ಇಂಡಿ:ಯೋಗವನ್ನು ಅಭ್ಯಾಸ ಮಾಡುವ ಕಲೆಯು ವ್ಯಕ್ತಿಯ ಮನಸ್ಸು,ದೇಹ ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದು ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ಒಟ್ಟುಗೂಡಿಸುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್,ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ‘ಮನುಕುಲಕ್ಕಾಗಿ ಯೋಗ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಯೋಗಶಾಸ್ತ್ರದ ನಿರಂತರವಾದ ಅನುಷ್ಠಾನದಿಂದ ಮಕ್ಕಳಲ್ಲಿ ಉತ್ಸಾಹ,ಸಾಹಸ,ಧೈರ್ಯ,ಬುದ್ಧಿಶಕ್ತಿ, ಪರಾಕ್ರಮಗಳು ವರ್ಧಿಸಿ,ಮಾನವೀಯತೆಯನ್ನು ಉತ್ತೇಜಿಸುತ್ತದೆ.ಆಧ್ಯಾತ್ಮಿಕ,ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗವಾಗಿದೆ ಎಂದು ಹೇಳಿದರು ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ,
ಯೋಗದಿಂದ ಸಮಗ್ರ ವ್ಯಕ್ತಿತ್ವದ ಅಭಿವೃದ್ಧಿ ಸಾಧ್ಯ ಇದು ಭಾವನೆಗಳನ್ನು ಸಮತೋಲನಗೊಳಿಸುವ ಮತ್ತು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ಸ್ಥಾಪಿಸುವ ಪರಿಪೂರ್ಣ ಮಾರ್ಗವಾಗಿದೆ ಎಂದು ಹೇಳಿದರು.
ಕೆಜಿಎಸ್ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ,ಯುಬಿಎಸ್ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ,ಶಿಕ್ಷಕರಾದ ಎಸ್ ಎಂ ಪಂಚಮುಖಿ,ಎಸ್ ಆರ್ ಚಾಳೇಕಾರ,ಎಸ್ ಎಸ್ ಅರಬ,ಎಸ್ ಎಂ ಮಕಾನದಾರ, ಸುರೇಶ ದೊಡ್ಯಾಳಕರ,ಎಸ್ ಡಿ ಬಿರಾದಾರ, ವಿ ವೈ ಪತ್ತಾರ,ಜೆ ಎಂ ಪತಂಗಿ,ಎಸ್ ಬಿ ಕುಲಕರ್ಣಿ,ಸಾವಿತ್ರಿ ಸಂಗಮದ,ಎಸ್ ಎನ್ ಡಂಗಿ,ಜೆ ಸಿ ಗುಣಕಿ,ಎಸ್ ಎಚ್ ಮೈದರಗಿ, ಎನ್ ಬಿ ಚೌಧರಿ,ಎಸ್ ಪಿ ಪೂಜಾರಿ,ಎಂ ಎಂ ಪತ್ತಾರ,ಯಲ್ಲಮ್ಮ ಸಾಲೋಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಅರವಿಂದ್ ಕಾಂಬಳೆ ಇಂಡಿ