ಧಾರವಾಡ:ಮೂರು ದಶಕಗಳಿಗಿಂತ ಹೆಚ್ಚು ಕಾಲ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಎನ್ ಕೆ ಸಾಹುಕಾರ ಹಾಗೂ ಉಪನ್ಯಾಸಕರಾದ ಶ್ರೀ ಜಯವಂತ್ ನಂದನ್ ಸರ್ ಸೇವಾ ನಿವೃತ್ತಿ ಹೊಂದುತ್ತಿದ್ದು ಇಲಾಖೆ ಪರವಾಗಿ ನಗರದ ಡಯಟ್ ನ ಪ್ರಾರ್ಥನಾ ಮಂದಿರದಲ್ಲಿ ಸೇವಾನಿವೃತ್ತಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಶ್ರೀಮತಿ ಎನ್ ಕೆ ಸಾಹುಕಾರ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಗ್ರಾಮದಲ್ಲಿ 01/06/1963 ರಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೆ ಬಾಗಲಕೋಟ ನಗರದ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿ ಬಿ.ಇಡಿ ಪದವಿಯನ್ನು ಜಮಖಂಡಿಯಲ್ಲಿ ಎಂ.ಎ ಪದವಿಯನ್ನು ಧಾರವಾಡದಲ್ಲಿ ಪೂರೈಸಿದರು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆ.ಇ.ಎಸ್ ಪರೀಕ್ಷೆಯಲ್ಲಿ 1999 ರಲ್ಲಿ ಉತ್ತೀರ್ಣರಾಗಿ ಗದಗ ಜಿಲ್ಲೆಯ ಸರಕಾರಿ ಪ್ರೌಢ ಶಾಲೆ ಕದಡಿಯಲ್ಲಿ ಮುಖ್ಯೋಪಾಧ್ಯಾಯರಾಗಿ ತಮ್ಮ ಸೇವೆ ಪ್ರಾರಂಭಿಸಿದರು ನಂತರ ಧಾರವಾಡ ಜಿಲ್ಲೆಯ ಸರಕಾರಿ ಪ್ರೌಢ ಶಾಲೆ ನರೇಂದ್ರದಲ್ಲಿ ಮುಖ್ಯೋಪಾಧ್ಯಾಯರಾಗಿ ನಗರದ ಹೆಣ್ಣು ಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜಿನಲ್ಲಿ ಮಹಿಳಾ ಅಧೀಕ್ಷಕರಾಗಿ ಸೇವೆ ಸಲ್ಲಿಸಿ 2002 ರಲ್ಲಿ ಶಿಕ್ಷಣಾಧಿಕಾರಿಗಳಾಗಿ ಪದೋನ್ನತಿ ಹೊಂದಿ ನಗರದ ಡಯಟ್ ನಲ್ಲಿ ಉಪನ್ಯಾಸಕರಾಗಿ,ಡಿಡಿಪಿಅಯ್ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಹುಬ್ಬಳ್ಳಿ ಗ್ರಾಮೀಣ ಬಿಇಓ ಆಗಿ ಡಿಡಿಪಿಅಯ್ ಕಚೇರಿಯಲ್ಲಿ ಉಪಸಮನ್ವಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ 2020 ರಲ್ಲಿ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿ ಬೆಳಗಾವಿಯ ಸಿಟಿಇ ಯಲ್ಲಿ ಪ್ರವಾಚಕರಾಗಿ ಡಯಟ್ ಧಾರವಾಡದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಧಾರವಾಡ ಡಯಟ್ ಉಪನ್ಯಾಸಕರಾದ ಶ್ರೀ ಜಯವಂತ ನಂದನ ಅವರು ವಿಜಯಪುರ ಜಿಲ್ಲೆ ಕವಲಗಿಯಲ್ಲಿ 01/06/1963 ರಲ್ಲಿ ಜನಿಸಿದರು ಪ್ರಾಥಮಿಕ ಶಿಕ್ಷಣವನ್ನು ಕವಲಗಿಯಲ್ಲಿ ಪ್ರೌಢ ಶಿಕ್ಷಣವನ್ನು ಸಿಂದಗಿ ಯಲ್ಲಿ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ವಿಜಯಪುರದಲ್ಲಿ ಪೂರ್ಣಗೊಳಿಸಿ ಬಿ.ಇಡಿ ಪದವಿಯನ್ನು ಜಮಖಂಡಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಧಾರವಾಡದಲ್ಲಿ ಮುಗಿಸಿದರು. ಇವರು ಧಾರವಾಡದ ಬುದ್ದ ರಕ್ಕಿಥ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯ ಬೋಧಕ ಶಿಕ್ಷಕರಾಗಿ ಸೇವೆ ಸಲ್ಲಿಸಿ 1999 ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಕೆ.ಇ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗುಲಬುರ್ಗಾ ಜಿಲ್ಲೆಯ ಸರಕಾರಿ ಮರಾಠ ಶಾಲೆ ಆಳಂಗಾದಲ್ಲಿ ಮುಖ್ಯೋಪಾಧ್ಯಾಯ ರಾಗಿ ಸೇವೆ ಸಲ್ಲಿಸಿ ನಂತರ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕೆಂಗಾನೂರನಲ್ಲಿ ಮುಖ್ಯೋಪಾಧ್ಯಾಯರಾಗಿ ಜೊತೆಗೆ ನಿಯೋಜನೆ ಮೇರೆಗೆ ಕಲಘಟಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ,ನಗರದ ಡಿಡಿಪಿಅಯ್ ಕಚೇರಿಯಲ್ಲಿ ವಿಷಯ ಪರಿವೀಕ್ಷಕರಾಗಿ ಸರಕಾರಿ ಪ್ರೌಢ ಶಾಲೆ ಅಮರಗೋಳದಲ್ಲಿ ಮುಖ್ಯೋಪಾಧ್ಯಾಯರಾಗಿ,ಪ್ರಸ್ತುತ ಡಯಟ್ ನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ ಈರ್ವರೂ ಅಧಿಕಾರಿಗಳು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.