ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ವೇದಾವತಿ ನದಿಯಿಂದ ಹಾಡಹಗಲೇ ಮರಳು ದಂಧೆ ನಡೆಯುತ್ತಿದ್ದು ಟ್ರಾಕ್ಟರ್ ನಲ್ಲಿ ತುಂಬಿಕೊoಡು ಅಕ್ರಮ ಮರಳು ಸಾಗಿಸುತ್ತಿದ್ದರೂ ಕೂಡಾ ಈ ಅಕ್ರಮವನ್ನು ತಡೆಯುವಲ್ಲಿ ಅಧಿಕಾರಿಗಳ ವಿಫಲತೆ ಎದ್ದು ಕಾಣುತ್ತಿದೆ.
ಅಕ್ರಮ ಮರಳು ತಡೆಗೆ ಸಂಬಂಧಿಸಿದ ಕಂದಾಯ ಅಧಿಕಾರಿಗಳು,ಭೂ ಗಣಿ ವಿಜ್ಞಾನ ಮತ್ತು ಅರಣ್ಯ ಇಲಾಖೆ ಜವಾಬ್ದಾರಿಯಿಂದ ನುಣುಚಿಕೊಳ್ಳುವುದರೊಂದಿಗೆ ಅನ್ಯ ಇಲಾಖೆಗಳ ಮೇಲೆ ಬೆರಳು ಮಾಡುತ್ತಾ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಅಕ್ರಮದಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾಹಿತಿ ನೀಡಿದವರನ್ನೇ ಬೆದರಿಸಲಾಗುತ್ತಿದೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿವೆ.
ಪ್ರತಿ ಗ್ರಾಮಕ್ಕೆ ಪೋಲೀಸ್ ಇಲಾಖೆಯಿಂದ ಬೀಟ್ ಪೋಲೀಸ್ ಸಿಬ್ಬಂದಿ,ತಾಲೂಕು ಮಟ್ಟದ ಟಾಸ್‌ಪೋರ್ಸ್ ಸಮಿತಿ ಇದ್ದೂ ಇಲ್ಲದಂಗಾಗಿದ್ದು ಅಕ್ರಮಗಳನ್ನು ನಿಯಂತ್ರಿಸಲು ಮುಂದಾಗದಿರುವುದು ಹಾಗೂ ರಸ್ತೆ,ಚರಂಡಿ,ಕಟ್ಟಡ ನಿರ್ಮಾಣದಂತಹ ಅಭಿವೃದ್ದಿ ಕಾರ್ಯಗಳಿಗೂ ಗುತ್ತಿಗೆದಾರರು ಬಳಸಿಕೊಳ್ಳುವ ಅಕ್ರಮ ಮರಳು ದಂಧೆಗೆ ಪುಷ್ಠಿಯಾಗಿದೆ ಇನ್ನು ಮುಂದಾದರೂ ಅಧಿಕಾರಿಗಳು ಗಮನವಹಿಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಿ ಮರಳು ದಂಧೆಗೆ ಬಳಸಲಾಗುವ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಕಡ್ಡಾಯವಾಗಿ ಅಕ್ರಮವನ್ನು ತಡೆಗಟ್ಟಲು ಮುಂದಾಗಬೇಕಿದೆ.
ವರದಿ:ಎಂ.ಪವನ್ ಕುಮಾರ್