ರಾಯಚೂರು:ಲಿಂಗಸುಗೂರು:ಜ್ಞಾನ ಧಾರೆ ಎರೆದ ಅಕ್ಷರ ಬಿತ್ತಿ ಅಜ್ಞಾನದ ಅಂಧಕಾರ
ಹೊಡೆದೋಡಿಸಿದ ನಿಸ್ವಾರ್ಥ ಜೀವಿ,ಕಲಿಸಿದ ಗುರುಗಳ ಸ್ಮರಣೆಗೊಂದು ವೇದಿಕೆ ಸಿದ್ಧಗೊಂಡಿದೆ ಹೌದು ಲಿಂಗಸುಗೂರು ತಾಲೂಕಿನ ಚಿಕ್ಕ ಹೆಸರೂರು ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕ ಹೆಸರೂರು ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದನ ಕಾರ್ಯಕ್ರಮ, ಸುಮಧುರ ಸ್ನೇಹ ಸಮ್ಮಿಲನ ಸಮಾರಂಭ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮ ಮುಂಚಿತವಾಗಿ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಚನ್ನಪ್ಪ ಶಿಕ್ಷಕರ ಬಗ್ಗೆ ಸಣ್ಣ ಕಿರು ಪರಿಚಯವನ್ನು ಶಿವಕುಮಾರ ಮುಂಡರಗಿ ತಿಳಿಸಿದರು ಇವರ ಪೂರ್ಣ ಹೆಸರು ಶ್ರೀ ಚನ್ನಪ್ಪ ತಂದೆ ಅಮರಪ್ಪ ರಾಯಚೂರು ಜಿಲ್ಲೆ ಈಗಿನ ಮಸ್ಕಿ ತಾಲೂಕಿನ ಅಮಿನಗಡ ಎಂಬ ಊರಿಗೆ ಶಿಕ್ಷಕರಾಗಿ 1994 ರಲ್ಲಿ ನಮ್ಮ ಸ. ಕಾ. ಹಿ. ಪ್ರಾಥಮಿಕ ಶಾಲೆಗೆ ಚಿಕ್ಕಹೆಸರೂರು ಶಾಲೆಗೆ ಸೇವೆ ಸಲ್ಲಿಸಲು ಬಂದಿದ್ದು ಇವರು ಒಂಬತ್ತು ವರ್ಷಗಳ ಕಾಲ ಸೇವಿ ಸಲ್ಲಿಸಿ,2003 ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕೆಹೆಸರೂರಲ್ಲಿ ಇವರು ನಿವೃತ್ತಿ ಹೊಂದಿದರು ಎಂದು ಸಣ್ಣ ಕಿರು ಪರಿಚಯ ಮಾಡಿದರು.ಚಿಕ್ಕ ಹೆಸರೂರಿನ ನಿವೃತ್ತ ಮುಖ್ಯ ಗುರುಗಳಾದ ಶ್ರೀ ಚನ್ನಪ್ಪ ಗುರುಗಳನ್ನು ಎಲ್ಲ ಹಳೆಯ ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳಿಂದ ಪುಷ್ಪವನ್ನು ಅರ್ಪಿಸುವ ಮುಖಾಂತರ ಕಾರ್ಯಕ್ರಮದ ವೇದಿಕೆಗೆ ಸ್ವಾಗತ ಕೋರಲಾಯಿತು ಕಾರ್ಯಕ್ರಮವನ್ನು ಎಲ್ಲಾ ಶಿಕ್ಷಕ ವೃಂದದವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀ ಶರಣಗೌಡ ಸರ್ ಮಾತನಾಡಿ ಇದು ಒಂದು ಐತಿಹಾಸಿಕ ಕಾರ್ಯಕ್ರಮ ಈ ಒಂದು ಕಾರ್ಯಕ್ರಮದಿಂದ ನನಗೆ ವೈಯಕ್ತಿಕವಾಗಿ ಬಹಳ ಸಂತೋಷ ತಂದಿದೆ ಈ ಕಾರ್ಯಕ್ರಮ ಯಾಕೆ ಅದ್ದೂರಿಯಾಗಿ ಆಗಿದೆ ಅಂದ್ರೆ ಮಕ್ಕಳಿಗೆ ಇವರು ಕಲಿಸಿದಂತ ವಿದ್ಯೆ ಪರಿಣಾಮ ಈ ಕಾರ್ಯಕ್ರಮ ಆಗಲು ಕಾರಣ ಈ ಜಗತ್ತಲ್ಲಿ ಜೀವಂತ ದೇವರು ಯಾರಾದರೂ ಇದ್ದಾರೆ ಎಂದರೆ ಅದು ಗುರು ಒಬ್ಬನೇ ಅಂತ ಈ ಸಂದರ್ಭದಲ್ಲಿ ಹೇಳಿದರು ಈ ಕಾರ್ಯಕ್ರಮಗಳು ಸಣ್ಣ ಮಕ್ಕಳಿಗೆ ಮುಂದೆ ಬರುವ ಪೀಳಿಗೆಗೆ ಮಾದರಿಯಾಗಬೇಕು ಹೇಳಿದರು.
ಈ ಗುರುವಂದನ ಕಾರ್ಯಕ್ರಮದ ಬಗ್ಗೆ ಹಳೆ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು,ನಾವು ಚಿಕ್ಕವರಿದ್ದಾಗ ನಮ್ಮ ಗುರುಗಳು ಸರಿ ದಾರಿಯಲ್ಲಿ ನಡೆಯೋ ಒಂದು ಪಾಠವನ್ನು ಹೇಳಿದ್ದಾರೆ ನಾವು ಚಿಕ್ಕವರಿದ್ದಾಗ ನಮ್ಮ ಗುರುಗಳು ಚಡಿ ಚಂ ಚಂ ವಿದ್ಯೆ ಘಂ ಘಂ ಅನ್ನೋ ಅಸ್ತ್ರ ಇತ್ತು ಅಂತ ಹೇಳಿದರು ನಮ್ಮ ಗುರುಗಳು ಶಾಲೆ ಪ್ರಾರಂಭ ಆಗುವ ಮುಂಚೆ ಒಂದು ತಾಸು ಮುಂಚೇನೆ ಶಾಲೆಗೆ ಬರುತ್ತಿದ್ದರು ಅಷ್ಟು ಸಮಯ ಪಾಲನೆ ಮಾಡುತ್ತಿದ್ದರು ಅವರು ಬಸ್ ಇಳಿದು ಶಾಲೆಗೆ ಹೋಗುತ್ತಿರುವ ಮಧ್ಯದಲ್ಲಿ ಯಾರಾದರೂ ಹಿರಿಯರು ಬಿಡಿ ಸಿಗರೇಟ್ ಸೇದುತ್ತಿದ್ದರೆ ಅವರು ಬರುವದು ಕಂಡರೆ ಬಿಸಾಕಿ ಬಿಡುತಿದ್ದರು ಅಷ್ಟೊಂದು ಗೌರವ ನೀಡುವದರ ಜೊತೆ ಅಂಜಿಕೆ ಸಹ ನಮ್ಮ ಹಿರಿಯರಲ್ಲಿ ಇತ್ತು ಮಕ್ಕಳ ಜೊತೆಗೆ ನಮ್ಮ ಊರಿನ ಕೆಲವು ವ್ಯಕ್ತಿಗಳು ಕೆಟ್ಟ ಅಭ್ಯಾಸವನ್ನು ಬಿಟ್ಟು ಒಳ್ಳೆ ದಾರಿಯಲ್ಲಿ ನಡಿಯುತ್ತಿರುವ ಉದಾ ಇದೆ ಅಂತ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿದರು.
ಈ ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಶ್ರೀ ರಾಮಪ್ಪ ಶಿಕ್ಷಕರು ಮಾತಾನಾಡಿ ನಿವೃತ್ತ ಮುಖ್ಯ ಗುರುಗಳ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು ಮತ್ತು ಗುರು ಎಂದರೆ ನಮಗೆ ಸಣ್ಣವರಿಂದ ಹಿಡಿದು ದೊಡ್ಡವರಾಗೋ ವರೆಗೆ ಯಾರು ನಮಗೆ ಜ್ಞಾನ ಕೊಟ್ಟು ಸರಿ ದಾರಿಯಲ್ಲಿ ನಡೆಸುತ್ತಾರೆ , ಅಜ್ಞಾನದಿಂದ ಸುಜ್ಞಾನದಡೆಗೆ ಕರೆದುಕೊಂಡು ಹೋಗುವವನೇ ನಿಜವಾದ ಗುರು ಎಂದು ಹೇಳಿದರು,ಗುರು ಎಂಬ ಪದ ಅನಾದಿ ಕಾಲದಿಂದ ಉತ್ಪತ್ತಿ ಆಗಿರುವಂತ ಒಂದು ಪದ ಎಂದು ಗುರುವಿನ ಮಹತ್ವವನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಮತ್ತು ಈ ಕಾರ್ಯಕ್ರಮದ ಗೌರವನ್ವಿತ ಶ್ರೀ ಚನ್ನಪ್ಪ ನಿವೃತ್ತ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯಕ್ರಮದ ಬಗ್ಗೆ ಮಾತಾನಾಡಿ ನನಗೆ ಎಷ್ಟು ಖುಷಿ ಆಗಿದೆ ಅಂದ್ರೆ ನಿಮ್ಮ ಸನ್ಮಾನ ನಿಮ್ಮ ಪ್ರೀತಿ ನನ್ನ ಆಯಸ್ಸು ಆರೋಗ್ಯವನ್ನು ವೃದ್ಧಿಸಿದೆ ಎಂದು ಹೇಳಿದರು,ವಿದ್ಯೆ ಎಂಬುದು ಸ್ವತ್ತು ಅದು ಹಚ್ಚಿಕೋಳೋಕು ಬರಲ್ಲ ಯಾರಿಗೂ ಕೊಡೋಕೆ ಬರಲ್ಲ ಆದರೆ ಹೇಳಿ ಕೋಟಷ್ಟು ಹೆಚ್ಚು ಆಗುತ್ತೆ,ತಂದೆ ಮಗನಿಗೆ ಯಾವ ರೀತಿ ಹೇಳುತ್ತಾನೇ ಆ ರೀತಿ ಮಗ ಒಳ್ಳೆ ದಾರೀಲಿ ನಡೆದು ಕೊಳ್ಳುಬೇಕು ಎಸ್,ಎಸ್,ಎಲ್,ಸಿ ಹಾಗೂ
ಪಿ,ಯು,ಸಿ ಮುಗಿಸಿದ ಮಕ್ಕಳು ತಮ್ಮ ಮುಂದಿನ ಶಿಕ್ಷಣದ ಪಠ್ಯಕ್ರಮ ಆಯ್ಕೆಯನ್ನು ಸರಿಯಾಗಿ ತೆಗೆದುಕೊಳ್ಳುಬೇಕು ಆದರೆ ಈ ಸಂದರ್ಭದಲ್ಲಿ ಒಂದು ಮಾತು ಹೇಳಬಲ್ಲೆ ಇವತ್ತು ಈ ಸಭೆಯನ್ನು ನೋಡಿದರೆ ನಿಮ್ಮ ಪ್ರೀತಿಗೆ ನಿಜವಾಗಿಯೂ ನಾನು ತುಂಬಾ ಖುಷಿಯಾಗಿದ್ದೇನೆ ಅಂತ ಹೇಳಿದರು ನನ್ನ ಶಿಕ್ಷಣದ ಬೋಧನೆ ಹೇಗಿತ್ತು ಅಂದ್ರೆ ತಪ್ಪು ಮಾಡಿದ ಹುಡುಗನಿಗೆ ಒಂದು ಏಟು ಹೊಡೆದರೆ ಸಾಕು ಅದು ಒಂದು ವರ್ಷದವರೆಗೆ ನಡೀತಿತ್ತು ಅದರೆ ಮಕ್ಕಳಿಗೆ ಹೊಡಿಯೋದು ಮುಖ್ಯ ಅಲ್ಲ ಅಂಜಿಕೆ ಬಹಳ ಮುಖ್ಯ ಅದನ್ನು ನೋಡಿದ ಮಕ್ಕಳು ಯಾರು ತಪ್ಪು ಮಾಡ್ತಿರಲಿಲ್ಲ,ನೀವೆಲ್ಲ ತುಂಬಾ ಜಾಣರು ಆಗ್ಬೇಕು ಇನ್ನು ಉನ್ನತ ಹುದ್ದೆಗೆ ಹೋಗ್ಬೇಕು ಯಾರು ವಿದ್ಯಾಭ್ಯಾಸ ಮಾಡಬೇಕು ಅಂತ ತಿಳಿದಿರಿ ಅವರು ಸುಮ್ಮನೆ ಕುಳಿತರೆ ವಿದ್ಯಾಭ್ಯಾಸ ಆಗೋದಿಲ್ಲ ನಿಮ್ಮ ನಿಮ್ಮ ಶಿಕ್ಷಕರ ಹತ್ತಿರ ಗೊತ್ತಿಲ್ಲದ ವಿಷಯದ ಬಗ್ಗೆ ಚರ್ಚೆ ಮಾಡಿ ಕೊಂಡು ಓದುವುದಕ್ಕೆ ಅಂತಾನೆ ಒಂದು ಸಮಯ ನಿಗದಿ ಮಾಡಿಕೊಳ್ಳಿ ಅಂತ ಈಗಿನ ಶಾಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು ಕೊನೆಯದಾಗಿ ಹೇಳಿ ನೀವು ಕರಿಸಿ ಸನ್ಮಾನ ಮಾಡ್ದಿದೀರಿ ನಿಮ್ಮ ಪ್ರೀತಿ,ಪ್ರೇಮ,ವಿಶ್ವಾಸಕ್ಕೆ ತುಂಬ ಧನ್ಯವಾದಗಳು ಅಂತ ತಿಳಿಸಿದರು
ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಹೆಸರೂರು ಈ ಕಾರ್ಯಕ್ರಮವು ಗುರು-ಶಿಷ್ಯರ ಮಿಲನ ಆಗಿದೆ ಸಣ್ಣವರಿದ್ದಾಗ ಕಲಿಸಿದ ವಿದ್ಯೆಯನ್ನು ಮತ್ತೆ ನೀವು ನೆನಪು ಇಟ್ಟುಕೊಂಡು ಗೌರವ ಸನ್ಮಾನ ಮಾಡಿದ್ದೀರಿ ಇದಕ್ಕಿಂತ ದೊಡ್ಡ ಪ್ರಶಸ್ತಿ ನಮಗೆ ಯಾವುದು ದೊಡ್ಡದಲ್ಲ ಎಂದು ನಾವು ನಿಮ್ಮ ಪ್ರೀತಿ ಯಾವತ್ತೂ ಮರಿಯೋಕೆ ಎಂದು ಮರಿಯೋಕೆ ಸಾಧ್ಯವಿಲ್ಲ ಎಂದು ಹೇಳಿದರು ಶ್ರೀ ದಂಡನಗೌಡ ಶಿಕ್ಷಕರು ಹಾಗೂ ಶ್ರೀ ಪ್ರಭು ಜಾಲಹಳ್ಳಿ ಒಂದು ಒಳ್ಳೆ ನಿರೂಪಣೆ ವೇದಿಕೆಗೆ ಕಳೆ ತಂದರು.ಸಾಯಂಕಾಲ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು ಮಕ್ಕಳ ನೃತ್ಯ ನೋಡಿ ಎಲ್ಲ ತಂದೆ ತಾಯಿಗಳು ಖುಷಿ ಪಟ್ಟರು.
ಈ ಸಂದರ್ಭದಲ್ಲಿ ಶ್ರೀ ಚನ್ನಪ್ಪ ನಿವೃತ್ತ ಮುಖ್ಯ ಗುರುಗಳು ಸ.ಹಿ.ಪ್ರಾ. ಶಾಲೆ ಚಿಕ್ಕಹೇಸರೂರು,
ಶ್ರೀ ರಾಮಪ್ಪ ಶಿಕ್ಷಕರು,ಶ್ರೀ ಶರಣಪ್ಪ ಮೇಟಿ ನಿವೃತ್ತ ಮುಖ್ಯ ಗುರುಗಳು ಸ.ಹಿ.ಪ್ರಾ.ಶಾಲೆ ಸರ್ಜಾಪುರ,ಶ್ರೀ ಶರಣಗೌಡ ಮುಖ್ಯ ಗುರುಗಳು ಸರಕಾರಿ ಪ್ರೌಢ ಶಾಲೆ ಚಿಕ್ಕಹೇಸರೂರು,
ಶ್ರೀ ಮತಿ ವಿಜಯಲಕ್ಷ್ಮೀ ಮುಖ್ಯ ಗುರುಗಳು ಸ. ಹಿ. ಪ್ರಾ. ಶಾಲೆ ಚಿಕ್ಕಹೇಸರೂರು,
ಶ್ರೀ ಅಮರಪ್ಪ ಮುಖ್ಯ ಗುರುಗಳು ಸ. ಹಿ. ಪ್ರಾ. ಶಾಲೆ ಅಮರಾವತಿ,
ಶ್ರೀ ಚನ್ನನಗೌಡ ಮುಖ್ಯ ಗುರುಗಳು ಸ. ಕಿ. ಪ್ರಾ. ಶಾಲೆ ಹಿರೇಹೆಸರೂರು,
ಎಲ್ಲ ಶಾಲೆ ಸಿಬ್ಬಂದಿ ವರ್ಗದವರು
ಶ್ರೀ ನಾಗಪ್ಪ ದಳಪತಿ ಊರಿನ ಹಿರಿಯರು
SDMC ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದ್ಯಸರು ಊರಿನ ಗುರುಹಿರಿಯರು ಮತ್ತು ಹಳೆಯ ವಿದ್ಯಾರ್ಥಿ ಬಳಗದವರು ಪಾಲ್ಗೊಂಡಿದ್ದರು
ವರದಿ:ಪುನೀತ್ ಜೀ ಸಾಗರ್