ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿಗಳ ಅವ್ಯವಹಾರದ ಬಗ್ಗೆ ತನಿಖೆ ಮಾಡಲು ಅರ್ಜಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ಮಾಡದೇ ಕುಳಿತಲ್ಲೇ ಕಮೀಶನ್ ಮೂಲಕ ಬಿಲ್ ಮಾಡಿದ್ದಾರೆ.ಈಗಾಗಲೇ ತಪ್ಪಿತಸ್ಥರಾದ ಪಂಚಾಯತ್ ಅಭಿವೃಧ್ಧಿ ಅಧಿಕಾರಿಯಾದ ಸುರೇಶ ರೆಡ್ಡಿ ಮತ್ತು ಕಿರಿಯ ಅಭಿಯಂತರರಾದ ಆಸಿಮ್ ಖಾನ್ ರನ್ನು ಮೇಲಾಧಿಕಾರಿಗಳು ವಿಚಾರಣೆಗೆ ತೆಗೆದುಕೊಂಡು ಎಲ್ಲಾ ಕಾಮಗಾರಿಯನ್ನು ಸರಿಪಡಿಸಿಕೊಡಿ ಇಲ್ಲವೆ ನಮ್ಮ ಪಂಚಾಯತ್ನಿಂದ ಅಮಾನತ್ತುಗೊಳಿಸಿ ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹಸನ್ ಪಟೇಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಒಂದು ವೇಳೆ ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಮುಂಬರುವ ದಿನಗಳಲ್ಲಿ ಇಡೀ ಪಂಚಾಯತ್ ಮತ್ತು ತಾಲ್ಲೂಕು ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದರು.
ವರದಿ:ನಬಿ ಪಟೇಲ್ ಮೇಟಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.