ಯಾದಗಿರಿ ಶಹಾಪುರ ನಗರಸಭೆ ಸಿಬ್ಬಂದಿಯವರು ವಾರಸುದಾರರಿಲ್ಲದ ಶವ ಸಂಸ್ಕಾರಕ್ಕೆ ನೇರವೇರಿಸುತ್ತಿದ್ದರೂ ಆದರೆ ಇಂದು ಶ್ರೀಮಂತ ಬಡವರು ಎನ್ನದೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಹಕಾರಿಯಾಗಲೆಂದು ನಗರಸಭೆ ಆಡಳಿತ ಇಂದು 15 ನೇಯ ಹಣಕಾಸು ಯೋಜನೆ 2022-23 ಅನುದಾನದ ಅಂದಾಜು 13.50 ಲಕ್ಷ ರೂ ವೆಚ್ಚದಲ್ಲಿ ಮುಕ್ತಿ ವಾಹನವನ್ನು ರಾಜ್ಯದ ಸಣ್ಣ ಕೈಗಾರಿಕೆ ಶರಣಬಸಪ್ಪಗೌಡ ದರ್ಶನಾಪುರವರಿಂದ ಸಮರ್ಪಣೆಯಾಗಿದೆ ಅತ್ಯಂತ ಶೃಂಗಾರವಾದ ಮಂಟಪ ಹೊಂದಿದ ಈ ಮುಕ್ತಿ ವಾಹನ ಸಂಸ್ಕಾರಕ್ಕೆ ಪೂರಕವಾಗಿದೆ.ಯಾದಗಿರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮುಕ್ತಿ ವಾಹನ ನಗರಸಭೆ ಆಡಳಿತಕ್ಕೆ ಒದಗಿಸಿದ್ದು ವಿಶೇಷ ಸಂಗತಿಯಾಗಿದೆ.
2021 – 22 ನೇಯ ಸಾಲಿನಲ್ಲಿ 15 ನೇಯ ಹಣಕಾಸು ಯೋಜನೆಯಲ್ಲಿ 22 ಲಕ್ಷ ರೂ ವೆಚ್ಚದಲ್ಲಿ ಸೆಪ್ಟಿಕ ಟ್ಯಾಂಕ್ ಕ್ಲೀನರ್ ಹಾಗೂ 2023 – 23 ನೇಯ ಸಾಲಿನಲ್ಲಿ 15 ನೇಯ ಹಣಕಾಸು ಯೋಜನೆಡಿಯಲ್ಲಿ ಮಿನಿ ಇಟಚಿ ಚರಂಡಿ ಸ್ವಚ್ಛಗೊಳಿಸಲು ಈ ವಾಹನ ಬಳಕೆಯಾಗಿಲ್ಲಿದೆ, ಈ ವಾಹನಗಳನ್ನು ಸಚಿವ ಶರಣಬಸಪ್ಪಗೌಡ ದರ್ಶನಪುರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರು, ಎಇಇ, ಜೈಇ, ಸೆನೆಟ್ರೀ ಇನ್ಸಪೆಕ್ಟರ್ ಸೇರಿದಂತೆ ನಗರಸಭೆ ಸಿಬ್ಬಂದಿಯವರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ