ಯಾದಗಿರಿ/ಶಹಾಪುರ:ನಗರದ ಶಾ ಮಗನಲಾಲ್ ಚಮನಾಜಿ ಜೈನ್ ಶಾಲೆಯಲ್ಲಿ 2022-23 ರ ಸಾಲಿನಲ್ಲಿ ಸಿ.ಬಿ.ಎಸ್.ಇ 10ನೇ ವರ್ಗದ ವಾರ್ಷಿಕ ಪರಿಕ್ಷೆಯಲ್ಲಿ ಶಾಲೆಗೆ ಪ್ರತಿಶತ 100ರಷ್ಟು ಫಲಿತಾಂಶ ಬಂದಿದ್ದು ಹಾಗೂ ವೈಯಕ್ತಿಕವಾಗಿ 94.02 ಪ್ರತಿಶತ ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಶಿವಾನಿ ಹಾಗೂ ಅವರ ಪಾಲಕರು ಭೇಟಿ ನೀಡಿ ತಮ್ಮಮಗಳ ಯಶಸ್ಸಿಗೆ ಕಾರಣೀಭೂತರಾದ ಶಾಲೆಯ ಅಧ್ಯಕ್ಷರಾದ ಶ್ರೀ ಮಾಂಗೀಲಾಲ್ ಜೈನ್ ಮತ್ತು ಮುಖ್ಯ ಶಿಕ್ಷಕರಾದ ಶ್ರೀ ವಂಶಿಕೃಷ್ಣ ಅವರಿಗೆ ಮತ್ತು ಶಾಲೆಯ ಸಮಸ್ತ ಶಿಕ್ಷಕ ವೃಂದಕ್ಕೆ ಸಿಹಿ ಹಂಚಿ ಗೌರವ ಸಮರ್ಪಿಸಿದರು ವಿದ್ಯಾರ್ಥಿನಿಯ ಸಾಧನೆಗೆ ಪಾಲಕರು ಹರ್ಷ ವ್ಯಕ್ತ ಪಡಿಸಿ ನಮ್ಮ ಮಗಳು ಈ ಶಾಲೆಗೆ ಬಂದು ಸುಮಾರು 12 ವರ್ಷಗಳು ಕಳೆದಿವೆ ಶಾಲೆಯೊಂದಿಗಿನ ಒಡನಾಟ ಉತ್ತಮವಾಗಿದ್ದು ಪ್ರತೀ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ಮುಖ್ಯವಾಗಿರುತ್ತದೆ ಅದು ಈ ಶಾಲೆಯಲ್ಲಿ ಈ ವಿಷಯದ ಬಗೆಗೆ ವಿಶೇಷ ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಶಾಲೆಯಿಂದ ಇದೇ ತರಹದ ಫಲಿತಾಂಶ ಬರಲಿ ಎಂದು ಹಾರೈಸಿದರು ಶಾಲೆಯ ಅಧ್ಯಕ್ಷರು ಕುಮಾರಿ ಶಿವಾನಿ ಹಾಗೂ ಅವರ ಪಾಲಕರಿಗೆ ಗೌರವ ಸಮರ್ಪಿಸುತ್ತ ವಿದ್ಯಾರ್ಥಿನಿಯ ಮುಂದಿನ ಜೀವನ ಸಂತಸದಿಂದ ಇರಲಿ ಅವಳ ಕನಸು ನೆರವೇರಲಿ ಎಂದು ಶುಭ ಹಾರೈಸಿದರು. ಕುಮಾರಿ ಶಿವಾನಿ ಮಾತನಾಡಿ ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಮತ್ತು ಎಲ್ಲರ ಪ್ರೋತ್ಸಾಹ ಈ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದ್ದು ಎಂದು ತನ್ನ ಅನಿಸಿಕೆಯನ್ನು ಹಂಚಿಕೊಂಡಳು.
ಅದೇ ರೀತಿ ಶಾಲೆಯ ಮುಖ್ಯ ಗುರುಗಳು ಮಾತನಾಡಿ ಕಠಿಣ ಪರಿಶ್ರಮ ನಿರಂತರ ಅಧ್ಯಯನ ಮಾತ್ರ ನಮ್ಮನ್ನು ಯಶಸ್ಸಿನ ಗುರಿಯತ್ತ ಕೊಂಡೊಯ್ಯುತ್ತವೆ ಎಂದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಅಕ್ಷತಾ ಹಾಗೂ ಅಮೂಲ್ಯ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.