ರಾಯಚೂರು ಜಿಲ್ಲೆ ಲಿಂಗಸೂಗೂರ ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ಕಾರ ಹುಣ್ಣಿಮೆ ಹಬ್ಬದ ನಿಮಿತ್ಯ ಎತ್ತುಗಳಿಗೆ ಸಿಂಗಾರ ಮಾಡಿ ಕರಿ (ಓಟದ ಸ್ಪರ್ಧೆ )ನಡೆಸಿ ಸಂಭ್ರಮ ಆಚರಣೆ ಮಾಡಿದರು.
ಕಾರಹುಣ್ಣಿಮೆ ಮುಂಗಾರಿನ ಮೊದಲ ಹಬ್ಬ ವಾಗಿದ್ದು ಈ ಹಬ್ಬದದಂದು ಅನ್ನದಾತರು ತಮ್ಮ ತಮ್ಮ ಎತ್ತು,ಹೋರಿಗಳಿಗೆ ಕೆರೆ ಮತ್ತು ಹಳ್ಳದಲ್ಲಿ ಸ್ನಾನ ಮಾಡಿಸಿ ವಿವಿಧ ಬಣ್ಣದ ಅಲಂಕಾರಿಕ ವಸ್ತುಗಳನ್ನು ಪೇಟೆ ಯಲ್ಲಿ ತಂದು ಸಿಂಗಾರ ಮಾಡಿ ಮೈಮೇಲೆ ಮತ್ತು ಕೊಡೂ ಗಳಿಗೆ ಬಣ್ಣ ಹಚ್ಚಿ,ಮೈ ಮೇಲೆ ಚಿತ್ತಾರ ಬಿಡಿಸಿ ರೈತರು ಸಂಭ್ರಮ ಪಡುತ್ತಾರೆ.
ಉತ್ತರ ಕರ್ನಾಟಕದಲ್ಲಿ ವಿಭಿನ್ನ ವಾಗಿ ಕಾರ ಹುಣ್ಣಿಮೇ ಹಬ್ಬವನ್ನು ರೈತರ ಆಚರಣೆ ಮಾಡುತ್ತಾರೆ ಈ ಹಬ್ಬವನ್ನು ರೈತರ ಹಬ್ಬವೆಂದೆ ಹಳ್ಳಿಗಳಲ್ಲಿ ಕರೆಯುತ್ತಾರೆ.
ಕಾರ ಹುಣ್ಣಿಮೆ ಅಂಗವಾಗಿ ರೈತರ ಮನೆಯಲ್ಲಿ ವಿಧ ವಿಧವಾದ ತಿಂಡಿಗಳನ್ನು ಮಾಡಿ ಹೋಳಿಗೆ, ಕರಿಗಡಬು,ಶ್ಯಾವಗಿ ಹಪ್ಪಳ ಸೇರಿದಂತೆ ಬಗೆ-ಬಗೆಯ ತಿಂಡಿ ತಯಾರಿಸಿ ದೇವರಿಗೆ ಪೂಜೆ ಸಲ್ಲಿಸಿ ಎತ್ತುಗಳಿಗೆ ಪೂಜೆ ಮಾಡಿ ಗುರುಗಳಿಗೆ ಮೊದಲ ಪಂತಿಯಲ್ಲಿ ಊಟ ಮಾಡಿಸುವ ಪದ್ಧತಿ ಹಳ್ಳಿಗಳಲ್ಲಿ ಇನ್ನೂ ಸಂಪ್ರದಾಯವಿದೆ ಸಂಜೆ ಊರ ಅಗಸಿ ಬಾಗಿಲು ಮಾವು ತೋರಣ ಕಟ್ಟಿ ಅಲಂಕಾರ ಮಾಡಿ ಸಿಂಗರಿಸಿದ ಎತ್ತುಗಳಲ್ಲಿ ಒಂದು ಕಂದು ಹಾಗೂ ಬಿಳಿ ಬಣ್ಣದ ಎತ್ತುಗಳ ಮೂಲಕ ಕರಿ ಹರಿಯಲಾಗುತ್ತದೆ.
ಕಾರಹುಣ್ಣಮೆಯ ನಿಮಿತ್ಯ ಇಂದು ಚಿಕ್ಕಹೆಸರೂರು ಗ್ರಾಮದಲ್ಲಿ ಎತ್ತುಗಳನ್ನು ಸಿಂಗಾರ ಮಾಡಿ ರೈತರು ಅಗಸಿಯಿಂದ ಹಿಡಿದು ದಣೆರ ಮನೆಯವರೆಗೂ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಓಟದ ಸ್ಪರ್ಧೆಯಲ್ಲಿ ಕಂದು ಬಣ್ಣದ ಎತ್ತುಗಳು ಮತ್ತು ಬಿಳಿ ಬಣ್ಣದ ಎತ್ತುಗಳ ಮೂಲಕ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಸ್ಪರ್ಧೆ ಯಲ್ಲಿ ಬಿಳಿ ಬಣ್ಣದ ಎತ್ತುಗಳು ಮೊದಲ ಸ್ಥಾನ ಪಡೆದುಕೊಂಡವು.
ಈ ಕರಿಯಲ್ಲಿ ಬಿಳಿ ಮತ್ತು ಕೆಂಪು ಹಾಗೂ ಕಂದು ಬಣ್ಣದ ವಿಧ ವಿಧವಾದ ಬಣ್ಣಗಳಿಂದ ಅಲಂಕಾರ ಮಾಡಿದ ಎತ್ತುಗಳು ಪಾಲ್ಗೊಂಡಿದ್ದವು.
ಈ ಕಾರ ಹುಣ್ಣಿಮೆ ಪ್ರಯುಕ್ತ (ಕರಿ)ಓಟದ ಸ್ಪರ್ಧೆಯನ್ನು ವೀಕ್ಷಿಸಲು ಊರಿನ ಗುರು ಹಿರಿಯರು,ಹೆಣ್ಣುಮಕ್ಕಳು ಆಭರಣಗಳನ್ನು ಹಾಕಿ ಕೊಂಡು ಬಣ್ಣ ಬಣ್ಣದ ಸೀರೆಯನ್ನು ಉಟ್ಟು ಕೊಂಡು ಕರಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿ ಕಂಡುಬಂತು. ಊರಿನ ಅಗಸಿ ಚಿಕ್ಕಮಕ್ಕಳಿಂದ ತುಂಬಿಹೋಗಿತ್ತು ಇನ್ನೊಂದು ವಿಶೇಷ ಅಂದರೆ ಹಳ್ಳಿಗಳಲ್ಲಿ ಕಂದು ಬಣ್ಣದ ಎತ್ತುಗಳು ಮೊದಲು ಬಂದರೆ ಮಸಾರಿ ಹೊಲದ ಬೆಳೆಗಳು ಹಾಗೂ ತೊಗರಿ,ಗೋದಿ ಬೆಳೆಗಳು ಚೆನ್ನಾಗಿ ಬರುತ್ತವೆ ಬಿಳಿ ಬಣ್ಣದ ಎತ್ತುಗಳು ಮೊದಲು ಬಂದರೆ ಬಿಳಿಜೋಳ, ಹತ್ತಿ,ಬೆಳೆಗಳು ಚೆನ್ನಾಗಿ ಬರುತ್ತವೆ ಅಂತ ರೈತರಲ್ಲಿ ನಂಬಿಕೆ ಈ ಕಾರಹುಣ್ಣಿಮೆ ಕರಿಯಲ್ಲಿ ಶ್ರೀ ಚಂದ್ರಕಾಂತ ನಾಡಗೌಡ ಅವರ ಎತ್ತುಗಳು ಮತ್ತೆ ಮಾನಪ್ಪ ಮೇಟಿ,ಅವರ ಎತ್ತುಗಳು ಕರಿ ಬಿಡಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಚಂದ್ರಕಾಂತ ನಾಡಗೌಡ ಮತ್ತು ಶಾಂತಣ್ಣ ಪಟ್ಟೆದ,ಮಹಾಂತೇಶ ಮಾವಿನಬಾವಿ, ಮೌನೇಶ ಮಾವಿನಬಾವಿ ಗ್ರಾ.ಪಂ. ಪಂಚಾಯತ,ಸದ್ಯಸರು ಹಾಗೂ ಹಿರಿಯರು ಮತ್ತು ಹೆಣ್ಣುಮಕ್ಕಳು ಪಾಲ್ಗೊಂಡಿದ್ದರು.
-ಪುನೀತಕುಮಾರ್
2 Responses
ನಮ್ಮ ಊರಿನ ಧಣಿಗಳು ಊರಿನ ರೈತರಿಗೆ ಮತ್ತು ಯುವಕರಿಗೆ ಅನೇಕ ಕ್ಷೇತ್ರಗಳಲ್ಲಿ ಉತ್ತೇಜನವನ್ನು ನೀಡುತ್ತಿದ್ದಾರೆ. ಹೀಗೆ ನಮ್ಮ ಊರಿನ ಇನ್ನೂ ಹೆಚ್ಚಲಿ ಎಂದು ದೇವರಲ್ಲಿ ಕೊರಿಕೊಳ್ಳುತ್ತೆನೆ.
ಎಲ್ಲರಿಗೂ ಒಳ್ಳೆಯದಾಗಲಿ
ನಮ್ಮ ಊರಿನ ಧಣಿಗಳು ಊರಿನ ರೈತರಿಗೆ ಮತ್ತು ಯುವಕರಿಗೆ ಅನೇಕ ಕ್ಷೇತ್ರಗಳಲ್ಲಿ ಉತ್ತೇಜನವನ್ನು ನೀಡುತ್ತಿದ್ದಾರೆ. ಹೀಗೆ ನಮ್ಮ ಊರಿನ ಹಿರಿಮೆ ಇನ್ನೂ ಹೆಚ್ಚಲಿ ಎಂದು ದೇವರಲ್ಲಿ ಕೋರಿಕೊಳ್ಳುತ್ತೆನೆ.
ಎಲ್ಲರಿಗೂ ಒಳ್ಳೆಯದಾಗಲಿ