ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪ್ರತಿಷ್ಠಿತ ರಾಜೀವ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಶಾಲಾ ಕಟ್ಟಡಕ್ಕೆ ಇದೀಗ ಬೀಗಮುದ್ರೆ ಬಿದ್ದಿದೆ.ಈ ಸಂಸ್ಥೆಯ ಎಂ. ಸವಿತಾ,ಎಂ.ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಹೈದರಾಬಾದಿನ ಹಣಕಾಸು ಸಂಸ್ಥೆಯಿಂದ ಸಂಸ್ಥೆಯ ಶಾಲಾ ಕಟ್ಟಡವನ್ನು ಅಡವಿಟ್ಟು ಸಾಲ ಪಡೆದು ಕಂತುಗಳನ್ನು ಕಟ್ಟದೇ ಮತ್ತು ಸಾಲ ಮರುಪಾವತಿ ಮಾಡದ ಕಾರಣ ನ್ಯಾಯಾಲಯದಿಂದ ಆದೇಶ ತಂದು ಶಾಲಾ ಕಟ್ಟಡಕ್ಕೆ ಬೀಗ ಹಾಕಿಸಿದ್ದಾರೆ
ಶಾಲೆಯ ಪ್ರಾರಂಭದ ದಿನದಂದು ಈ ಘಟನೆ ನಡೆದಿದ್ದು ಹೂ ಮತ್ತು ಸಿಹಿ ಪಡೆದು ಶಾಲೆ ಪ್ರವೇಶಿಸಬೇಕಿದ್ದ ಮಕ್ಕಳು ಶಾಲೆಗೆ ಹಾಕಿರುವ ಬೀಗ ಮತ್ತು ಕೋರ್ಟ್ ಆದೇಶದ ಬ್ಯಾನರ್ ನೋಡಿ ಪಾಲಕ ಪೋಷಕರೊಂದಿಗೆ ವಾಪಸ್ ಆಗಿದ್ದಾರೆ.
ಕೆಲ ಪಾಲಕ ಪೋಷಕರು ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರಿಗೆ ಕರೆ ಮಾಡಿ ವಿಷಯ ತಿಳಿದುಕೊಂಡಿದ್ದಾರೆ. ಶಿಕ್ಷಕರುಗಳೇ ಎಸ್ ಎಸ್ ಎಲ್ ಸಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಶುಕ್ರವಾರದಿಂದ ಶಾಲಾ ಅವರಣದ ಮೂಲೆಯಲ್ಲಿನ ಮರದ ಕೆಳಗೆ ಸೇತುಬಂಧ ಪಾಠ ಮಾಡಿದ್ದಾರೆ
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಗುರಪ್ಪ ದೂರವಾಣಿ ಕರೆಯಲ್ಲಿ ಮಾತನಾಡಿ ಪರ್ಯಾಯ ವ್ಯವಸ್ಥೆ ಮಾಡಿ ಕೊಳ್ಳುವಂತೆ ತಿಳಿಸಿದ್ದೇನೆ ಕೆಲವು ದಿನಗಳಲ್ಲಿಯೇ ಪರ್ಯಾಯ ಸ್ಥಳದಲ್ಲಿ ಶಾಲೆ ಪ್ರಾರಂಭವಾಗುತ್ತದೆ ಮತ್ತು ಹಿಂದಿನ ಎಲ್ಲಾ ಪಾಠಗಳನ್ನು ಮಕ್ಕಳಿಗೆ ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಪಾಠ ಮಾಡಲಾಗುತ್ತದೆ ಎಂಬ ಮಾತುಗಳನ್ನು ಅಷ್ಟೇ ಆಡಿದ್ದಾರೆ
ಆದರೆ ಈವರೆಗೂ ಶಾಲೆಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲದೆ ಶಾಲಾ ಪ್ರಾರಂಭದ ದಿನದಂದೆ ಇಂತಹ ಕಹಿ ಘಟನೆ ನಡೆದಿರುವುದು ಹಾಗೂ ಇದು ಅನುದಾನಿತ ಶಾಲೆಯಾಗಿದ್ದರೂ ಯಾವುದೇ ಮಾಹಿತಿ ಇಲ್ಲದೆ ಇರುವುದು ಅನೇಕ ಪಾಲಕ,ಪೋಷಕರ ಕೋಪಕ್ಕೆ ಕಾರಣವಾಗಿದೆ
ಶಾಲೆಯ ಬಳಿಯಿದ್ದ ಪಾಲಕರಲ್ಲೊಬ್ಬರಾದ ಪ್ರಸಾದ್ ಮಾತನಾಡಿ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬ್ಯಾಂಕಿನವರು ಏನೇ ವ್ಯವಹಾರವನ್ನು ಮಾಡಿಕೊಳ್ಳಲಿ ಅವರನ್ನು ಕರೆದುಕೊಂಡು ಹೋಗಿ ಜೈಲಿನಲ್ಲಿಯೇ ಇಡಲಿ ಆದರೆ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆ ಆಗಬಾರದು ಖಾಸಗಿ ಬ್ಯಾಂಕಿನವರೇ ತಮ್ಮ ನೇತೃತ್ವದಲ್ಲಿ ಶಾಲೆ ನಡೆಸಲಿ ಆದರೆ ವಿದ್ಯಾರ್ಥಿ ಮತ್ತು ಬೋಧಕ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದಿದ್ದಾರೆ.
ವರದಿ ಎಂ ಪವನ್ ಕುಮಾರ್