ಬೀದರ ಜಿಲ್ಲೆಯ ಔರಾದ ತಾಲೂಕಿನ ನಾಗಮಾರಪಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನಾಗಮಾರಪಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಳ್ಳುತ್ತಿರುವ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನದಡಿಯಲ್ಲಿ ಸುಮಾರು ೬೦ ಕ್ಕಿಂತ ಅಧಿಕ
ನರೇಗಾ ಕೂಲಿಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ಅಧಿಕ ರಕ್ತದೊತ್ತಡ,ರಕ್ತಹೀನತೆ, ಮಧುಮೇಹಗಳಂತಹ ರೊಗಗಳ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಹಾಗೂ ಆ ಕಾರ್ಮಿಕರಿಗೆ PMJJY,PMSBY ವಿಮಾ ಯೋಜನೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಶ ಮುಕರಂಬೆ, ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ KHPT ತಾಲೂಕ ಸಂಯೋಜಕರಾದ ಅಮರ ಮುಕ್ತೆದಾರ,CHO ಆಶಾರಾಣಿ,IEC ಸಂಯೋಜಕರಾದ ಒಶಿನ ಅಬ್ರಾಹಮ್ ಸಂಗಪ್ಪ ಪಾಟೀಲ್ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ವರದಿ:ಅಮರ ಮುಕ್ತೆದಾರ