ್ಲಿ ಅಲ್ಲದೇ ಅವರು ನಡೆದಾಡಿದ ಪ್ರತೀ ಸ್ಥಳದಲ್ಲಿಯೂ ಅವರ ಹೆಸರು ಅಜರಾಮರವಾಗಿರುವಂತೆ ಮಾಡುವುದು ಮಕ್ಕಳಾದ, ಮೊಮ್ಮಕ್ಕಳಾದ, ಕುಟುಂಬದ ಪ್ರತೀ ಸದಸ್ಯರೂ ಮಾಡಬೇಕಾದ ಮಹತ್ತರ ಕೆಲಸವೂ ಕೂಡ ಅಂದಾಗಲೇ ಅವರ ಆತ್ಮಕ್ಕೆ ಶಾಂತಿ ಲಭಿಸುವುದು ಖಚಿತವಾಗುತ್ತದೆ ಮುಖ್ಯವಾಗಿ ನನ್ನ ಅಜ್ಜ-ನನ್ನ ಹೆಮ್ಮೆ ಯಾಕೆಂದರೇ ಚಿಕ್ಕಂದಿನಲ್ಲೇ ನಾನು ಅಜ್ಜ ಅಜ್ಜಿಯ ಆಶ್ರಯದಲ್ಲೇ ಬೆಳೆದವನು ಮತ್ತು ಅವರು ಯಾವುದೇ ಊರಿಗೆ ಹೋದರೂ ನನ್ನನ್ನೂ ಕರೆದುಕೊಂಡು ಹೋಗಿ ಇಂದು ಎಷ್ಟೋ ಸಂಬಂಧಿಕರುಗಳಿಗೆ ಪರಿಚಯಿಸಿ ಒಬ್ಬಂಟಿಯಾದರೂ ಕುಗ್ಗದೇ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಟ್ಟ ನಮ್ಮೆಲ್ಲರ ಪಾಲಿನ ಕರುಣಾಮಯಿ ಮಹಾನುಭವಿ ಮತ್ತು ಯಾರೊಂದಿಗೂ ವಿರೋಧ ಕಟ್ಟಿಕೊಂಡಿರದ ನನ್ನೂರಿನ ಅಜಾತಶತ್ರು ಮಾಹಾನಭಾವಿ ನನ್ನ ಇಡೀ ಸಮುದಾಯದ ಮಾಹಾನ್ ಚೇತನ.
- ಹನುಮಂತ ದಾಸರ ಹೊಗರನಾಳ
ಯುವ ಬರಹಗಾರರು