ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯ ಜೇವರ್ಗಿಯಲ್ಲಿ ಇಂದು ನಾ ಕಂಡ ಬಹಳ ವಿಶೇಷ ವಿದ್ಯಾರ್ಜನೆಯಾಗಿದೆ ಏಕೆಂದರೆ ಪ್ರತಿ ಭಾನುವಾರ ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ರವರು ಹಾಗೂ ಅವರ ತಂಡದವರಾದ ಸಿದ್ದಣ,ಯಲ್ಲಮ್ಮ,ಅಂಬ್ರೇಶ್,ಭೀಮಾಶಂಕರ ರವರು ಸ್ಪರ್ಧಾ ಆಕಾಂಕ್ಷಿಗಳಿಗೆ ನೂರು ಅಂಕದ ಪರೀಕ್ಷೆ ನಡೆಸಿ ಮೌಲ್ಯ ಮಾಪನ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿವಾರ ವಿಶೇಷ ಅತಿಥಿಗಳಿಂದ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಬಹಳ ಸಂತಸದ ಸುದ್ದಿಯಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿ ಪಾಟೀಲ್ ಮತ್ತು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳು ಸ್ಪೂರ್ತಿಯ ನುಡಿಯನ್ನು ಹೇಳಿದರು.
ಈ ಸಂದರ್ಭದಲ್ಲಿ ಗ್ರಂಥಾಲಯ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ರವರು ನೀವು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದರೆ ನಿಮಗೆ ನನ್ನ ಬೆಂಬಲ ಯಾವತ್ತೂ ಇದ್ದೇ ಇರುತ್ತೆ ಎಂದು ಹೇಳಿದರು.
ಹಾಗೂ ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವ ಸನ್ಮಾನಿತರಾದ ವಿಶ್ವ ಪಾಟೀಲ್ ಯಲಗೋಡರವರು ನಾನು ಓದಿದ್ದಕ್ಕೂ ತುಂಬಾ ಸಾರ್ಥಕವೆನಿಸುತ್ತದೆ ಮತ್ತು ನಮ್ಮ ಜೇವರ್ಗಿಯಲ್ಲಿ ಇಷ್ಟೆಲ್ಲಾ ಶೈಕ್ಷಣಿಕವಾಗಿ ಬೆಳವಣಿಗೆ ಮತ್ತು ಬದಲಾವಣೆ ಆಗುತ್ತಿರುವುದು ನೋಡಿ ನನಗೆ ತುಂಬಾ ಖುಷಿಯಾಗಿದೆ ಎಂದು ಸಂತಸವಾಗಿ ಮನದಾಳದ ಮಾತುಗಳನ್ನು ಆಡಿದರು,ನಮ್ಮ ಉತ್ತಮ ಅಂಕಗಳನ್ನು ಗಮನಿಸಿದ ಗ್ರಂಥಾಲಯದ ನಿರ್ದೇಶಕರು,ರೈತ ಸಂಘದ ಜಿಲ್ಲಾ ಮತ್ತು ರಾಜ್ಯ ಕಾರ್ಯದರ್ಶಿಗಳಿಗೆ ಹಾಗೂ ನನ್ನೆಲ್ಲಾ ಆತ್ಮೀಯರಿಗೆ ಚಿರ ಋಣಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿ ಪಾಟೀಲ್,ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಗುರುನಾಥ ರೆಡ್ಡಿ,ಸಿದ್ದೇಶ್ವರ ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ಹಾಗೂ ಸಿದ್ದಣ್ಣ,ಅಂಬ್ರೇಶ್,ಯಲ್ಲಮ್ಮ,ವಿನಾಯಕ,
ಅನೀಲ,ನಾಗರಾಜ,ಭೀಮಾಶಂಕರ,ಗುರು ಮತ್ತು ಸ್ಪರ್ಧಾ ಆಕಾಂಕ್ಷಿಗಳೆಲ್ಲರೂ ಉಪಸ್ಥಿತರಿದ್ದರು.
ವರದಿ:ಚಂದ್ರಶೇಖರ ಪಾಟೀಲ್