ಇಂಡಿ : ಇಂಡಿ ಮತಕ್ಷೇತ್ರದಿಂದ ಕಾಂಗ್ರೆಸ್ನ ಯಶವಂತರಾಯಗೌಡ ಪಾಟೀಲ ಹ್ಯಾಟ್ರಿಕ್ ಗೆಲುವು ಸಾಧನೆ ಮಾಡಿದ್ದಾರೆ.
ಅವರು ೨೦೧೩,೨೦೧೮ ಮತ್ತು ಈಗ ೨೦೨೩ ರಲ್ಲಿ ಮೂರು ಚುನಾವಣೆಯಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಯಶವಂತರಾಯಗೌಡ ಪಾಟೀಲ ೨೦೧೩ ರಿಂದ ೨೦೨೩ ರ ವರೆಗೆ ೩೨೦೦ ಕೋಟಿ ರೂ ಅನುದಾನ ತಂದು ಅಭಿವೃದ್ದಿ ಮಾಡಿದ್ದರು. ಅದಲ್ಲದೆ ಇಂಡಿಗೆ ೨೪*೭ ಕುಡಿಯುವ ನೀರು,ಭೀಮಾಶಂಕರ ಸಕ್ಕರೆ ಕಾರ್ಖಾನೆ, ಇಂಡಿಯಲ್ಲಿ ನಿಂಬೆ ಅಭಿವೃದ್ದಿ ಮಂಡಳಿ ಸೇರಿದಂತೆ ಹತ್ತು ಹಲವಾರು ಕೆಲಸಗಳು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಯಶವಂತರಾಯಗೌಡ ಪಾಟಿಲರು ಮೊದಲ ಸುತ್ತಿನಿಂದಲೂ ಕೊನೆಯ ಸುತ್ತಿನ ವರೆಗೂ ಮುನ್ನಡೆ ಕಾಯ್ದು ಕೊಂಡು ಬಂದಿದ್ದಾರೆ.
ಯಶವಂತರಾಯಗೌಡ ಪಾಟೀಲರಿಗೆ ೭೧೭೮೫ ಮತಗಳು,ಜೆಡಿ ಎಸ್ ನ ಬಿ.ಡಿ.ಪಾಟೀಲರಿಗೆ ೬೧೪೫೬ ಮತಗಳು ಪಡೆದಿದ್ದಾರೆ.ಯಶವಂತರಾಯಗೌಡ ಪಾಟೀಲರು ೯೬೯೦ ಮತಗಳಿಂದ ಗೆದ್ದಿದ್ದಾರೆ.
ಕಳೆದ ಬಾರಿ ಯಶವಂತರಾಯಗೌಡ ಪಾಟೀಲರಿಗೆ ೫೦೪೦೧ ಮತಗಳು, ಜೆಡಿ ಎಸ್ ನ ಬಿ.ಡಿ.ಪಾಟೀಲರಿಗೆ ೪೦೪೬೩ ಮತಗಳು ಬಂದಿವೆ.
ಇಂಡಿ ಮತಕ್ಷೇತ್ರದಲ್ಲಿ ಮತಗಳು ಪಡೆದ ವಿವರ
ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್ ೭೧೭೮೫, ಬಿ.ಡಿ.ಪಾಟೀಲ ಹಂಜಗಿ ಜೆಡಿ ಎಸ್ ೬೧೪೫೬, ಕಾಸುಗೌಡ ಬಿರಾದಾರ ಬಿಜೆಪಿ ೩೯೮೬೨ , ಗೋಪಾಲ ಪಾಟೀಲ ಎಎಪಿ ೩೩೫೩,ನಾಗೇಶ ಶಿವಶರಣ ಬಿಎಸ್ಪಿ ೭೩೮,ಅಶೋಕ ಜಾಧವ ಕೆಆರ್ಎಸ್೯೧೫, ಕವಿತಾ ಕಟಕದೊಂಡ ಪಕ್ಷೇತರ ೫೭೨, ಎಂ.ಎ. ಬಾಗವಾನ ಪಕ್ಷೇತರ ೯೨೨,ಗೊಲ್ಲಾಳಪ್ಪಗೌಡ ಜ್ಯೋತಿಗೊಂಡ ಪಕ್ಷೇತರ ೩೭೦, ನೋಟಾ ೮೮೬ ಮತಗಳನ್ನು ಪಡೆದಿದ್ದಾರೆ
ವರದಿ. ಅರವಿಂದ್ ಕಾಂಬಳೆ ಇಂಡಿ