ಮೈಸೂರು:ಚರಂಡಿ ಹೂಳೆತ್ತುವ ವೇಳೆ ಹೆಲ್ಮೆಟ್ ಸಮೇತ ಮನುಷ್ಯನ ತಲೆ ಬುರುಡೆ ಪತ್ತೆ! ನಂತರ ನಾಪತ್ತೆ? ಪ್ರಕರಣ ಮುಚ್ಚಿ ಹಾಕುತ್ತಿರ ಬಹುದೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪ.
ವಾರ್ಡ್ ಸಂಖ್ಯೆ 51 ಅಗ್ರಹಾರ ವಾರ್ಡಿನ ಶ್ರೀ ಕಾಂತ ಶಾಲೆಯ ಬಳಿ ಚರಂಡಿಯ ಹೂಳೆತ್ತುವ ವೇಳೆ ಹೆಲ್ಮೆಟ್ ಸಮೇತ ಮನುಷ್ಯನ ತಲೆ ಬುರುಡೆ ಸಿಕ್ಕಿರುವ ಘಟನೆ ನಡೆದಿದೆ
ಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್ ಅವರಿಗೆ ಸೇರಿದ ವಾರ್ಡಿನಲ್ಲಿ ಮಳೆಗಾಲಕ್ಕು ಮುನ್ನ ಚರಂಡಿ ಹೂಳೆತ್ತುವ ಕಾರ್ಯ ಆರಂಭವಾಗಿತ್ತು
ಶುಕ್ರವಾರ ಶ್ರೀ ಕಾಂತ ಶಾಲೆಯ ಬಳಿ ಕಾರ್ಮಿಕ ಪಳನಿ ಸ್ವಾಮಿ ಚರಂಡಿ ಹೂಳೆತ್ತುವ ವೇಳೆ ಕೆಸರು ತುಂಬಿದ್ದ ಹೆಲ್ಮೆಟ್ ಸಿಕ್ಕಿದೆ ಹೆಲ್ಮೆಟ್ ತೆಗೆದು ಪರಿಶೀಲನೆ ಮಾಡುವ ವೇಳೆ ಹೆಲ್ಮೆಟ್ ನೊಳಗೆ ತಲೆ ಬುರುಡೆಯನ್ನು ಕಂಡ ಪಳನಿ ಸ್ವಾಮಿ ಗಾಬರಿಗೊಂಡು ಹೆಲ್ಮೆಟ್ ಅನ್ನು ಅಲ್ಲಿಯೇ ಎಸೆದು ಹೊರಗೆ ಬಂದು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾನೆ ಎಂದು ತಿಳಿದು ಬಂದಿದೆ
ಬಳಿಕ ವಿಷಯವನ್ನು ಗುತ್ತಿಗೆದಾರ ದಯಾನಂದ ಅವರಿಗೆ ತಿಳಿಸಿದ್ದಾರೆ ತಕ್ಷಣ ಗುತ್ತಿಗೆದಾರ ಪಾಲಿಕೆ ಸದಸ್ಯರಾದ ಬಿ ವಿ ಮಂಜುನಾಥ್ ರವರಿಗೆ ಮಾಹಿತಿ ನೀಡಿದ್ದಾರೆ
ನಂತರ ಕೆ ಆರ್ ಪೋಲಿಸರ ಗಮನಕ್ಕೆ ತಂದ ಪಾಲಿಕೆ ಸದಸ್ಯರಾದ ಮಂಜುನಾಥ್ ಪಾಲಿಕೆ ಸಿಬ್ಬಂದಿ ಮತ್ತು ಗುತ್ತಿಗೆದಾರನ ನೌಕರರೊಂದಿಗೆ ಚರಂಡಿಯಲ್ಲಿ ಶೋಧಕಾರ್ಯ ನಡೆಸಿದ್ದು ಯಾವುದೇ ತಲೆಬುರುಡೆ ಪತ್ತೆಯಾಗಿಲ್ಲ ಎಂದು ಪಾಲಿಕೆ ಸದಸ್ಯರಾದ ಮಂಜುನಾಥ್ ತಿಳಿಸಿದ್ದಾರೆ
ಮಂಜುನಾಥ್ ರವರ ಈ ಹೇಳಿಕೆಯನ್ನು ಕನ್ನಡಪರ ಹೋರಾಟಗಾರ ಹಾಗೂ ಅಗ್ರಹಾರ ವಾರ್ಡಿನ ಸೇವಾಕಾಂಕ್ಷಿ ತೇಜಸ್ವಿ ನಾಗಲಿಂಗ ಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ
ಕಾರ್ಮಿಕ ಪಳನಿ ಸ್ವಾಮಿ ಹೆಲ್ಮೆಟ್ ಸಮೇತ ಮನುಷ್ಯನ ತಲೆ ಬುರುಡೆ ಯನ್ನು ನೋಡಿದ್ದಾನೆ
ನೋಡಿ ಗಾಬರಿಗೊಂಡು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾನೆ
ಪಾಲಿಕೆ ಸದಸ್ಯರು ಶೋಧಕಾರ್ಯ ನಡೆಸಿದಾಗ ಯಾವುದೇ ಹೆಲ್ಮೆಟ್ ಆಗಾಲಿ ತಲೆಬುರುಡೆ ಆಗಲಿ ಪತ್ತೆಯಾಗಿಲ್ಲ ಎಂದು ಹೇಳುತ್ತಾರೆ
ಇವರ ಹೇಳಿಕೆ ಇಂದ ನನಗೆ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ತೀವ್ರವಾಗಿ ಅನುಮಾನ ಉಂಟಾಗುತ್ತಿದೆ
ಆದ ಕಾರಣ ನಗರ ಪೋಲಿಸ್ ಆಯುಕ್ತರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಕೃತ ದೂರ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.