ಭದ್ರಾವತಿ:ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣ ಬಳಿಯಿಂದ ಬೃಹತ್ ರೋಡ್ ಶೋ ಮತ್ತು ದ್ವಿಚಕ್ರ ಮತ್ತು ಕಾರ್ ಗಳ ಮೂಲಕ ಪ್ರಚಾರ ನಡೆಸಿದರು.
ಒಂದೆಡೆ ಬಿಜೆಪಿ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷಗಳು ರೋಡ್ ಶೋ ನಡೆಸಿವೆ.
ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಸಮನೆ ಶಿವಾಜಿ ಸರ್ಕಲ್ ತಲುಪಿ ನಂತರ ಹೊಸಸೇತುವೆ ರಸ್ತೆ ಗಳಲ್ಲಿ ರೋಡ್ ಶೋ ನಡೆಯಿತು. ಪಕ್ಷದ ಪ್ರಮುಖರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಮನೆ ಮನೆ ಪ್ರಚಾರ ಬಾಕಿ ಉಳಿದಿದ್ದು, ಪಕ್ಷದ ಅಭ್ಯರ್ಥಿ, ಶಾರದ ಅಪ್ಪಾಜಿ ಜೆಡಿಎಸ್ ಪಕ್ಷದ ಅಧ್ಯಕ್ಷ ಅರ್. ಕರುಣಾಮೂರ್ತಿ, ಕರಿಯಪ್ಪ, ಜೆ.ಪಿ. ಯೋಗೆಶ್, ಲೋಕೇಶ್ವರ್ ರಾವ್, ತಿಮ್ಮೆಗೌಡ, ಎನ್. ಕೃಷ್ಣಪ್ಪ, ಮಹಮ್ಮದ್ ಸನಾವುಲ್ಲ, ತ್ಯಾಗರಾಜ, ರವಿಕುಮಾರ್, ಮಧುಕುಮಾರ್, ಸುರೇಶ್ ಮತ್ತು ನಗರಸಭಾ ಸದಸ್ಯರಾದ ಬಸವರಾಜ್ ಅನೇಕೊಪ್ಪ, ವಿಜಯಮ್ಮ ಸೇರಿದಂತೆ ಹಲವು ಸದಸ್ಯರು, ಪಕ್ಷದ ಮುಖಂಡರು ಸೇರಿದಂತೆ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.