ಕಲಬುರ್ಗಿ:ಜೇವರ್ಗಿ ತಾಲೂಕ ಪಂಚಾಯಿತಿಯಲ್ಲಿ ಕೆಲಸ ಮಾಡಿದ ಹತ್ತು ಹಲವಾರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ನುಂಗಿ ಹಾಕಿದ ಭ್ರಷ್ಟ ಅಧಿಕಾರಿ ಎಇಇ ಚಂದ್ರಕಾಂತ ಮತ್ತು ಇಂಜಿನಿಯರುಗಳು,
ನೇದಲಗಿ ಗ್ರಾಮ ಪಂಚಾಯಿತಿ ಮತ್ತು ಮಂದೆವಾಲ ಗ್ರಾಮ ಪಂಚಾಯಿತಿಯಲ್ಲಿ ಬರುವ ಮಾಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಮಯೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶೌಚಾಲಯಗಳು ಕೆಲಸ ಮಾಡಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 2 ಕೋಟಿ 20 ಲಕ್ಷ ರೂಪಾಯಿ ದುರ್ಬಳಕೆ ಮಾಡಿರುತ್ತಾರೆ.
ಮಂದೆವಾಲ ಗ್ರಾಮ ಪಂಚಾಯಿತಿಯಲ್ಲಿ ಮಾಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿದ ಕಾಗದದಲ್ಲಿ ಮಾತ್ರ ಶೌಚಾಲಯಗಳನ್ನು ನಿರ್ಮಿಸಿ ಸುಮಾರು 18 ಲಕ್ಷ ರೂಪಾಯಿ ನುಂಗಿ ಹಾಕಲಾಗಿದೆ.
ಕಲಬುರ್ಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು ಕಾರ್ಯನಿರ್ವಹಕ ಅಧಿಕಾರಿಗಳು ತನಿಖೆ ಮಾಡಿದಾಗ ಲೂಟಿ ಮಾಡಿರುವುದು ಕಂಡು ಬಂದಿರುವುದರಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಮತ್ತು ಇಂಜಿನಿಯರುಗಳಾದ ವಸಂತ ಅವರಿಂದ ಲೂಟಿ ಮಾಡಿರುವ ಹಣ ಇಲಾಖೆಗೆ ಮರಳಿ ಕಟ್ಟಬೇಕು ಎಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯಿಂದ ಪತ್ರ ಬರೆದಿರುತ್ತಾರೆ.
ಇಂತಹ ಭ್ರಷ್ಟ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇವರು ಲೂಟಿ ಮಾಡಿದ ಹಣ ವಸೂಲಿ ಮಾಡಬೇಕು ಎಂದು ಹೇಳಿದರು.
ಆರೋಪಗಳು:
1) ಮಂದೆವಾಲ ಗ್ರಾಮದ 18 ಲಕ್ಷ ರೂಪಾಯಿ ಭ್ರಷ್ಟಾಚಾರ
2) ಶೌಚಾಲಯದ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೋಗಸ್ ಬಿಲ್ ಮಾಡಿರುವುದು
3) ಜೇವರ್ಗಿ ತಾಲ್ಲೂಕಿನ ಪಿ.ಆರ್.ಇ ಯ ನೂರಾರು ಕಾಮಗಾರಿಗಳ ಮಾಡಿದೆ ಹಣ ಲೂಟಿ ಮಾಡಿದ ಅಧಿಕಾರಿಗಳು
4) ಎಇಇ ಕೆಲಸ ಮಾಡಿದ ಬಿಲ್ ತಿಂದಿರುವ ಹಾಗೂ ಅಧಿಕಾರಿ ಚಂದ್ರಕಾಂತ
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ