ಯಾದಗಿರಿ: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು “ಹಿರಿಯ ನಾಗರಿಕರಿಗೆ ಹಾಗೂ ಫಲಾನುಭವಿಗಳಿಗೆ ಪಿಂಚಣಿ ತೊಂದರೆ ಆಗದಂತೆ ಮತ್ತು ಹೊಸ ಅರ್ಜಿ ಸಲ್ಲಿಸುವವರಿಗೆ ತಕ್ಷಣ ಅರ್ಜಿಗಳು ಸ್ವೀಕರಿಸಿ ಪಿಂಚಣಿ ಅರ್ಜಿಗಳು ಪರಿಶೀಲಿಸಿ ಜಾಗದಲ್ಲಿಯೇ ಮಂಜೂರು ಮಾಡಿ” ಎಂದು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸಾಮಾಜಿಕ ಯೋಜನೆಗಳಲ್ಲಿ ತಾರತಮ್ಯ ಮಾಡದೆ ವಯಸ್ಸಾದವರಿಗೆ ಪಿಂಚಣಿ,ವಿಧವೆ ಪಿಂಚಣಿ,ದೈಹಿಕವಾಗಿ ಅಂಗವಿಕಲರಿಗೆ ಪಿಂಚಣಿ,ಸಂಧ್ಯಾ ಸುರಕ್ಷತೆ ವಿವಿಧ ಯೋಜನೆಗಳ ಪಿಂಚಣಿಯನ್ನೇ ಅವಲಂಬಿಸಿರುವ ಇಂತಹ ಫಲಾನುಭವಿಗಳಿಗೆ ಆದಷ್ಟು ಬೇಗನೆ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರತಿ ಗ್ರಾಮಕ್ಕೆ ಸ್ಮಶಾನ ಜಾಗ ಇರುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸರ್ಕಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಖರೀದಿಸಲು ಪ್ರಸ್ತಾವನೆ ಸಲ್ಲಿಸಿ ಮತ್ತು ನರೇಗಾದಲ್ಲಿ ಸ್ಮಶಾನ ಭೂಮಿ ಕಾಂಪೌಂಡ್ ಗೋಡೆ ನಿರ್ಮಿಸಲು ಕ್ರಮ ವಹಿಸಿ ಎಂದು ತಾಲೂಕ ದಂಡಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಜಮೀನು ಸರ್ವೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಎಂದು ಹೇಳಿದರು ಇಲಾಖೆ ಮತ್ತು ನೊಂದಾಯಿತ ಸರ್ವೇಯರಗಳಿಗೆ ಪ್ರಕರಣಗಳು ಹಂಚಿಕೆ
ಮಾಡಿ ಶೀಘ್ರದಲ್ಲಿ ಪ್ರಕರಣಗಳು ಇತ್ಯರ್ಥಪಡಿಸಿ ಎಂದು ಹೇಳಿದರು.ಕಂದಾಯ ಗ್ರಾಮ ಮಾಸಾಶನ ತ್ರೀ ಅಂಡ್ ನೈನ್ (3) ಮತ್ತು 9 ಕಲಂ ಮಿಸ್ ಮ್ಯಾಚ್ ಪೈಕಿ ಪಹಣಿ, ಮೋಜಿನ ಕಡತಗಳು ಆರ್.ಟಿ.ಸಿ ಎಜೆಎಸ್ಕೆ ತಂತ್ರಾಂಶದಡಿ ಸ್ವೀಕೃತವಾದ ಅರ್ಜಿಗಳು ನವೋದಯ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿ ಮಾಹಿತಿ ಪಡೆದರು ಸಕಾಲ ಅಡಿ ನೋಂದಾಯಿತ ಸೇವೆಗಳನ್ನು ಆಧ್ಯತೆ ಒಂದು ಒದಗಿಸಿ ಪ್ರಗತಿ ಸಾಧಿಸಬೇಕು ಜಿಲ್ಲಾಧಿಕಾರಿಗಳ ಆದೇಶಿಸಿದರು.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟಪ್ಪಗೊಳ,ಯಾದಗಿರಿ ತಾಲ್ಲೂಕ ದಂಡಾಧಿಕಾರಿ ಅಣ್ಣಾರಾವ್ ಪಾಟೀಲ್,ಶಹಾಪುರ ತಾಲೂಕ ದಂಡಾಧಿಕಾರಿ ಉಮಾಕಾಂತ ಹಳ್ಳೆ, ಸುರಪುರ ತಾಲೂಕ ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ,ಹುಣಸಗಿ ತಾಲೂಕ ದಂಡಾಧಿಕಾರಿ ಜಗದೀಶ್ ಚೌರ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ