ಕಲಬುರಗಿ/ಜೇವರ್ಗಿ:ಭೀಮರಾವ ಸಾಹು ವನ್ನಾಳ ಅವ್ರಿಗೆ ವಿಧಾನಪರಿಷತ್ತು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಗುರಣ್ಣಗೌಡ ಮಾಲಿ ಪಾಟೀಲ್
ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿರುವ ಜೇವರ್ಗಿ ತಾಲೂಕಿನಲ್ಲಿ ಇದುವರೆಗೂ ಹಿಂದುಳಿದ ಸಮುದಾಯದವರಿಗೆ ಚುನಾವಣೆಯಲ್ಲಿ ಬೆಳೆಯುವ ಅವಕಾಶ ನೀಡುವುದಿಲ್ಲ ಎಂದು ಗುರಣ್ಣ ಗೌಡ ಮಾಲಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಲ್ಲದೆ ಮುಂದೆ ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಭೀಮರಾವ್ ಸಾಹುವನ್ನಾಳ ಅವರಿಗೆ ಅವಕಾಶ ನೀಡಬೇಕು ಮುಂಬರುವ ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಹಿಂದುಳಿದ ಸಮುದಾಯದ ಹಿರಿಯ ಮುಖಂಡರಾದ ಭೀಮರಾವ್ ಸಾಹು ವನ್ನಾಳ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅವಕಾಶ ನೀಡಬೇಕು ಇದುವರೆಗೂ ನಮ್ಮ ತಾಲೂಕಿನಲ್ಲಿ ಹಿಂದುಳಿದ ಸಮುದಾಯದ ಮುಖಂಡರಿಗೆ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅವಕಾಶ ನೀಡಿರುವುದಿಲ್ಲ ದಿವಗಂತ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ಕೆಪಿಸಿಸಿ ಕಾಂಗ್ರೆಸ್ ವಕ್ತಾರ ಮಲ್ಲಿಕಾರ್ಜುನ ಖರ್ಗೆ ಅವರು ಭೀಮರಾವ್ ಸಾಹು ಹೊನ್ನಾಳ್ ಅವರಿಗೆ ಮನ್ನಣೆ ನೀಡಿದ್ದಾರೆ ಆದ್ದರಿಂದ ಹಿರಿಯ ಮುತ್ಸದಿ ಅನುಭವಿ ರಾಜಕಾರಣಿ ಪ್ರಾಮಾಣಿಕ ವ್ಯಕ್ತಿ ಎಂದೆ ಹೆಸರಾದ ಜೇವರ್ಗಿ ತಾಲೂಕಿನ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಭೀಮರಾವ್ ಸಾಹು ವನ್ನಾಳ ಅವ್ರಿಗೆ ಅವರ ಸಮಾಜ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಗುರಣ ಗೌಡ ಮಾಲಿ ಪಾಟೀಲ್ ಮಂಜು ನಾಟಿಕರ್ ಶರಣಪ್ಪ ದೊಡ್ಮನಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.