ಕಲಬುರಗಿ ಜಿಲ್ಲೆಯ ಜೇವರ್ಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ವಿದ್ಯುತ್ ಕೈಕೊಟ್ಟು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಬಂದ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಜನರಲ್ ವಾರ್ಡಿಗೆ
ಯು.ಪಿ.ಎಸ್. ವ್ಯವಸ್ಥೆ ಇದ್ದು ವಿದ್ಯುತ್ತಿನ ಯಾವುದೇ ತೊಂದರೆ ಇಲ್ಲ ಹಾಗೂ ಸಾಮಾನ್ಯ ರೋಗಿಗಳಿಗೆ ಸವಲತ್ತು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಯುವ ಕೋಣೆಯಲ್ಲಿ ಮಾತ್ರ ಜನರೇಟರ್ ಸೌಲಭ್ಯವಿಲ್ಲ.
ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಲಾಗಿದ್ದು ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ತುರ್ತು ಸಂದರ್ಭದಲ್ಲಿ ವಿದ್ಯುತ್ ಸಂಪರ್ಕದ ಸೌಲಭ್ಯ ಇಲ್ಲದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇಂದು ಇಲ್ಲಿನ ಮೂರು ಜನ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ ಜನರು ಪರದಾಡಿ ವಿದ್ಯುತ್ ಸಂಪರ್ಕ ಬಂದ ನಂತರ ಚಿಕಿತ್ಸೆ ಮಾಡುವಂತೆ ಇಲ್ಲಿನ ನೇತ್ರ ತಜ್ಞರಿಗೆ ಪರಿಪರಿಯಾಗಿ ವಿನಂತಿಸಿಕೊಂಡರೂ ಸಹ ಅವರು ಕಿವಿಗೆ ಹಾಕಿಕೊಳ್ಳದೆ ಇರುವುದು ತಿಳಿದು ಬಂದಿದೆ ಆಸ್ಪತ್ರೆಯ ರೋಗಿಗಳ ಪರಿಸ್ಥಿತಿಯನ್ನು ದೇವರೆ ಬಲ್ಲ.
ಸರ್ಕಾರಿ ಆಸ್ಪತ್ರೆ ಎಂದರೆ ಸಾರ್ವಜನಿಕರು ಮೊದಲೇ ಅಸಡ್ಡೆ ತೋರುತ್ತಾರೆ ತುರ್ತು ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸಲು ಅಗತ್ಯ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದು ಹಾಗೂ ಜನರೇಟರ್ ಸಂಪರ್ಕ ಸರಿಯಾಗಿ ನೀಡದಿರುವುದು ಸಹ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಂತೆ ದೂರವಾಣಿ ಮೂಲಕ ಮಾತನಾಡಿದಾಗ ಇಲ್ಲಿನ ತಾಲೂಕ ವೈದ್ಯಾಧಿಕಾರಿಗಳು ಸಂಬಂಧಪಟ್ಟವರಿಗೆ ಸಂಪರ್ಕಿಸಿ ಮಾತನಾಡಿ ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.ಆದರೆ ವಿದ್ಯುತ್ ಸಂಪರ್ಕ ಬಂದ ನಂತರ ವೈದ್ಯರು ನಮ್ಮ ಸಮಯ ಮುಗಿದಿದೆ ಎಂದು ಅಲ್ಲಿಂದ ಜಾರಿಕೊಂಡಿದ್ದು,ಕಣ್ಣಿನ ಚಿಕಿತ್ಸೆಗಾಗಿ ಇಂಜೆಕ್ಷನ್ ತೆಗೆದುಕೊಂಡು ಕುಳಿತಿದ್ದ ಮಹಿಳೆಯೊಬ್ಬರು ನರಕಯಾತನೆ ಅನುಭವಿಸಿದ್ದಾರೆ ಈ ಕುರಿತಂತೆ ತಾಲೂಕ ವೈದ್ಯಾಧಿಕಾರಿಗಳಾದ ಡಾ:ಸಿದ್ದು ಪಾಟೀಲ್ ಮರಳಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ಲ.
ಜಿಲ್ಲಾ ವೈದ್ಯಾಧಿಕಾರಿಗಳಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬಾರದಿದ್ದಾಗ ಅನಿವಾರ್ಯವಾಗಿ ಇಲ್ಲಿ ಜನರು ತಮ್ಮ ಮನೆಗಳಿಗೆ ವಾಪಸ್ ಆದರು ತಾಲೂಕು ಆಸ್ಪತ್ರೆಯಲ್ಲಿ ಈ ರೀತಿ ಅವ್ಯವಸ್ಥೆಯಾದರೆ ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ಪರಿಸ್ಥಿತಿಯನ್ನು ಊಹಿಸಲು ಕಷ್ಟವಾಗಿದೆ.
ವರದಿಃಚಂದ್ರಶೇಖರ ಎಸ್ ಪಾಟೀಲ್