ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು ಚುನಾವಣೆ ಗೆಲ್ಲೋದಕ್ಕೆ ಈ ಪ್ರಣಾಳಿಕೆಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು ಆದರೆ ಕಾಂಗ್ರೆಸ್ ಪಕ್ಷ ತಾವು ಅಂದುಕೊಂಡಂತೆ ವಿಧಾನಸಭೆ ಚುನಾವಣೆ ಯಲ್ಲಿ ಸರಾಗವಾಗಿ ಬಹುಮತ ಪಡಿಯುವಲ್ಲಿ ಯಶಸ್ವಿಯಾಗಿ ಸರ್ಕಾರ ರಚನೆ ಮಾಡಿದರು ಆದರೆ ಜನರಿಗೆ ನೀಡಿದ ಐದು ಗ್ಯಾರಂಟಿಗಳು ಗೃಹಜ್ಯೋತಿ, ಗೃಹಲಕ್ಷ್ಮಿ,ಯುವನಿಧಿ,ಉಚಿತ ಬಸ್ ಪಾಸ್,ಅನ್ನಭಾಗ್ಯ ಯೋಜನೆಗಳನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಈ ಯೋಜನೆಗಳನ್ನು ಘೋಷಿಸಿತ್ತು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಜಾರಿಗೊಳಿಸುವ ಭರವಸೆ ನೀಡಿತ್ತು ಆದರೆ ಈಗ ಭರವಸೆಗಳನ್ನು ಈಡೇರಿಸಲು ಷರತ್ತು ರೂಪಿಸಲು ಮುಂದಾಗಿದೆ ಇದನ್ನು ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷದವರು ಕಾಂಗ್ರೆಸ್ ನವರು ಚುನಾವಣೆಗೂ ಮುನ್ನ ನೀಡಿದಂತಹ ಈ ಗ್ಯಾರಂಟಿಗಳನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಆದರೆ ಕಾಂಗ್ರೆಸನವರು ನಾವು ಕೊಟ್ಟ ಮಾತು ಯಾವತ್ತೂ ತಪ್ಪೋದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಖಡಾ ಖಂಡಿತವಾಗಿ ಈ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿಯೇ ತೀರುತ್ತೇವೆ ಅಂತ ವಿರೋಧ ಪಕ್ಷಗಳಿಗೆ ಉತ್ತರವನ್ನು ನೀಡಿದ್ದಾರೆ.
ಆದರೆ ಈ ಗ್ಯಾರಂಟಿ ಭಾಗ್ಯಗಳು ಎಲ್ಲರಿಗೂ ಕೊಡೋಕೆ ಆಗೋದಿಲ್ಲ ಮತ್ತು ದಾರೀಇಲಿ ಹಾಯ್ದು ಹೋಗೋರಿಗೂ ಕೊಡಾಕ ಆಗುತ್ತಾ ಅಂತ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ ಅವರು ಹೇಳಿದ್ದಾರೆ.
ಐದು ಗ್ಯಾರಂಟಿಗಳ ಅನುಷ್ಟಾನಕ್ಕೆ
ಸರಿಸುಮಾರು 1 ಲಕ್ಷ ಕೋಟಿ ರೂ.ವರೆಗೆ ಹಣ ಬೇಕಿದ್ದು,ಇದನ್ನು ಭರಿಸುವ ಬಗೆ ಹೇಗೆ ಎಂಬ ಬಗ್ಗೆ ಸರ್ಕಾರ
ತಲೆಕೆಡಿಸಿಕೊಂಡಿದೆ ಈ ಮೊತ್ತವನ್ನು ಹೇಗಾದರೂ ಮಾಡಿ
50 ಸಾವಿರ ಕೋಟಿ ರೂ.ಗಳ ಒಳಗೆ ತರಲು ದಾರಿಗಳನ್ನು ಹುಡುಕುತ್ತಿದೆ.
ಅನ್ನಭಾಗ್ಯ ಯೋಜನೆಸೇರಿದಂತೆ
ಕೆಲ ಕಾರ್ಯಕ್ರಮಗಳಿಗೆ ಕೇಂದ್ರ
ಸರ್ಕಾರದಿಂದ ಸಿಗಬಹುದಾದ
ಸಹಾಯಧನ,ವಿಶೇಷ ನಿಧಿ
ಇತ್ಯಾದಿಗಳ ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಇದರೊಂದಿಗೆ
ಕಠಿಣ ಷರತ್ತು,ನಿಬಂಧನೆಗಳನ್ನು ವಿಧಿಸಿ ತನ್ನ ತಲೆ ಮೇಲೆ
ಬೀಳಬಹುದಾದ ಹೊರೆ ಕಡಿಮೆ ಮಾಡಿಕೊಳ್ಳುವುದು ಹೇಗೆ
ಎಂಬ ತಕ್ಕಡಿ ಹಿಡಿದು ಕುಳಿತಿದೆ.
ಚುನಾವಣಾಪೂರ್ವಪ್ರಣಾಳಿಕೆಯಲ್ಲಿ ಗೃಹ
ಜ್ಯೋತಿ,ಗೃಹ ಲಕ್ಷ್ಮಿ,ಅನ್ನಭಾಗ್ಯ,ಯುವ ನಿಧಿ ಹಾಗೂ ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ನೀಡುವ ಯೋಜನೆಗಳನ್ನು ಘೋಷಿಸಲಾಗಿತ್ತು. ಇವುಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಹಣಕಾಸು,
ಸಾರಿಗೆ,ಆಹಾರ ಮತ್ತು ನಾಗರಿಕ ಸರಬರಾಜು,ಇಂಧನ,ಕಂದಾಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಮತ್ತಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ ಯಾವ್ಯಾವ ಕಾರ್ಯಕ್ರಮಕ್ಕೆ ಅನುಷ್ಠಾನಕ್ಕೆ ಎಷ್ಟೆಷ್ಟುಖರ್ಚು ಬರಲಿದೆ? ಫಲಾನುಭವಿಗಳ ಆಯ್ಕೆ ಹೇಗೆ?ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ದಾರಿಗಳು ಯಾವುವು
ಎಂಬಿತ್ಯಾದಿ ಮಾಹಿತಿಗಳನ್ನು ಪಡೆದು ಕೊಳ್ಳುತ್ತಿದೆ ಆದರೆ ಜನರು ಮಾತ್ರ ನಾವು ಯಾವುದೇ ಕಾರಣಕ್ಕೂ ಕರೆಂಟ್ ಬಿಲ್ ಮತ್ತು ಮಹಿಳೆಯರು ಬಸ್ ಚಾರ್ಜ್ ಕೊಡೋದಿಲ್ಲ ವಿದ್ಯುತ್ ಅಧಿಕಾರಿಗಳ ಮತ್ತು ಕಂಡಕ್ಟರ್ ಜೊತೆ ವಾದ ಮಾಡುತ್ತಿದ್ದಾರೆ ಮತ್ತು ಕೆಲವು ಕಡೆ ಕೈ ಕೈ ಮಿಲಾಯಿಸಿದ್ದು ಕೂಡ ನಾವು ತಿಳಿಯಬಹುದಾಗಿದೆ ಇದರಿಂದ ಜನರಿಗೆ ಗೊಂದಲ ಸೃಷ್ಟಿ ಆಗಿದೆ ಆದರೆ ವಿರೋಧ ಪಕ್ಷದವರು ಯಾವುದೇ ಕಾರಣಕ್ಕೂ ನೀವು ಕರೆಂಟ್ ಬಿಲ್ ಮತ್ತೆ ಬಸ್ ಚಾರ್ಜ್ ನೀಡಬೇಡಿ ಸಿಎಂ ಸರ್ ಚುನಾವಣೆ ಗೂ ಮುನ್ನ ಹೇಳಿಕೆ ನೀಡಿದ್ದಾರೆ ನಾವು ಅವ್ರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಆರ್ ಅಶೋಕ ಅವರು ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ ಆದಷ್ಟು ಬೇಗ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಜನರಲ್ಲಿ ಮೂಡಿರುವ ಈ ಸಮಸ್ಯೆ ಭಾಗ್ಯಗಳ ಬಗ್ಗೆ ತೆರೆ ಎಳೆಯಬೇಕು ಎಂಬುದು ನಮ್ಮ ಆಶಯ
ಇತ್ತ ವಿರೋಧ ಪಕ್ಷದ ನಾಯಕರುಗಳು ಮತ್ತು ಮಾಜಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ ಅವರು ಚುನಾವಣೆ ಗೂ ಮುನ್ನ ಹೇಳಿದ ಮಾತುಗಳನ್ನು ನನಗೂ ಫ್ರೀ ನಿನಗೂ ಫ್ರಿ, ಕಾಕಾ ಪಾಟೀಲ್ಗೂ ಫ್ರೀ ಮತ್ತೆ ಅತ್ತೆ ಮನೆಗೆ ಹೋಗುವಾಗ ಸೊಸೆ ಮನೆಗೆ ಹೋಗುವಾಗ ಗಂಡನ ಮನೆಗೆ ಹೋಗುವಾಗ ಎಂಬ ಹೇಳಿಕೆ ನಾಯಕರ ಬಾಯಲ್ಲಿ ಪದೇ ಪದೇ ಕಂಡು ಬರ್ತಾ ಇರೋದಂತೂ ಸತ್ಯ.
-ಪುನೀತಕುಮಾರ
2 Responses
Group join link send me please
9986366909 msg me