ಯಾದಗಿರಿ:ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದ ಶಹಾಪುರ ತಾಲೂಕಿನ ಸಗರನಾಡಿನ ಅಭಿವೃದ್ಧಿ ಹರಿಕಾರ ಎಂದೇ ಹೆಸರಾದ,ನುಡಿದಂತೆ ನಡೆಯುವ ಶರಣಬಸಪ್ಪಗೌಡ ದರ್ಶನಪುರ ಇವರು ಶನಿವಾರದಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
5 ನೇ ಬಾರಿ ಶಾಸಕರಾಗಿ ಇವರು ಮೂರನೇ ಬಾರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದಿದ್ದಾರೆ. ಈ ಮೂಲಕ 7 ವರ್ಷಗಳ ನಂತರ ಯಾದಗಿರಿ ಜಿಲ್ಲೆಗೆ ಮತ್ತೊಮ್ಮೆ ಮಂತ್ರಿ ಸ್ಥಾನ ದೊರೆತಿದೆ.
ಹೈಕಮಾಂಡ್ ಮೂಲಕ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಹೆಚ್ಚು ಪ್ರಾಬಲ್ಯ ಹೊಂದಿರುವ ಇವರು 7 ವರ್ಷಗಳ ಬಳಿಕ ಶರಣಬಸಪ್ಪಗೌಡ ದರ್ಶನಾಪುರ ಇವರಿಗೆ ಮಂತ್ರಿಯಾಗುವ ಕನಸು ನನಸಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಯಾದಗಿರಿ, ರಾಯಚೂರು, ಕಲಬುರ್ಗಿ ಈ ಭಾಗದ ಹಿಡಿತ ಸಾಧಿಸಲು ರೆಡ್ಡಿ ಸಮುದಾಯದ ಮತ ಪೆಟ್ಟಿಗೆಗೆ ಕೈ ಹಾಕಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಇಬ್ಬರೂ ಲೆಕ್ಕಾಚಾರವಾಗಿದೆ.ಇದರಿಂದಲೇ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎನ್ನುವುದು ನೋಡಿದರೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕಾಕತಾಳೀಯ ಎಂಬಂತೆ ತಂದೆ ಬಾಪುಗೌಡ ದರ್ಶನಾಪುರ ನಿರ್ವಹಿಸಿದ ಖಾತೆ ಮಗ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಒಲಿದು ಬಂದಿದೆ.ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಖಾತೆ ಈಗ ಮಗ ದರ್ಶನಪುರ ಹಂಚಿಕೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಕೈಗಾರಿಕೆ ವಲಯದಲ್ಲಿ ಅಭಿವೃದ್ಧಿ ಹೊಂದಲಿದೆ. ಮತ್ತು ಸಾರ್ವಜನಿಕ ಉದ್ಯಮ ಖಾತೆ ಕೂಡ ಇವರಿಗೆ ಒಲಿದು ಬಂದಿದೆ.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.