ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶಾಂತಿ, ಸೌಹಾರ್ಧತೆಗಾಗಿ ಕನ್ನಡ ಸಾಹಿತ್ಯ– ಯಶವಂತರಾಯಗೌಡ ಪಾಟೀಲ್

ಇಂಡಿ :ಕರ್ನಾಟಕ ಸರ್ವ ಜನಾಂಗದ
ಶಾಂತಿಯ ತೋಟವಾಗಿರಲು ನಮ್ಮ ಸಾಹಿತ್ಯದ ಕೊಡುಗೆ ಅಪಾರವಾಗಿದೆ.ಯುವ ಸಾಹಿತಿಗಳ ಮನಸ್ಸು ಒಂದು ಗೂಡಿ,ಶಾಂತಿ, ಪ್ರೀತಿಯಿಂದ ಬಾಳುವ ಸಾಹಿತ್ಯ ರಚಿಸಿದರೆ ಕರ್ನಾಟಕ ಎಲ್ಲಾ ವಿಧದಲ್ಲೂ ಸಮೃದ್ಧಿಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಶಂಕರ ಪಾರ್ವತಿ ಸಭಾಭವನದಲ್ಲಿ ಕಸಾಪ ತಾಲೂಕು ಘಟಕ ಇಂಡಿ,ಇಂಡಿ ತಾಲೂಕಾ ಬ್ರಾಹ್ಮಣರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಾ ಕಸಾಪ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಾ
ಕಸಾಪ ಕನ್ನಡ ನಾಡಿಗಾಗಿ ಸೇವೆ ಮಾಡುತ್ತಿದೆ. ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿದೆ ಎಂದ ಅವರು ಗಡಿಭಾಗದಲ್ಲಿ ಕನ್ನಡ ರಕ್ಷಣೆ ಮಾಡುವ ಜೊತೆಗೆ ಅಕ್ಕಲಕೋಟ,ಜತ್ತ ಭಾಗಗಳಲ್ಲಿ ಕನ್ನಡ ಮಾದ್ಯಮ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ ಎಂದ ಅವರು ಗಡಿಭಾಗದಲ್ಲಿ ರಕ್ಷಣೆ ಮಾಡಬೇಕಾಗಿದೆ ಎಂದರು.
ಸಿದ್ದೇಶ್ವರ ಶ್ರೀಗಳ ಕುರಿತು ಪಠ್ಯದಲ್ಲಿ ಅವರ ಚರಿತ್ರೆ ಅಳವಡಿಸಬೇಕು ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಸಿದ್ದೇಶ್ವರ ಶ್ರೀಗಳ ಪ್ರಭಾವ ಬೀರಬೇಕು.ಸಿದ್ದೇಶ್ವರ ಶ್ರೀಗಳು ಜನಮಾನಸಕ್ಕೆ ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆ ಮುಂದಿನ ಜನಾಂಗಕ್ಕೆ ತಿಳಿಸಬೇಕು. ಹೀಗಾಗಿ ಸಿದ್ದೇಶ್ವರ ಶ್ರೀಗಳ ಚರಿತ್ರೆ ಪಠ್ಯದಲ್ಲಿ ಅಳವಡಿಸಲು ಸರಕಾರದ ಮೇಲೆ ಒತ್ತಡ ತರುವದಾಗಿ ತಿಳಿಸಿದರು.
ವಿಜಯಪುರ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ನಾಡು,ನುಡಿ ಕನ್ನಡ ಭಾಷೆ,ಸಂಸ್ಕೃತಿ,ಸಾಹಿತ್ಯ,ಕವಿ,ಸಾಧಕರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಕಾಯಕ ಮಾಡುವ ಜೊತೆಗೆ ಸರ್ವ ಧರ್ಮ ದವರನ್ನು ಗೌರವಿಸುವ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುತ್ತೇನೆ ಎಂದ ಅವರು ಕಳೆದ ವರ್ಷ ೧೩೫ ಪೂಜ್ಯ ರನ್ನು ವಿವಿಧ ಸಮಾರಂಭಗಳಿಗೆ ಕರೆಯಿಸಿ ಗೌರವಿಸಿದ್ದೇನೆ ಎಂದರು. ಕಸಾಪದಿಂದ ನಿರಂತರ ಚಟುವಟಿಕೆಗಳನ್ನು ಜಿಲ್ಲಾ,ತಾಲೂಕು ಹೊಬಳಿ ಮಟ್ಟದಲ್ಲಿ ನಡೆಸಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಕನ್ನಡ ಹಾಗೂ ಕನ್ನಡದ ಸಂಘ ಸಂಸ್ಥೆಗಳಿಗೆ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತೇನೆ ಎಂದರು.
ತಡವಲಗಾದ ರಾಚೋಟೇಶ್ವರ ಶ್ರೀಗಳು, ಉಪನ್ಯಾಸ ನೀಡಿ ನಾದ ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಸಿ.ಎಂ.ಬoಡಗರ ಗುರುಗಳು, ಅಧಿಕಾರ ಪದಗ್ರಹಣ ಮಾಡಿ ತಾಲೂಕಾ ಅಧ್ಯಕ್ಷ ರಾಘವೇಂದ್ರ . ಕುಲಕರ್ಣಿ,ಪಾರ್ವತಿ ಸೊನ್ನದ,ಅಡಿವೆಪ್ಪ ಸರಸಂಬಿ, ಸಂತೋಷ್ ವಾಲಿಕಾರ,ಎಂ.ಬಿ.ಬೈರಾಮಡಗಿ ಆಯ್.ಎಸ್.ಮಾಶ್ಯಾಳ ಮಾತನಾಡಿದರು.
ವೇದಿಕೆಯ ಮೇಲೆ ಸಂಶೋಧಕ ಡಿ.ಎನ್.ಅಕ್ಕಿ,ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಬಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಜಾವೇದ ಮೋಮಿನ್,ವಿಜಯಲಕ್ಷ್ಮಿ ದೇಸಾಯಿ,ಡಿ.ಆರ್.ಶಹಾ,ತಾಲುಕು ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ ಜೆಒಸಿಸಿ ಬ್ಯಾಂಕ ಉಪಾಧ್ಯಕ್ಷ ಅಲ್ಲಾಬಕ್ಷ ವಾಲಿಕಾರ, ಸತೀಶಚಂದ್ರ ಕುಲಕರ್ಣಿ, ಪ್ರಶಾಂತ ಕಾಳೆ, ಎಂ.ಎo.ವಾಲಿಕಾರ, ಎಸ್.ವಿ.ಹರಳಯ್ಯ, ಪರಮಾನಂದ ಚಾಂದಕವಠೆ ಮತ್ತಿತರಿದ್ದರು.
ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ