ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾದ ಶ್ರೀ ಮತಿ ಶೋಭಾರಾಣಿ ಅವರು ಕಳೆದ ಮೂರು ತಿಂಗಳಿಂದ ಯಾವುದೇ ಅಡಚಣೆ ಇಲ್ಲದೆ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರ ಜೊತೆ ಹೊಂದಾಣಿಕೆಯಿಂದ ಅಚ್ಚುಕಟ್ಟಾಗಿ ಸರ್ಜಾಪುರ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ಕುಡಿಯುವ ನೀರು ಉದ್ಯೋಗ ಖಾತರಿ ಯೋಜನೆ ಬೀದಿ ದೀಪ ಹಾಗೂ ನೈರ್ಮಲ್ಲಿಕರಣ ಕಾಮಗಾರಿಗಳು ವ್ಯವಸ್ಥಿತ ನಿರ್ವಹಣೆ ಮಾಡುತ್ತಾ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತಿದೇ ಹಾಗೂ ಸರ್ಜಾಪುರ ಗ್ರಾಮ ಪಂಚಾಯಿತಿಗೆ ಬಂದು ಕೇವಲ ಮೂರು ತಿಂಗಳ ಮಾತ್ರ ಆಗಿದ್ದು ಪುನಃ ಬೇರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂದರೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತೇವೆ ಎಂದು ತಿಳಿದು ಇವರನ್ನು ವರ್ಗಾವಣೆ ಮಾಡದಂತೆ ಮತ್ತು ಇವರನ್ನೇ ಪ್ರಸ್ತುತ ಸರ್ಜಾಪುರ ಗ್ರಾಮ್ ಪಂಚಾಯಿತಿಗೆ ಶ್ರೀಮತಿ ಶೋಭಾರಾಣಿ ಇವರನ್ನೇ ಮುಂದುವರಿಸಬೇಕೆಂದು ಸರ್ವಸದಸ್ಯರು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ರಾಯಚೂರು ಇವರಿಗೆ ಮನವಿ ಮಾಡಿಕೊಂಡರು
ಈ ಸಂದರ್ಭದಲ್ಲಿ ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದ್ಯಸರು ಇದ್ದರು
ವರದಿ :-ಪುನೀತಕುಮಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.