ಬೀದರ:ಔರಾದ ತಾಲೂಕಿನ ಯನಗುಂದಾ ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಕು.ಬಸವಜ್ಯೋತಿ ಬಾಬುಗೊಂಡ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ತೇರ್ಗಡೆ ಹೊಂದಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ತೊಂದರೆಯಲ್ಲಿರುವುದನ್ನು ನಮ್ಮ ಕರುನಾಡ ಕಂದ ದೈನಂದಿನ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು ಇದನ್ನು ಗಮನಿಸಿ ಬೀದರನ ಗುಮ್ಮೆ ಕಾಲೋನಿಯ ಶ್ರೀ ವೈಷ್ಣದೇವಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ನಿನ್ನೆ ಬಸವಜ್ಯೊತಿಗೆ ಕಲಿಕಾ ಸಾಮಗ್ರಿಗಳು ಹಾಗೂ ಹತ್ತು ಸಾವಿರ ನಗದು ಹಣ ನೀಡಿ ಪ್ರೋತ್ಸಾಹ ನೀಡಿ,ಸನ್ಮಾನಿಸಿ ನಿನ್ನ ವಿದ್ಯಾಭಾಸಕ್ಕೆ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಆತ್ಮಸ್ತೈರ್ಯ ತುಂಬಿದರು.
ಇತ್ತೀಚೆಗೆ
“ಪ್ರತಿಭಾವಂತ ಬಾಲೆಗೆ ಪ್ರಜ್ಞಾವಂತರ ಆಶ್ರಯ” ಅಂಕಣ ಪ್ರಕಟವಾಗಿತ್ತು. ಇದನ್ನು ನೋಡಿ ಖುದ್ದಾಗಿ ಯನಗುಂದಾ ಗ್ರಾಮದ ಮಗುವಿನ ಮನೆಗೆ ಭೇಟಿ ನೀಡಿದ ಅವರು, ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಿರಲಿ, ಇಂತಹ
ಬಡ ಕುಟುಂಬದ ಮಕ್ಕಳೇ ಸಾಧನೆಗೈಯುವುದು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಗುವಿನ ಅಜ್ಜ ಜ್ಞಾನಗೊಂಡ್,ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು,ಮುಖ್ಯ ಶಿಕ್ಷಕ ಶಾಮಸುಂದರ್ ಖಾನಾಪೂರ್,ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ,ಪತ್ರಕರ್ತ ಸಂತೋಷ ಚಾಂಡೇಶ್ವರ,ಕರುನಾಡ ಕಂದ ವರದಿಗಾರರಾದ ಅಮರ ಮುಕ್ತೆದಾರ ಲಕ್ಷಣರೆಡ್ಡಿ ಗಂಗಾಪೂರೆ,ದತ್ತಾತ್ರಿ ಬಾವುಗೆ, ಬಸವರಾಜ ಘುಳೆ ಸೇರಿದಂತೆ ಇನ್ನಿತರರಿದ್ದರು.
ವರದಿ:ಅಮರ ಮುಕ್ತೆದಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.