ರಾಯಚೂರು:ಮೇ.28ರಂದು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರು ನಗರದ ಸುಕಾಲಪೇಟೆಯ ಮಣ್ಣೂರು ಮಠ ಹಾಗೂ ಗೊಲದಿನ್ನಿ ಮಠ ಕುಟುಂಬದಿಂದ ಕುಟುಂಬದ ಶ್ರೇಯಸ್ಸೋಭಿವೃದ್ಧಿಗಾಗಿ ಆಶ್ರಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಕಾರುಣ್ಯ ಆಶ್ರಮದ ಬಂಧುಗಳಾದ ಮಣ್ಣೂರು ಮಠ ಹಾಗೂ ಗೊಲದಿನ್ನಿಮಠ ಕುಟುಂಬದವರು ಕಾರುಣ್ಯ ಆಶ್ರಮದ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಅನಾಥ ಜೀವಿಗಳ ಬಾಳಿಗೆ ಬೆಳಕಾಗಿದ್ದಾರೆ ಮಣ್ಣೂರು ಮಠದ ಹಿರಿಯರಾದ ಶಿವಯ್ಯ ಸ್ವಾಮಿ ಅವರ ಮಾರ್ಗದರ್ಶನದೊಂದಿಗೆ ಕಾರುಣ್ಯ ಆಶ್ರಮದ ಕರ್ತವ್ಯ ಜರುಗುತ್ತಿದೆ ಕಾರುಣ್ಯ ಆಶ್ರಮದ ಬಗ್ಗೆ ನಿರಂತರ ಸಂಪರ್ಕ ಹೊಂದುವುದರ ಮೂಲಕ ಸಹಕಾರ ಸಹಾಯ ಮಾಡುತ್ತಾ ಸಮಾಜ ಪರ ವ್ಯಕ್ತಿತ್ವವನ್ನು ಮೈಗೂಡಿಸಿದ್ದಾರೆ.ಈ ಎರಡು ಕುಟುಂಬಗಳ ಆಶಯ ಒಂದೇ ಸರ್ಕಾರ ಈ ಕಾರುಣ್ಯ ಆಶ್ರಮಕ್ಕೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಈ ಕುಟುಂಬಗಳ ಆಶಯವಾಗಿದೆ.ನಿರಂತರ ಅನ್ನ ದಾಸೋಹಕ್ಕೆ ಬೆನ್ನೆಲುಬಾಗಿರುವ ಈ ಎರಡು ಕುಟುಂಬಗಳು ಕಾರುಣ್ಯ ಕುಟುಂಬದ ಆಸ್ತಿಯಾಗಿವೆ ಇಂತಹ ಕಾರ್ಯಕ್ರಮಗಳನ್ನು ಸಮಾಜದ ಪ್ರತಿಯೊಬ್ಬರೂ ಕೂಡಾ ನೆರವೇರಿಸಿದರೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಮಾತನಾಡಿ ಮಣ್ಣೂರು ಮಠದ ಹಿರಿಯರಾದ ಪಾರ್ವತಮ್ಮ ಶಿವಯ್ಯ ಸ್ವಾಮಿ ಸುಕಾಲಪೇಟೆ ಹಾಗೂ ಗೊಲದಿನ್ನಿಮಠದ ಆದರ್ಶ ದಂಪತಿಗಳಾದ ಮಂಜುಳಾ ಸಿದ್ದಲಿಂಗಯ್ಯ ಸ್ವಾಮಿ ಇವರುಗಳಿಗೆ ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಅಧ್ಯಕ್ಷತೆ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಈರಮ್ಮ ಶೇಖರಯ್ಯ ಸ್ವಾಮಿ ಗೊಲದಿನ್ನಿಮಠ,ನಂದಿನಿ ಷಡಕ್ಷರಯ್ಯ ಸ್ವಾಮಿ,ಅಮರೇಶ ಸ್ವಾಮಿ ವೈಷ್ಣವಿ ಸಾಹಿತ್ಯ ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ,ಸುಜಾತ ಹಿರೇಮಠ,ಇಂದುಮತಿ ಏಕನಾಥ,ಮರಿಯಪ್ಪ,ಶರಣಮ್ಮ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.
ವರದಿ:ವೆಂಕಟೇಶ.H.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.