ಶ್ರದ್ಧೆ ಭಕ್ತಿಗಳ ಗಂಗೆ ಪ್ರವಹಿಸುತಿಹಳು ಯುಗಗಳಿಂದ ಧೃಡತೆಯಲಿ ನಾನಿಲ್ಲ ಹಿಂದೆ ಏಳುಬೀಳುಗಳ ಕಂಡಿಹೆನು ಆದರೆ ನಂಬಿಕೆಯ ಧಾರೆ ಬತ್ತಲಿಲ್ಲವೆಂದೂ ನನ್ನ ಮೂಲಕವೇ ನಿನಗೆ ಸಲ್ಲುವುದು ಪ್ರಾರ್ಥನೆ ಭಕ್ತರ ನೋವು ನಲಿವುಗಳಿಗೆ ನಾ ಸಾಕ್ಷಿ ನಿನ್ನ ಕಿವಿಯಾಗಿ ಕೇಳುವ ಭಾಗ್ಯವೆನಗೆ ಕರುಣಿಸಿದೆ ನೀನಿಲ್ಲದೇ ನಾನಲ್ಲ ಪೂರ್ಣ ನಾನಿಲ್ಲದೇ ನಿನ್ನ ಆಲಯ ಅಪೂರ್ಣ ಜಗದಿ ಇದಕಿಂತಲೂ ಇಹುದೆ ಅರ್ಥಪೂರ್ಣ? ಭಕ್ತ ಭಗವಂತನ ನಡುವಿನ ಬಂಧಕೆ ಬೇಕೆ ವ್ಯಾಖ್ಯಾನ
-ಶ್ರೀಮತಿ ಮಂಜುಶಾ ನಾಯಕ್
ಜೆ ಎ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು ಅಥಣಿ