ಲಿಂಗಸೂಗೂರ ಕಲ್ಯಾಣ ಕರ್ನಾಟಕ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಜನರು ಮರೆತು ಹೋಗಿದ್ದಾರೆ.ಪಟ್ಟಣದ ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ,ಮುಖ್ಯವಾಗಿ ಪ್ರಯಾಣಿಕರಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆಯಿಲ್ಲ,
ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಜನರು ಮರೆತು ಶೌಚಾಲಯ ಪಕ್ಕದಲ್ಲೇ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡ್ತಿದ್ದು ಇದರಿಂದ ಜನರಿಗೆ ದುರ್ವಾಸನೆ ಬರುತ್ತಿದೆ. ಸಾರ್ವಜನಿಕ ಆಸ್ತಿ ಮತ್ತು ಸ್ವಚ್ಛತೆ ಕಾಪಾಡುವದು ನಮ್ಮೆಲ್ಲರ ಕರ್ತವ್ಯ ಆದರೆ ಜನರು ಮೂತ್ರ ವಿಸರ್ಜನೆಗೆ ದುಡ್ಡು ನೀಡಬೇಕು ಅಂತ ಯೋಚನೆ ಮಾಡಿ ಬಸ್ ನಿಲ್ದಾಣದ ಖಾಲಿ ಜಾಗದಲ್ಲಿ ವಾಹನ ಚಾಲಕರು,ನಿರ್ವಾಕರು ಮತ್ತು ಸಾರ್ವಜನಿಕರು ಶೌಚಾಲಯ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ, ಇದರಿಂದ ರೋಗ ಹರಡುವ ಸಂಭವವಿದ್ದು , ಸ್ವಚ್ಛತೆ ಕಾಪಾಡುವಲ್ಲಿ ಸಂಬಂಧಪಟ್ಟ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ಮರೆತು ಹೋಗಿದ್ದಾರೆ ಅಂತಾನೆ ಹೇಳ್ಬಹುದು ಆದರೆ ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣದಲ್ಲಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಮಲ ವಿಸರ್ಜನೆಗೆ ಮಾತ್ರ ಶುಲ್ಕ ನಿಗದಿ ಪಡಿಸಿದ್ದಾರೆ ಸಂಬಂಧ ಪಟ್ಟ ಗುತ್ತಿಗೆ ಕೆಲಸಗಾರರು ಸ್ವಚ್ಛತೆಯನ್ನು ಕೂಡಾ ಕಾಪಾಡುತ್ತಿದ್ದು ಜನರು ಮಾತ್ರ ಶೌಚಾಲಯವನ್ನು ನಿರ್ಲಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಅಸ್ತಿಯನ್ನು ಸ್ವಚ್ಛತೆಯಿಂದ ಕಾಪಾಡುವದು ನಮ್ಮೆಲ್ಲರ ಕರ್ತವ್ಯ, ಸಾರ್ವಜನಿಕರು ಶೌಚಾಲಯ ಬಳಿಸಿ ಸ್ವಚ್ಛತೆ ಕಾಪಾಡದೆ ಇದ್ದ ಪಕ್ಷದಲ್ಲಿ ಇದಕ್ಕೆ ಸಂಬಂಧಪಟ್ಟ ಸಾರಿಗೆ ಸಂಸ್ಥೆ ಅಧಿಕಾರಗಳು ಎಚ್ಚೆತ್ತು ಸ್ವಚ್ಛತೆ ಕಾಪಾಡಿ ಒಬ್ಬ ಹೋಮ್ ಗಾರ್ಡ್ ನಿಯೋಜನೆ ಮಾಡಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೊಂದು ದಿನ ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದರಾಗುತ್ತದೆ.
ವರದಿ:ಪುನೀತಕುಮಾರ